Get Updates
Get notified of breaking news, exclusive insights, and must-see stories!

ದೇಶದ ಹಿರಿಮೆ-ಗರಿಮೆ ಸಾರುವ ಆಲ್ಬಂ 'ದೇಸಿ ಸಿಂಚನ'

ಗಾಯಕಿ ಪದ್ಮಿನಿ ಓಕ್ ಮತ್ತು ಸಂಗಡಿಗರು ಹಾಡಿರುವ ದೇಶದ ಹಿರಿಮೆ-ಗರಿಮೆ ಸಾರುವ ಮ್ಯೂಸಿಕ್ ಆಲ್ಬಂ ‘ದೇಸಿ ಸಿಂಚನ’ ಧ್ವನಿಸುರುಳಿ ಲೋಕಾರ್ಪಣೆಯನ್ನು ಕೇಂದ್ರ ಸಚಿವ ಅನಂತಕುಮಾರ್ ಮಾಡಲಿದ್ದಾರೆ.

ಬೆಂಗಳೂರು, ಜೂನ್ 09: ದೇಶದ ಹಿರಿಮೆ-ಗರಿಮೆ ಸಾರುವ ಮ್ಯೂಸಿಕ್ ಆಲ್ಬಂ 'ದೇಸಿ ಸಿಂಚನ' ಜೂನ್ 10 ರಂದು ಸ್ವರಸಿಂಚನ ಕಲಾಬಳಗದಿಂದ ಲೋಕರ್ಪಣೆಗೊಳ್ಳಲಿದೆ.

ಗಾಯಕಿ ಪದ್ಮಿನಿ ಓಕ್ ಮತ್ತು ಸಂಗಡಿಗರು ಹಾಡಿರುವ 'ದೇಸಿ ಸಿಂಚನ' ಧ್ವನಿಸುರುಳಿ ಲೋಕಾರ್ಪಣೆ ಕಾರ್ಯಕ್ರಮ ಜೂನ್ 10 ಶನಿವಾರ ಬೆಳಗ್ಗೆ 9.30ಕ್ಕೆ ನಗರದ ಆರ್.ವಿ.ರಸ್ತೆಯ (ಲಾಲ್‍ಬಾಗ್ ಸಮೀಪ) ಆರ್.ವಿ.ಟೀಚರ್ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ಕೇಂದ್ರ ಸಚಿವ ಅನಂತಕುಮಾರ್ ರವರು ಧ್ವನಿಸುರಳಿಯನ್ನು ಬಿಡುಗಡೆ ಮಾಡಲಿದ್ದಾರೆ.

Swara Sinchana presents Desi Sinchana Music Album By Padmini Oak

ಯುವಸಮುದಾಯಕ್ಕೆ ಪ್ರೇರೇಪಣೆ ನೀಡಬಲ್ಲ ನಮ್ಮ ಭಾರತ ದೇಶದ ಹಿರಿಮೆ-ಗರಿಮೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ 'ದೇಸಿಸಿಂಚನ'ವೆಂಬ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಹೊರತರಲಾಗಿದೆ.

ಸ್ವರ ಸಿಂಚನ ಕಲಾ ಬಳಗದ (ಕರ್ನಾಟಕ ಕಲಾಶ್ರೀ ಆರ್ ವೆಂಕಟೇಶಮೂರ್ತಿ ಸ್ಮಾರಕ ಸಂಸ್ಥೆ ) 6ನೇ ವಾರ್ಷಿಕೋತ್ಸವಕ್ಕೆ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ರವರು ಚಾಲನೆ ನೀಡಲಿದ್ದಾರೆ.

ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥನಂದಜಿ ರವರ ದಿವ್ಯ ಸಾನಿಧ್ಯವಹಿಸುವ ಸಮಾರಂಭದಲ್ಲಿ ದೂರದರ್ಶನ ಕೇಂದ್ರದ ನಿರ್ದೇಶಕ ಡಾ. ಮಹೇಶ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ ನಾಗಪ್ಪ ಎಸ್.ಎಮ್., ಮತ್ತು ಹುಬ್ಬಳ್ಳಿಯ ವೇದವ್ಯಾಸ ಕೋ.ಆಪರೇಟಿವ್‍ನ ಉಪಾಧ್ಯಕ್ಷರಾದ ಲಕ್ಷ್ಮಣರಾವ್ ಓಕ್ ರವರು ಉಪಸ್ಥಿತರಿರುವರು. ವಿವರಗಳಿಗೆ : 95914 00488

ಸ್ವರಸಿಂಚನ ಕಲಾಬಳಗ: ಸಂಗೀತಕ್ಷೇತ್ರದಲ್ಲಿ ವಿಶಿಷ್ಟ ಕಾರ್ಯಕ್ರಮಗಳಿಂದ ಗಮನ ಸೆಳೆದಿರುವ ಸ್ವಯಂಸೇವಾ ಸಂಸ್ಥೆ. ಬೆಂಗಳೂರಿನ ಹಲವಾರು ವೃದ್ಧಾಶ್ರಮ, ಅನಾಥಾಶ್ರಮ, ಅಬಲಶ್ರಾಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ನೊಂದ ಮನಸ್ಸುಗಳನ್ನು ಸಂಗೀತದ ಮೂಲಕ ಸಂತೈಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ

'ವಂದೇ ಮಾತರಂ' ಎಂಬ ಭಜನಾ ತಂಡವನ್ನು ಕಟ್ಟಿ ರಾಜ್ಯಾದ್ಯಾಂತ ಹಲವಾರು ದೇವಸ್ಥಾನಗಳಲ್ಲಿ, ಜೈಲುಗಳಲ್ಲಿ, ಕಿದ್ವಾಯಿ, ನಿಮ್ಹಾನ್ಸ್‍ನಂತಹ ಆಸ್ಪತ್ರೆಗಳಲ್ಲಿನ ರೋಗಿಗಳ ಮನೋಲ್ಲಾಸಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+