ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಗೂರು: ಸೂಪರ್‌ ಮಾರ್ಕೆಟ್‌ಗೆ ನುಗ್ಗಿ ದರೋಡೆ

By Ashwath
|
Google Oneindia Kannada News

robbery
ಬೆಂಗಳೂರು, ಜೂ.28: ಸೂಪರ್‌ಮಾರ್ಕೆಟ್‌ಗೆ ನುಗ್ಗಿದ ದುಷ್ಕರ್ಮಿಗಳು, ನೌಕರರ ಮೇಲೆ ಹಲ್ಲೆ ನಡೆಸಿ ಹಣ ಕಸಿದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೇಗೂರಿನ ಸೂಪರ್‌ ಮಾರ್ಕೆಟ್‌ನಲ್ಲಿ ಸೋಮವಾರ ಈ ಘಟನೆ ನಡೆದಿದ್ದು ನೌಕರರ ಮೇಲೆ ಹಲ್ಲೆ ನಡೆಸಿ 15 ಸಾವಿರ ರೂ ಕಸಿದು ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಈ ಹಿಂದೆಯೂ ಇದೇ ಅಂಗಡಿ ಮೇಲೆ ದಾಳಿ ಮಾಡಿದ್ದರು. 2013ರ ಡಿಸೆಂಬರ್‌ನಲ್ಲಿ ಕೂಡ ಮಳಿಗೆಗೆ ನುಗ್ಗಿ 50 ಸಾವಿರ ರೂ.ದೋಚಿದ್ದರು. ಆದರೆ, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ನೌಕರರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.[ನಟಿ ರಾಧಿಕಾ ಮನೆ ಕಳ್ಳತನ ಸ್ಕೆಚ್, ಜಸ್ಟ್ ಮಿಸ್!]

ಘಟನೆಯಲ್ಲಿ ಗಾಯಗೊಂಡ ವಹೀದ್ ಮತ್ತು ಏಳುಮಲೈ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡನೇ ಬಾರಿ ಈ ರೀತಿಯ ಘಟನೆಗಳು ಮರುಕಳಿಸಿದ್ದರಿಂದ ಮಳಿಗೆಯನ್ನು ಮುಚ್ಚಿ ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳುವುದಾಗಿ ಅಂಗಡಿ ಮಾಲೀಕ ನೌಷದ್‌ ಹೇಳಿದ್ದಾರೆ.

ಮಳಿಗೆಯಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳ ಚಲನವಲನಗಳು ಪತ್ತೆಯಾಗಿವೆ. ಕ್ಯಾಮೆರಾವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಹುಳಿಮಾವು ಪೊಲೀಸರು ಹೇಳಿದ್ದಾರೆ.

English summary
Supermarket in Begur shuts shop after repeated robberies. Attacked and robbed by an armed gang for the second time on Monday night, the supermarket owner has decided to wind up his business and return to his hometown in Kerala, leaving the residents of the locality in the lurch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X