• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್ ಆ್ಯಪ್ ಗೆ ಲೋಗೋ ವಿನ್ಯಾಸ, ಹೆಸರು ಸೂಚಿಸಿ

|

ಬೆಂಗಳೂರು, ಫೆಬ್ರವರಿ 27 : ಸಾರ್ವಕನಿಕರ ಸುರಕ್ಷತೆ ಕುರಿತಾಗಿ ಕರ್ನಾಟಕ ಪೊಲೀಸರು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಗೆ ಸೂಕ್ತ ಹೆಸರು ಮತ್ತು ಲೋಗೋಗೆ ವಿನ್ಯಾಸದ ಮಾದರಿಯನ್ನು ತಿಳಿಸುವಂತೆ ಸಾರ್ವಜನಿಕರನ್ನು ಕೋರಲಾಗಿದೆ.

ತಾವು ಇರುವ ಸ್ಥಳ ಯಾವ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುತ್ತದೆ ಅಥವಾ ಹತ್ತಿರದ ಪೊಲೀಸ್‌ ಠಾಣೆ, ವಿಳಾಸ, ಪೊಲೀಸ್‌ ಸಂಪರ್ಕ ಸಂಖ್ಯೆ, ಇ ಮೇಲ್‌ ಐಡಿ, ನ್ಯಾವಿಗೇಷನ್‌ ಮಾರ್ಗದರ್ಶನ ಮುಂತಾದ ವಿವರ ಅಪ್ಲಿಕೇಷನ್ ನಲ್ಲಿ ಲಭಿಸಲಿದೆ. ಅದರ ಜತೆಗೆ ಪೊಲೀಸ್‌ ಸಲಹೆ-ಸೂಚನೆಗಳ ಕುರಿತು ನೋಟಿಫಿಕೇಷನ್ ಗಳು, ಅಪ್‌ಡೇಟ್‌ಗಳು, ನಾಪತ್ತೆಯಾದ ವ್ಯಕ್ತಿಗಳ ವಿವರಗಳನ್ನು ಕೂಡಾ ಅಪ್ಲಿಕೇಷನ್ ಅಪ್‌ಲೋಡ್‌ ಮಾಡಲಾಗುತ್ತದೆ.

ಸೂಕ್ತ ಲೋಗೊ ಹಾಗೂ ಹೆಸರು ಸೂಚಿಸುವವರಿಗೆ ನಗದು ಬಹುಮಾನ ಹಾಗೂ ಶ್ಲಾಘನೆ ಪ್ರಮಾಣಪತ್ರ ನೀಡಲಾಗುವುದು. ಮಹಿಳೆ ಹಾಗೂ ಮಕ್ಕಳ ಸುರಕ್ಷತೆ ಸೇರಿದಂತೆ ನಾಗರಿಕರಿಗೆ ನೆರವಾಗಲು ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ.

Suggest a name and logo for police app, win the prize

ಈ ಅಪ್ಲಿಕೇಷನ್ ನಿಂದ ತಾವು ಇರುವ ಸ್ಥಳದ ಸಹಿತ ತುರ್ತು ಸಂದೇಶಗಳನ್ನು ಪೊಲೀಸರಿಗೆ ಕಳುಹಿಸಬಹುದು. ಅಲ್ಲದೇ, ಈ ವಿಷಯವನ್ನು ತಮ್ಮ ಕುಟುಂಬ ಅಥವಾ ಆಪ್ತರು ಸೇರಿದಂತೆ ಐವರ ನಂಬರ್‌ಗಳಿಗೆ ತಿಳಿಸಬಹುದು.

ಘಟನೆಗಳ ಕುರಿತು ಮಾಹಿತಿ ನೀಡಲು ಸಂಬಂಧಪಟ್ಟ ಜಿಲ್ಲಾ ಪೊಲೀಸ್‌, ಕಮೀಷನರೇಟ್ ಸೇರಿದಂತೆ ರಾಜ್ಯದ ಎಲ್ಲ ಠಾಣೆಗಳಮಾಹಿತಿ ಇರಲಿದೆ.ಅಪ್ಲಿಕೇಷನ್ ನ ಗುರಿ ಮತ್ತು ಉದ್ದೇಶಗಳನ್ನು ಸೂಕ್ತ ರೀತಿಯಲ್ಲಿ ಮನಗಾಣಿಸುವ ಲೋಗೊ ಹಾಗೂ ಹೆಸರನ್ನು ಸೂಚಿಸಬೇಕು.

ಕ್ರಿಯೇಟಿವಿಟಿ ಹಾಗೂ ಸ್ಪರ್ಧೆಗಾಗಿ ಉತ್ತಮ ಲೋಗೊ ಬಿಡಿಸಿ ಹೆಸರು ಸೂಚಿಸಿ ಅದು ಆಯ್ಕೆಯಾದರೆ ನಗದು ಬಹುಮಾನ ಮತ್ತು ಇಲಾಖೆಯಿಂದ ಪ್ರಮಾಣಪತ್ರ ನೀಡಲಾಗುತ್ತದೆ. ಎರಡಕ್ಕೂ ಪ್ರತ್ಯೇಕವಾಗಿ ಬಹುಮಾನ ನೀಡಲಾಗುತ್ತದೆ. ಅಲ್ಲದೇ, ಶಾರ್ಟ್‌ಲಿಸ್ಟ್‌ ಆಗಿರುವ ಐವರಿಗೂ ಶ್ಲಾಘನೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಮಾರ್ಚ್‌ 15ರ ಒಳಗೆ ದೂ. 9480800123 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka police have developed an app to assist the women and child issues. Bu the police department now wanted an attractive name and logo for this app. Citizens can suggest the same and win attractive prize.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more