ಸಿಬಿಐ ನಿರ್ದೇಶಕರ ಆಯ್ಕೆ ವಿಳಂಬಕ್ಕೆ ಕಾರಣವೇನು?
ಬೆಂಗಳೂರು, ನ. 30: 2 ಜಿ ತರಂಗಾಂತರ ಹಗರಣದ ವಿಚಾರದಲ್ಲಿ ಆಪಾದಿತರನ್ನು ಭೇಟಿಯಾದ ಆರೋಪ ಹೊತ್ತಿರುವ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿತ್ತು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಸಿಬಿಐ ನಿರ್ದೇಶಕರು ಹಗರಣದ ಆಪಾದಿತರನ್ನು ಭೇಟಿಯಾಗಿದ್ದಾರೆ ಎನ್ನುವುದು ಅವರ ಡೈರಿ ಮತ್ತು ವಿಶೇಷ ಅಭಿಯೋಜಕರ (ಎಸ್‌ಪಿಪಿ) ವರದಿಯಿಂದ ತಿಳಿದುಬಂದಿದೆ. ಆದರೆ ಕೇಂದ್ರ ಸರ್ಕಾರ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.[ಕೇಜ್ರಿವಾಲ್ ಡಿನ್ನರ್ ನಿಂದ 93 ಲಕ್ಷ ರೂ. ಸಂಗ್ರಹ]

ಕೇಂದ್ರ ಸರ್ಕಾರಕ್ಕೆ ನಿಜವಾದ ಜನಪರ ಕಾಳಜಿ ಇದ್ದಿದ್ದರೆ ಸಿನ್ಹಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾಗಿತ್ತು. ಈ ಪ್ರಧಾನಿಗೆ ಪತ್ರ ಸಹ ಬರೆದಿದ್ದೆ. ಆದರೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಸಿನ್ಹಾ ಅವಧಿ ಡಿಸೆಂಬರ್ ಮೊದಲ ವಾರ ಪೂರ್ಣಗೊಳ್ಳಲಿದ್ದು ಹೊಸ ನಿರ್ದೇಶಕರ ನೇಮಕ ಸಂಬಂಧ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಕಾಂಗ್ರೆಸ್ ಅತಿ ಹೆಚ್ಚು ಹಗರಣಗಳನ್ನು ಎದುರಿಸುತ್ತಿದ್ದು ಬಾಯಿ ಮುಚ್ಚಿಕೊಂಡು ಕುಳಿತಿದೆ. ಕೇಂದ್ರ ಸರ್ಕಾರವೂ ತೆಪ್ಪಗೆ ಕುಳಿತಿದೆ ಎಂದು ದೂರಿದರು.[ಕೇಜ್ರಿವಾಲ್ ಆಮ್ ಆದ್ಮಿಯನ್ನು ಅಧಿಕಾರಕ್ಕೆ ತರುತ್ತಾರಾ?]

ಮೋದಿ ಮೋಡಿ ಕೆಲಸ ಮಾಡಲ್ಲ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಭಾವಕ್ಕೆ ದೆಹಲಿ ಜನ ತಕ್ಕ ಉತ್ತರ ನೀಡಲಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ನಾಯಕರಲ್ಲ ಎಂಬುದು ಈಗಾಗಲೇ ಸಷ್ಟವಾಗಿದೆ ಎಂದು ಹೇಳಿದರು.












Click it and Unblock the Notifications