• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಟಿಡಿಗೆ ಸುಧಾಮೂರ್ತಿ ರಾಜೀನಾಮೆ ನೀಡಿದ್ದು ಸತ್ಯ: ಕಾರಣವೇನು?

|

ಬೆಂಗಳೂರು, ಜೂನ್ 12: ಇನ್ಫೋಸಿಸ್ ಪ್ರತಿಷ್ಠಾನದ ಚೇರ್ ಪರ್ಸನ್ ಸುಧಾಮೂರ್ತಿ ಅವರು ಟಿಟಿಡಿ(ತಿರುಪತಿ ತಿರುಮಲ ದೇವಸ್ಥಾನಮ್ಸ್) ಟ್ರಸ್ಟ್ ಬೋರ್ಡ್ ಗೆ ಜೂನ್ 06 ರಂದು ರಾಜೀನಾಮೆ ನೀಡಿದ್ದು ಸತ್ಯ ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಟಿಟಿಡಿ ಬೋರ್ಡ್ ಅಧ್ಯಕ್ಷರನ್ನೂ ಬದಲಾಯಿಸಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಜಗನ್ ರೆಡ್ಡಿ ಅವರ ಸಂಬಂಧಿ, ಮಾಜಿ ಸಮಸದ ವೈ ವಿ ಸುಬ್ಬಾ ರೆಡ್ಡಿ ಅವರನ್ನು ಬೋರ್ಡ್ ಚೇರ್ಮನ್ ಆಗಿ ನೇಮಿಸಲಾಗುತ್ತದೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಸುಧಾಮೂರ್ತಿ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಸುತ್ತೂರು ಸಾಮೂಹಿಕ ವಿವಾಹದಲ್ಲಿ ತಮ್ಮ ಸಿಂಪಲ್ ಮ್ಯಾರೇಜ್ ನೆನಪಿಸಿಕೊಂಡ ಸುಧಾಮೂರ್ತಿ

ಆದರೆ ಅದಕ್ಕೆ ಸ್ಪಷ್ಟನೆ ನೀಡಿರುವ ಸುಧಾಮೂರ್ತಿ, "ನನ್ನನ್ನು ಟಿಟಿಡಿ ಸದಸ್ಯರನ್ನಾಗಿ ನೇಮಿಸಿದ್ದು ಈ ಹಿಂದಿನ ಸರ್ಕಾರ. ಇದೀಗ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ನಾನು ಸದಸ್ಯಳಾಗಿ ಮುಂದುವರಿಯುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಹೊಸ ಸರ್ಕಾರಕ್ಕೂ ನನ್ನನ್ನು ಬೋರ್ಡ್ ಸದಸ್ಯಳನ್ನಾಗಿ ಮುಂದುವರಿಸುವ ಇಚ್ಛೆ ಇದ್ದರೆ ನಾನು ಸಂತೋಷದಿಂದ ಮತ್ತೆ ಬೋರ್ಡ್ ಗೆ ಸೇರುತ್ತೇನೆ" ಎಂದಿದ್ದಾರೆ.

ಮಧು ಕಿಶ್ವಾರ್ ಟ್ವೀಟ್

ಮಧು ಕಿಶ್ವಾರ್ ಟ್ವೀಟ್

ಸುಧಾಮೂರ್ತಿ ಅವರು ಟೀಟಿಡಿ ಬೋರ್ಡ್ ಗೆ ರಾಜೀನಾಮೆ ನೀಡಿದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಈ ಕುರಿತು ಉಪನ್ಯಾಸಕಿ ಮಧು ಕಿಶ್ವಾರ್ ಅವರು ಟ್ವೀಟ್ ಮಾಡಿ, "ಇದಕ್ಕೆ ಗೃಹಸಚಿವಾಲಯ ಹೇಗೆ ಅನುಮತಿ ನೀಡಿತು? ಸುಧಾ ಮೂರ್ತಿ ಅವರು ಟಿಟಿಡಿಗೆ ರಾಜೀನಾಮೆ ನೀಡಿದ್ದಾರೆ. ಜಗನ್ ತನ್ನ ಸಂಬಂಧಿ ಯೆಹೊವಾ ವಿನ್ಸೆಂಟ್ ಸುಬ್ಬಾರೆಡ್ಡಿ(ವೈವಿ ಸುಬ್ಬಾರೆಡ್ಡಿ) ಅವರನ್ನು ತಿರುಪತಿ ತಿರುಮಲ ಬೋರ್ಡ್ ನ ಚೇರ್ ಪರ್ಸನ್ ಆಗಿ ನೇಮಕ ಮಾಡಲು ಹೊರಟಿದ್ದಾರೆ. ಅತ್ಯಂತ ಶ್ರೀಮಂತ ಹಿಂದು ದೇವಾಲಯದಲ್ಲಿ ಕೂತು ಆಂಧ್ರದಲ್ಲಿ ಚರ್ಚ್ ಗಳನ್ನು ಹೆಚ್ಚಿಸಲು ಅವರು ನೆರವಾಗುತ್ತಾರೆ ಎಂದಿದ್ದಾರೆ.

ಸುಧಾಮೂರ್ತಿ ಸ್ಪಷ್ಟನೆ

ಸುಧಾಮೂರ್ತಿ ಸ್ಪಷ್ಟನೆ

"ನನ್ನನ್ನು ಟಿಟಿಡಿ ಬೋರ್ಡ್ ಗೆ ಸದಸ್ಯಳನ್ನಾಗಿ ನೇಮಿಸಿದ್ದು ಈ ಹಿಂದಿನ ಸರ್ಕಾರ. ಈಗ ಹೊಸ ಸರ್ಕಾರದಲ್ಲಿ ಆಮಂತ್ರಣವಿಲ್ಲದೆ ನಾನು ಸದಸ್ಯಳಾಗಗಿಯೇ ಮುಂದುವರಿಯುವುದು ಸರಿಯಲ್ಲ. ನನ್ನ ನಿರ್ಧಾರದಲ್ಲಿ ಯಾವುದೇ ರಾಜಕೀಯವಿಲ್ಲ. ಇದು ಒಂದು ಸೌಜನ್ಯದ ನಡೆ ಅಷ್ಟೆ. ಮುಂದಿನ ಟಿಟಿಡಿ ಚೇರ್ಮನ್ ಯಾರಾಗಲಿದ್ದಾರೆ ಎಂಬುದಕ್ಕೂ, ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ. ಹೊಸ ಸರ್ಕಾರ ನನ್ನನ್ನು ಮತ್ತೆ ಬೋರ್ಡ್ ಗೆ ಆಮಂತ್ರಿಸಿದರೆ ಸಂತೋಢದಿಂದ ಕೆಲಸ ಮಾಡುತ್ತೇನೆ. ಇಷ್ಟು ದಿನ ಟಿಟಿಡಿ ಬೋರ್ಡ್ ಸದಸ್ಯಳಾಗಿ ನನ್ನ ಅನುಭವ ಅವೀಸ್ಮರಣೀಯ" ಎಂದು ಸುಧಾಮೂರ್ತಿ ಹೇಳಿದ್ದಾರೆ.

ವೈರಲ್ ವಿಡಿಯೋ:ಕೊಡಗಿನ ಕಣ್ಣೀರಿಗೆ ಮಿಡಿದ ಇನ್ಫೋಸಿಸ್ ಸುಧಾಮೂರ್ತಿ

ಎರಡನೇ ಬಾರಿ ಸದಸ್ಯರಾಗಿದ್ದ ಸುಧಾಮೂರ್ತಿ

ಎರಡನೇ ಬಾರಿ ಸದಸ್ಯರಾಗಿದ್ದ ಸುಧಾಮೂರ್ತಿ

ಸುಧಾಮೂರ್ತಿ ಅವರನ್ನು ಟಿಟಿಡಿ ಸದಸ್ಯರನ್ನಾಗಿ ಫೆಬ್ರವರಿ 2017 ರಲ್ಲಿ ನೇಮಿಸಲಾಗಿತ್ತು. ಅದು ಕೇವಲ ಎರಡು ತಿಂಗಳ ಅವಧಿಗೆ. ನಂತರ 2018 ರಲ್ಲಿ ಮತಗ್ತೆ ಅವರನ್ನು ಸದಸ್ಯರನ್ನಾಗಿ ಮರುನೇಮಕ ಮಾಡಲಾಯ್ತು. ರಾಜಕೀಯ ನಿವೃತ್ತಿ ಪಡೆದ ಮತ್ತು ರಾಜ್ಯ ರಾಜಕಾರಣದಲ್ಲಿ ವಿಫಲರಾದವರಿಗಾಗಿ ಟಿಟಿಡಿ ಬೋರ್ಡ್ ಸೀಮಿತವಾಗಿದೆ ಎಂಬ ಟೀಕೆ ಹಬ್ಬಿದ್ದ ಸಮಯದಲ್ಲಿ ಆ ಬೋರ್ಡ್ ನ ಘನತೆಯನ್ನು ಹೆಚ್ಚಿಸಲು ಮುಂದಾಗಿದ್ದ ಅಂದಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸುಧಾಮೂರ್ತಿ ಅವರನ್ನು ಬೋರ್ಡ್ ಗೆ ನೇಮಿಸುವ ನಿರ್ಧಾರ ತೆಗೆದುಕೊಂಡಿದ್ದರು.

ಮುಂದಿನ ಚೇರ್ಮನ್ ಯಾರು?

ಮುಂದಿನ ಚೇರ್ಮನ್ ಯಾರು?

ಅತಗ್ಯಂತ ಶ್ರೀಮಂತ ದೇಗುಲವಾದ ತಿರುಪತಿ ತಿರುಮಲ ದೇವಾಲಯದ ಟಿಟಿಡಿ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ಅದರದೇ ಆದ ಮಹತ್ವವಿದೆ. ಇದೀಗ ಈ ಹುದ್ದೆಗೆ ಏರುವವರು ಯಾರು ಎಂಬ ಪ್ರಶ್ನೆ ಎದ್ದಿದ್ದು, ಜಗನ್ ಸಂಬಮಧಿ ವ್ಐವಿ ಸುಬ್ಬಾರೆಡ್ಡಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಅವರು ಕ್ರಿಶ್ಚಿಯನ್ ಆಗಿದ್ದು, ಅವರಿಗೆ ಹಿಂದು ದೇವಾಲಯದ ಆಡಳಿತ ನೀಡುವುದು ಎಷ್ಟು ಸರಿ ಎಂಬ ಬಗ್ಗೆ ಚರ್ಚೆ ಎದ್ದಿದೆ. ಆದರೆ ಅವರು ಕ್ರೈಸ್ತರಲ್ಲ ಎಂದೂ ಕೆಲವು ವರದಿಗಳು ಹೇಳುತ್ತಿವೆ.

ಇತ್ತ ನಟ ಮೋಹನ್ ಬಾಬು ಅವರನ್ನು ಈ ಹುದ್ದೆಗೆ ನೇಮಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ.

English summary
Infosys Foundation chairperson Sudha Murty resigns from TTD( Tirupati Tirumala Devasthanams) Trust Board On June 6, after new government come to power. She gives reson for her decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more