ಮೋದಿ ಸಾಮಾಜಿಕ ಜಾಲತಾಣ ಬಳಸೋ ಅವಕಾಶ ಸುಧಾ ಮೂರ್ತಿಗೆ ಸಿಗುತ್ತಾ?

ಪ್ರಧಾನಿ ನರೇಂದ್ರ ಮೋದಿ ಮಹಿಳಾ ದಿನಾಚರಣೆಯ ವಿಶೇಷವಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ವಹಿಸುವ ಅವಕಾಶವನ್ನು ಒಬ್ಬ ಮಹಿಳೆಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಸಾಧಕ ಮಹಿಳೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ಒಂದು ದಿನ ಬಳಸುವ ಅಧಿಕಾರಿ ಕೊಟ್ಟು, ಅವರಿಗೆ ಗೌರವ ನೀಡುವ ನಿರ್ಧಾರವನ್ನು ಮೋದಿ ಮಾಡಿದ್ದಾರೆ.

#sheinspiresus ಎಂಬ ಹ್ಯಾಶ್ ಟ್ಯಾಗ್ ಬಳಸಿ ಹೆಸರು ಸೂಚಿಸುವಂತೆ ಮೋದಿ ತಿಳಿಸಿದ್ದಾರೆ. ಜನರು ಕಂಡ, ಅವರಿಗೆ ತಿಳಿದಿರುವ ಮಹಿಳಾ ಸಾಧಕರ ಬಗ್ಗೆ ತಿಳಿಸುವಂತೆ ಹೇಳಿದ್ದಾರೆ. ಇದೀಗ ಈ ಹ್ಯಾಶ್ ಟ್ಯಾಗ್ ಸೋ‍ಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಎಲ್ಲರೂ ತಮ್ಮ ಪ್ರಕಾರ ಸ್ಫೂರ್ತಿ ನೀಡುವ ಮಹಿಳೆಯ ಹೆಸರನ್ನು ಸೂಚಿಸುತ್ತಿದ್ದಾರೆ. ಅದರಲ್ಲಿಯೂ ಕನ್ನಡದ ಮಹಿಳಾ ಸಾಧಕಿ ಸುಧಾಮೂರ್ತಿ ಅವರ ಹೆಸರು ಜೋರಾಗಿ ಕೇಳಿ ಬರುತ್ತಿದೆ.

ಸುಧಾಮೂರ್ತಿ ಹೆಸರು ಟ್ರೆಂಡ್

ಸುಧಾಮೂರ್ತಿ ಹೆಸರು ಟ್ರೆಂಡ್

#sheinspiresus ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಸುಧಾಮೂರ್ತಿ ಅವರ ಹೆಸರು ಟ್ರೆಂಡ್ ಆಗಿದೆ. ಟ್ವಿಟ್ಟರ್ ನಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಹೆಸರು ಹೆಚ್ಚು ಹರಿದಾಡುತ್ತಿದೆ. ಸುಧಾಮೂರ್ತಿ ಅವರ ಸಾಮಾಜಿಕ ಕೆಲಸಗಳು, ಸರಳತೆ, ಸಾಧನೆ ಸಾವಿರಾರೂ ಜನರಿಗೆ ಸ್ಫೂರ್ತಿ ನೀಡಿವೆ ಎಂದಿದ್ದಾರೆ.

ಸುಧಾಮೂರ್ತಿಗೆ ಕನ್ನಡಿಗರ ಮೆಚ್ಚಿಗೆ

ಸುಧಾಮೂರ್ತಿಗೆ ಕನ್ನಡಿಗರ ಮೆಚ್ಚಿಗೆ

ಮೋದಿರವರ ಟ್ವಿಟ್ಟರ್ ಅಭಿಯಾನದಲ್ಲಿ ಅನೇಕರು ಸುಧಾಮೂರ್ತಿ ಹೆಸರನ್ನು ಸೂಚಿಸುತ್ತಿದ್ದಾರೆ. ಅದರಲ್ಲಿ ಕನ್ನಡಿಗರು ಹೆಚ್ಚಿದ್ದಾರೆ. ಕನ್ನಡ ನಾಡಿನ ಸಾಧಕ ಮಹಿಳೆಗೆ ಈ ಗೌರವ ಸಿಗಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. #sheinspiresus ನಲ್ಲಿ ಸುಧಾಮೂರ್ತಿ ಅವರ ಹೆಸರನ್ನು ಹೆಚ್ಚಿನ ಕನ್ನಡಿಗರು ಟ್ರೆಂಡ್ ಮಾಡುತ್ತಿದ್ದಾರೆ.

ಯಾಕೆ ಸುಧಾ ಮೂರ್ತಿ?

ಯಾಕೆ ಸುಧಾ ಮೂರ್ತಿ?

ಸುಧಾಮೂರ್ತಿ ಹೆಸರನ್ನು ಸೂಚಿಸಿರುವ ಅವರು ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಸುಧಾ ಮೂರ್ತಿ ಸರಳತೆ, ಅವರ ಸಾಮಾಜಿಕ ಕೆಲಸಗಳು ಎಲ್ಲರಿಗೂ ಸ್ಫೂರ್ತಿ. ಅವರ ಜೀವನ ಅನೇಕರಿಗೆ ರೋಲ್ ಮಾಡೆಲ್ ಆಗಿದೆ. ಹೀಗಾಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆ ಬಳಸುವ ಅರ್ಹತೆ ಹೊಂದಿದ್ದಾರೆ ಎಂದು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.

ಇತರ ಸಾಧಕರ ಹೆಸರುಗಳು

ಇತರ ಸಾಧಕರ ಹೆಸರುಗಳು

ಸುಧಾ ಮೂರ್ತಿ ಜೊತೆಗೆ ಭಾರತದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡ ಹೋದ ಕೆಲವು ಸಾಧಕರ ಹೆಸರನ್ನು ನೆಟ್ಟಿಗರು ಸೂಚಿಸಿದ್ದಾರೆ. ಈ ಪೈಕಿ ಕಿರಣ್ ಬೇಡಿ, ಪಿ ವಿ ಸಿಂಧು, ಸೈನಾ ನೆಹವಾಲ್, ಮೋರಿ ಕೋಮ್, ಸಾಲು ಮರದ ತಿಮ್ಮಕ್ಕ, ಮಿಷನ್ ಮಂಗಲ್ ಮಹಿಳಾ ವಿಜ್ಞಾನಿಗಳ ಹೆಸರುಗಳು ಪ್ರಮುಖವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+