ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆಗೆ ಸುರೇಶ್ ಕುಮಾರ್ ಮತ್ತೆ ಟಾಂಗ್!

|
Google Oneindia Kannada News

ಬೆಂಗಳೂರು, ನವೆಂಬರ್ 21: ರೈತರ ಪ್ರತಿಭಟನೆ ಕುರಿತು ನಿಖಿಲ್ ಕುಮಾರಸ್ವಾಮಿ ನೀಡಿದ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಿಖಿಲ್ ಕುಮಾರಸ್ವಾಮಿ ಮಾಧ್ಯಮದ ಜೊತೆ ಮಾತನಾಡುವಾಗ, ನಮಗೆ ಬಂದಿರುವ ಗುಪ್ತಚರ ವರದಿ ಪ್ರಕಾರ ಎಂದು ರೈತರ ಪ್ರತಿಭಟನೆ ಹಿಂದೆ ಬೇರೆ ಶಕ್ತಿಗಳ ಕೈವಾಡ ಇದೆ. ರೈತರು ಗೂಂಡಾಗಿರಿ ಮಾಡುವುದಿಲ್ಲ ಎಂದು ಹೇಳಿದ್ದರು.

ಇದಕ್ಕೆ ಬಿಜೆಪಿ ನಾಯಕ ಸುರೇಶ್ ಕುಮಾರ್, ನಿಖಿಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಗುಪ್ತಚರ ವರದಿ ಎಂದ ನಿಖಿಲ್ ಕುಮಾರಸ್ವಾಮಿಗೆ ಸುರೇಶ್ ಕುಮಾರ್ ತರಾಟೆಗುಪ್ತಚರ ವರದಿ ಎಂದ ನಿಖಿಲ್ ಕುಮಾರಸ್ವಾಮಿಗೆ ಸುರೇಶ್ ಕುಮಾರ್ ತರಾಟೆ

'ಗುಪ್ತಚರ ವರದಿ ಎನ್ನುವುದು ಅಷ್ಟು ಸಸ್ತಾ ಆಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿ ಅವರ 'ಅಧಿಕಾರ' ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು' ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದರು.

ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ ಬಳಿಕ ನಿಖಿಲ್ ಅವರ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ನಿಖಿಲ್ ಸರ್ಕಾರದ ಪ್ರತಿನಿಧಿಯಲ್ಲ. ಹೀಗಿರುವಾಗ ಗುಪ್ತಚರ ವರದಿ ಅವರ ಕೈಗೆ ಹೇಗೆ ಸಿಗಲು ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದರು.

 ಅನಿತಾ ಕುಮಾರಸ್ವಾಮಿಗೆ ಸುರೇಶ್ ಟ್ವೀಟಾಸ್ತ್ರ: ತರಹೇವಾರಿ ಪ್ರತಿಕ್ರಿಯೆ ಅನಿತಾ ಕುಮಾರಸ್ವಾಮಿಗೆ ಸುರೇಶ್ ಟ್ವೀಟಾಸ್ತ್ರ: ತರಹೇವಾರಿ ಪ್ರತಿಕ್ರಿಯೆ

ಇದಕ್ಕೆ ನಿಖಿಲ್ ತಾವು ಜೆಡಿಎಸ್‌ನ ಸಕ್ರಿಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಅವರ ಫೇಸ್‌ಬುಕ್ ಪೋಸ್ಟ್‌ಗೆ ಸುರೇಶ್ ಕುಮಾರ್ ಟ್ವಿಟ್ಟರ್‌ನಲ್ಲಿ ಅವರನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೇಳಿಕೆ ತಿರುಚಲಾಗಿದೆ

ಹೇಳಿಕೆ ತಿರುಚಲಾಗಿದೆ

ನಿಖಿಲ್ ಕುಮಾರಸ್ವಾಮಿ ಅವರ ಅಧಿಕಾರ ಏನು? ಅವರಿಗೆ ಗುಪ್ತಚರ ವರದಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗೆ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ಎಂಬ ಅಧಿಕಾರದಿಂದ ಈ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ರಾಜಕೀಯ ದುರುದ್ದೇಶಕ್ಕಾಗಿ ವಿರೋಧಪಕ್ಷಗಳು ತಿರುಚಿವೆ ಎಂದು ಆರೋಪಿಸಿದ್ದಾರೆ.

ನಾನು ಜೆಡಿಎಸ್ ಕಾರ್ಯಕರ್ತ

ನಾನು ಜೆಡಿಎಸ್‌ನ ಸಕ್ರಿಯ ಕಾರ್ಯಕರ್ತ ಎನ್ನುವುದನ್ನು ವಿರೋಧಪಕ್ಷಗಳು ಮರೆತಿವೆ. ಪಕ್ಷದ ಕಾರ್ಯಕರ್ತನಾಗಿ ನಮ್ಮ ಸರ್ಕಾರದ ವರ್ಚಸ್ಸನ್ನು ಹಾಳುಮಾಡಲು ವಿರೋಧಪಕ್ಷಗಳು ರಾಜಕೀಯ ಸಂಚುಗಳು ಮತ್ತು ಅನೈತಿಕ ಸಾಧನಗಳನ್ನು ಬಳಸುತ್ತಿರುವುದು ನನಗೆ ತಿಳಿದಿದೆ. ರಾಜಕೀಯ ಮೈಲೇಜ್‌ಗಾಗಿ ಕರ್ನಾಟಕದಲ್ಲಿನ ವಿರೋಧಪಕ್ಷಗಳು ಯಾವ ಹಂತಕ್ಕೂ ಹೋಗುತ್ತಾರೆ ಎನ್ನುವುದು ಸಾಮಾನ್ಯ ತಿಳಿವಳಿಕೆ ಎಂದು ನಿಖಿಲ್ ಹೇಳಿದ್ದಾರೆ.

ಅನಿತಾ ಕುಮಾರಸ್ವಾಮಿಗೆ ಸುರೇಶ್ ಕುಮಾರ್ 'ಭಲೇ' ಟ್ವೀಟ್!ಅನಿತಾ ಕುಮಾರಸ್ವಾಮಿಗೆ ಸುರೇಶ್ ಕುಮಾರ್ 'ಭಲೇ' ಟ್ವೀಟ್!

ಇಷ್ಟೊಂದು ಸಸ್ತಾ ಆಯ್ತೇ?

ನಿಖಿಲ್ ನೀಡಿದ ಪ್ರತಿಕ್ರಿಯೆಗೆ ಸುರೇಶ್‌ ಕುಮಾರ್ ಮತ್ತೊಂದು ಪ್ರಶ್ನೆ ಎಸೆದಿದ್ದಾರೆ. ಗುಪ್ತಚರ ವರದಿ ತನಗೆ ಸಿಕ್ಕಿರುವ ಕುರಿತು‌ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟೀಕರಣ ಹೀಗಿದೆ: ತಾನು ಮುಖ್ಯಮಂತ್ರಿಯ ಮಗನಾಗಿ ಹಾಗೆ ಹೇಳಿಲ್ಲ, ಜೆಡಿಎಸ್ ಕಾರ್ಯಕರ್ತನಾಗಿ ಹೇಳಿದ್ದು ಎಂದಿದ್ದಾರೆ. ಅಂದರೆ ಗುಪ್ತಚರ ವರದಿ ಪಕ್ಷದ ಕಾರ್ಯಕರ್ತರಿಗೂ ಸಿಗುವಷ್ಟು ಸಸ್ತಾ ಎಂದಂತಾಯ್ತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ನಿಖಿಲ್‌ಗೆ ತಿಳಿವಳಿಕೆ ನೀಡುವ ಸರದಿ

ದೇವೇಗೌಡರು ಮಗ ಕುಮಾರಸ್ವಾಮಿಯವರಿಗೆ ವಿವೇಚನೆಯಿಂದ ಮಾತನಾಡಬೇಕೆಂಬ ತಿಳುವಳಿಕೆ ನೀಡಬೇಕೆಂದು ಸಿದ್ದರಾಮಯ್ಯನವರು ಹೇಳಿದ್ದಾರಂತೆ. ಇದೀಗ ಕುಮಾರಸ್ವಾಮಿಯವರು ಮಗ ನಿಖಿಲ್ ಗೆ ತಿಳುವಳಿಕೆ ನೀಡುವ ಸರದಿ! ಎಂದು ಸುರೇಶ್ ಕುಮಾರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

 ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ? ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ?

English summary
BJP MLA Suresh Kumar questioned Nikhil Kumaraswamy again after he made clarification on his 'intelligence report' statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X