ಸಂಶಯ ಪೀಡಿತ ಟೆಕ್ಕಿ ಪತಿಗೆ ಬುದ್ಧಿಕಲಿಸಲು ಪತ್ನಿ ಮಾಡಿದ್ದೇನು?
ಬೆಂಗಳೂರು, ಮೇ 22: ಬೇರೆಯವರೊಂದಿಗೆ ಪತ್ನಿ ಸಂಬಂಧ ಹೊಂದಿದ್ದಾಳೆ ಎನ್ನುವ ಸಂಶಯಕ್ಕೆ ಬಿದ್ದ ಪತಿ ಗೂಢಾಚಾರ್ಯ ಮಾಡಿ ಪತ್ನಿಯಿಂದ ಪೆಟ್ಟು ತಿಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರ ನಿವಾಸಿಯಾಗಿರುವ ಈ ದಂಪತಿ 2007ರಲ್ಲಿ ಮದುವೆಯಾಗಿದ್ದರು, ಇವರಿಗೆ ಓರ್ವ ಮಗ ಕೂಡ ಇದ್ದಾನೆ, ಆದರೆ ಪತ್ನಿಯ ಮೇಲೆ ಈತನಿಗೆ ಅತೀವವಾದ ಸಂಶಯವಿತ್ತು.ಹೀಗಾಗಿ ಮನೆಯಲ್ಲಿ 22 ಗೌಪ್ಯ ಕ್ಯಾಮರಾಗಳನ್ನು ಅಳವಡಿಸಿದ್ದ, ಖಾಸಗಿ ಡಿಟೆಕ್ಟೀವ್ ಸಂಸ್ಥೆಯ ನೆರವನ್ನು ಪಡೆದುಕೊಂಡಿದ್ದ, ಸಂಬಂಧಿಕರಿಂದಲೂ ಪತ್ನಿಯ ಚಲನಚಲನಗಳ ಮೇಲೆ ನಿಗಾ ಇರಿಸಿದ್ದ.
ಇದಲ್ಲದೆ ಪತ್ನಿಗೆ ಮೊಬೈಲ್ ನ್ನು ಉಡುಗೊರೆ ನೀಡುವ ನೆಪದಲ್ಲಿ ಗೂಢಾಚಾರ್ಯ ಆಪ್‌ಗಳನ್ನು ಮೊಬೈಲ್‌ನಲ್ಲಿ ಅಳವಡಿಸಿ ಪತ್ನಿಯ ಮೊಬೈಲ್‌ನ್ನು ಕೂಡ ಪರಿಶೀಲನೆ ನಡೆಸುತ್ತಿದ್ದ.ಆಕೆಯ ಚಾಟ್ ಹಾಗೂ ಇತರೆ ಮೊಬೈಲ್ ಕಾರ್ಯಾಚರಣೆಯನ್ನು ಆಪ್‌ಗಳ ಮೂಲಕ ಪರಿಶೀಲಿಸುತ್ತಿದ್ದ.

ಇದಲ್ಲದೆ ಮನೆಯಲ್ಲಿ ಅಳವಡಿಸಿದ್ದ ಗೌಪ್ಯ ಕ್ಯಾಮರಾಗಳ ಮೂಲಕ ದಿನಂಪ್ರತಿ ಹದ್ದಿನ ಕಣ್ಣಿಟ್ಟಿದ್ದ, ಈ ಹಂತದಲ್ಲಿ ಸಹೋದರಿಯ ಮಗನ ಜೊತೆ ಇರುವ ಒಂದು ಚಿತ್ರವನ್ನು ನೋಡಿ ಪತ್ನಿಗೆ ಸಂಬಂಧಕಟ್ಟಲು ಈ ಸಂಶಯ ಪೀಡಿತ ಟೆಕ್ಕಿ ಮುಂದಾಗಿದ್ದ, ಇದರಿಂದ ಕೋಪಗೊಂಡ ಪತ್ನಿ ಪುತ್ರನ ಕ್ರಿಕೆಟ್ ಬ್ಯಾಟ್‌ನಿಂದಲೇ ತಲೆಗೆ ಹೊಡೆದಿದ್ದಾಳೆ.ಆತನ ಹೊಲಿಗೆ ಹಾಕಲಾಗಿದ್ದು, ಪೊಲೀಸ್ ಠಾಣೆಯಗೆ ಪತ್ನಿಯ ವಿರುದ್ಧ ದೂರು ನೀಡಿದ್ದಾನೆ, ಪತ್ನಿ ತನ್ನನ್ನು ವಿರೂಪಗೊಳಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಇಬ್ಬರನ್ನು ಆಪ್ತ ಸಮಾಲೋಚನೆ ವಿಭಾಗಕ್ಕೆ ವರ್ಗಾಯಿಸಿದ್ದಾರೆ.
ಈ ಸಂಶಯಪೀಡಿತ ಪತಿಯೊಂದಿಗೆ ಜೀವಿಸಲು ಸಾಧ್ಯವಿಲ್ಲ ಎಂದು ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ಇನ್ನೊಂದು ವಿಪರ್ಯಾಸವೆಂದರೆ ಹಾಲಿ ಪತ್ನಿಯ ಅಕ್ಕನನ್ನು ಮದುವೆಯಾಗುವ ಉದ್ದೇಶದಿಂದ ಈಕೆಯ ಮನೆಗೆ ಹೋಗಿದ್ದ ಆದರೆ ಇವಳನ್ನು ನೋಡಿ ಅಕ್ಕನ ಬದಲು ತಂಗಿಯನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ, ಆಕೆಯ ವಿದ್ಯಾಭ್ಯಾಸ ಕಾರಣದಿಂದ ನಿರಾಕರಿಸಿದ್ದರು, ಆದರೂ ಮೂರು ವರ್ಷ ಕಾದು ಈಕೆಯನ್ನೇ ಆತ ವರಿಸಿದ್ದ.












Click it and Unblock the Notifications