Suburban rail get Boost: ₹4,500 ಕೋಟಿ ಒಪ್ಪಂದದಿಂದ ರೈಲ್ವೆ ಯೋಜನೆಗೆ ಸಿಕ್ತು ಉತ್ತೇಜನ

ಬೆಂಗಳೂರು, ಡಿಸೆಂಬರ್ 18: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಉಪನಗರ ರೈಲು ಯೋಜನೆ ಕಾಮಗಾರಿ ಯೋಜನೆಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ. ಈ ಯೋಜನೆ (Bengaluru sub urban rail project) ಅನುಷ್ಠಾನಗೊಳಿಸಲು

ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ (K-RIDE) ಇತ್ತೀಚೆಗೆ 4,500 ಕೋಟಿ ರೂಪಾಯಿಗಳ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ.

Suburban Rail: K-RIDE Inks Loan Agreement With KfW to Avail Rs 4,500 Crore, Boost for Project, MB Patil

ಬೆಂಗಳೂರು ಉಪನಗರ ರೈಲು ಯೋಜನೆಯು ಕೆ-ರೈಡ್ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ಜಂಟಿಯಾಗಿ ನಡೆಸಲಿವೆ. ಜರ್ಮನಿ ಮೂಲದ ಕೆಎಫ್‌ಡಬ್ಲ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಈ ಯೋಜನೆಗಾಗಿ ಸಾಲ ಒದಗಿಸಲಿದೆ. ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ ಮತ್ತು ರಾಜ್ಯದ ಸರ್ಕಾರದ ಅಧಿಕಾರಿಗಳು ಜರ್ಮನ್ ಬ್ಯಾಂಕ್‌ ಜೊತೆಗೆ ಸದರಿ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಈ ಉಪನಗರ ರೈಲು ಯೋಜನೆಗಾಗಿ ಒಟ್ಟು 15,767 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈ ಹಣವನ್ನು ಪೈಕಿ ಹಲವು ಹಣಕಾಸು ಸಂಸ್ಥೆಗಳಿಂದ 7,438 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುತ್ತಿದೆ ಎಂದು ಅವರು ವಿವರಿಸಿದರು.

ನಮ್ಮ ಮೆಟ್ರೋದಂತೆ BSRP ಪರಿಸರಸ್ನೇಹಿ ಸಾರಿಗೆ

ಈ ಯೋಜನೆಯು ಕೆ-ರೈಡ್‌ ಮತ್ತು ಭಾರತಿಯ ರೈಲ್ವೆ ಸಚಿವಾಲಯದಿಂದ ಜಾರಿಗೆ ತರಲಾಗುತ್ತಿದೆ. ಉಪನಗರ ರೈಲು ಯೋಜನೆಯು ನಮ್ಮ ಮೆಟ್ರೋ (Benglauru namma metro) ಸಾರಿಗೆಯಂತೆಯೇ ಇದು ಪರಿಸರ ಸ್ನೇಹಿ ಸಾರಿಗೆ ಆಗಿದೆ. ಬೆಂಗಳೂರು ನಗರ ಜಿಲ್ಲೆ ಮತ್ತು ಸುತ್ತಮುತ್ತಲಿನ ಜನರ ಸಂಚಾರಕ್ಕೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಇದು ಸಾಕಷ್ಟು ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು.

Suburban Rail: K-RIDE Inks Loan Agreement With KfW to Avail Rs 4,500 Crore, Boost for Project, MB Patil

ಪಾರಿಜಾತ, ಕನಕ, ಸಂಪಿಗೆ ಹಾಗು ಮಲ್ಲಿಗೆ ಎಂಬ ನಾಲ್ಕು ಕಾರಿಡಾರ್‌ಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ. ''ಸಂಪಿಗೆ ಕಾರಿಡಾರ್'' ಕೆಂಪೇಗೌಡ ರೈಲು ನಿಲ್ದಾಣ ಮತ್ತು ದೇವನಹಳ್ಳಿ ನಡುವೆ - 41.4 ಕಿಮೀ ಯೋಜನೆ ಇದಾಗಿದೆ. ಇದರಲ್ಲಿ 15 ನಿಲ್ದಾಣಗಳು ಬರುತ್ತವೆ.

ನಾಲ್ಕು ಕಾರಿಡಾರ್ ಮಾಹಿತಿ

ಬೈಯಪ್ಪನಹಳ್ಳಿ ಟರ್ಮಿನಲ್ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಯೋಜನೆ ಕಾರಿಡಾರ್‌ಗೆ 'ಮಲ್ಲಿಗೆ' ಎಂದು ಹೆಸರಿಡಲಾಗಿದೆ. ಇದು ಒಟ್ಟು 25 ಕಿಮೀ ವ್ಯಾಪ್ತಿ ಹೊಂದಿದ್ದು, ಈ ಮಾರ್ಗದಲ್ಲಿ 14 ನಿಲ್ದಾಣಗಳು ಬರುತ್ತವೆ. ಕೆಂಗೇರಿ ಮತ್ತು ವೈಟ್‌ಫೀಲ್ಡ್ ನಡುವಿನ 'ಪಾರಿಜಾತ' ನಿಲ್ದಾಣವಾಗಿದ್ದು, ಇದ 35.52 ಕಿಮೀ ಮಾರ್ಗವನ್ನು ಹೊಂದಿದ್ದು, ಒಂಬತ್ತು ನಿಲ್ದಾಣಗಳಿವೆ. ಇನ್ನೂ 'ಕನಕ' ಕಾರಿಡಾರ್ ವ್ಯಾಪ್ತಿಯ 46.24 ಕಿಮೀ ನಲ್ಲಿ 19 ನಿಲ್ದಾಣಗಳಿವೆ ಎಂದು ಅವರು ತಿಳಿಸಿದರು.

ಕಾಮಗಾರಿ ವಿಳಂಬ

ಕೆ-ರೈಡ್ ಸಂಸ್ಥೆಯುವ ಯೋಜನೆ ವಿಳಂಬದಿಂದಾಗಿ ಕೆಲವು ಬಾರಿ ಟೀಕೆಗಳನ್ನು ಎದುರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ 40 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಸದ್ಯ ಕಾಮಗಾರಿಗಳು ವಿವಿಧ ಕಾರಣದಿಂದ ಮಂದಗತಿಯಲ್ಲಿ ಸಾಗಿದೆ. ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರ ಗೈರು ಹಾಜರಿಯಿಂದ ಸಾರಿಗೆ ಸಂಸ್ಥೆಗೂ ಹೊಡೆತ ಬಿದ್ದಿದೆ. ಉಪನಗರ ರೈಲು ಕಾಮಗಾರಿ ವಿಳಂಬವಾಗಲು ಇದು ಪ್ರಮುಖ ಕಾರಣ ಎಂಬುದು ಸಾರಿಗೆ ಕಾರ್ಯಕರ್ತರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+