ಬೈಕ್‌ಗೆ ಡಿಕ್ಕಿಯಾಗಿ ಎರಡು ಬಾರಿ ಪಲ್ಟಿ ಹೊಡೆದ ಎಸ್‌ಯುವಿ ಕಾರು : ನಾಲ್ವರು ಸಾವು
ಬೆಂಗಳೂರು, ಜೂನ್ 27: ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಎಸ್‌ಯುವಿ ಕಾರು ಎರಡು ಬಾರಿ ಪಲ್ಟಿ ಹೊಡೆದ ಪರಿಣಾಮ ಒಂಬತ್ತು ತಿಂಗಳ ಮಗು ಸೇರಿ 4 ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬಳ್ಳಾರಿ ರಸ್ತೆಯ ಕನ್ನಮಂಗಲ ಗೇಟ್ ಬಳಿ ಬುಧವಾರ ನಡೆದಿದೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ನಡೆದಿದ್ದು, ತಕ್ಷಣವೇ ಟ್ರಾಫಿಕ್ ಪೊಲೀಸರು ಬಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪರದಾಡುವಂತಾಯಿತು.

ಚಂದ್ರಶೇಖರ್(29), ಅನಿತಾ(40), ಮೋನಿಶಾ(19), ದಿವ್ಯಾ(22), ಲಕ್ಷ್ಮೀ(35), ಬಟ್ಟೆಪ್ಪ(53), ನಾರಾಯಣಪ್ಪ(35) ಎಸ್‌ಯುವಿಯಲ್ಲಿದ್ದರು. ಅಪಘಾತ ಸಂಜೆ 4.30ರ ಸುಮಾರಿಗೆ ನಡೆದಿದೆ, ಪಲ್ಸರ್ ಬೈಕ್ ಇನ್ನೋವಾ ಕಾರಿನ ಎದುರುಗಡೆ ಬಂದಿತ್ತು, ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದ, ತಕ್ಷಣವೇ ಹಿಂದಿದ್ದ ಎಸ್‌ಯುವಿ ಬೈಕಿಗೆ ಗುದ್ದಿದೆ, ಬಳಿಕ ಬ್ಯಾರಿಕೇಡ್‌ಗೆ ಗುದ್ದಿ ಎರಡು ಬಾರಿ ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಯಲಹಂಕದಲ್ಲಿ ಬೀಗರ ಊಟ ಮುಗಿಸಿಕೊಂಡು ಹಿಂದಿರುಗುತ್ತಿದ್ದರು ಎನ್ನಲಾಗಿದೆ.












Click it and Unblock the Notifications