• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ 2 ಸಾವಿರ ಸ್ಲಂಗಳು, ಸರ್ಕಾರ ಹೇಳೋದು 597 ಏಕೆ?

By Nayana
|

ಬೆಂಗಳೂರು, ಜು.23: ಬೆಂಗಳೂರು ಕೊಳಗೇರಿಗಳ ಕುರಿತು ಖಾಸಗಿ ಸಂಸ್ಥೆಯೊಂದು ಸ್ಯಾಟಲೈಟ್‌ ಸಮೀಕ್ಷೆ ನಡೆಸಿದ್ದು ಅದರಿಂದ ಬೆಂಗಳೂರಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಸ್ಲಮ್‌ಗಳಿರುವ ಮಾಹಿತಿ ಬಹಿರಂಗಗೊಂಡಿದೆ. ಆದರೆ ಸರ್ಕಾರದ ದಾಖಲೆಗಳು ಬೆಂಗಳೂರಲ್ಲಿ 597 ಸ್ಲಂಗಳು ಮಾತ್ರ ಇವೆ ಎಂದು ತಿಳಿಸುತ್ತದೆ.

ಆದರೆ ಸರ್ಕಾರದ ವರದಿಗಗೂ ಖಾಸಗಿ ಸಂಸ್ಥೆಯ ವರದಿಗೂ ಇಷ್ಟು ಅಜಗಜಾಂತರ ವ್ಯತ್ಯಾಸವೇಕೆ ಎನ್ನುವುದನ್ನು ನೋಡಬೇಕಿದೆ. ಡ್ಯೂಕ್‌ ಯೂನಿವರ್ಸಿಟೀಸ್‌ ಸ್ಯಾನ್‌ಫರ್ಡ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಪಾಲಿಸಿ ಸಮೀಕ್ಷೆ ಪ್ರಕಾರ ಬೆಂಗಳೂರಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಸ್ಲಂಗಳಿವೆ.

ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬಿಬಿಎಂಪಿ ಹಾಗೂ ಮುನ್ಸಿಪಲ್‌ ಕಾರ್ಪೊರೇಟನ್‌ಗಳು ಈ ಸ್ಲಂಗಳನ್ನು ನೋಡಿಕೊಳ್ಳುತ್ತವೆ ಆದರೂ ಕೂಡ ಅವುಗಳಿಗೆ ಎಷ್ಟು ಸ್ಲಂಗಳಿವೆ ಎಂಬ ಮಾಹಿತಿ ಇಲ್ಲ, ಜಯನಗರದಲ್ಲಿರುವ ಗುಲ್ಬರ್ಗಾ ಕಾಲೊನಿ ಈ ಮೂರು ಸಂಸ್ಥೆಗಳ ದಾಖಲೆಯಲ್ಲಿದೆ.

ಇನ್ನು ಅದೇ ಚಿಕ್ಕಬೆಳ್ಳಂದೂರಿನಲ್ಲಿರುವ ಜನತಾ ಕಾಲೊನಿ ಕುರಿತು ಯಾವ ದಾಖಲೆಯಲ್ಲೂ ಉಲ್ಲೇಖವಿಲ್ಲ ಹೀಗೆ ಎಷ್ಟೋ ಕಾಲೊನಿಗಳ ಕಡೆಗೆ ಸರ್ಕಾರವು ಗಮನ ಹರಿಸುತ್ತಿಲ್ಲ. ಡ್ಯೂಕ್‌ ಯೂನಿವರ್ಸಿಟಿಯು 135 ಸ್ಲಂಗಳಿಗೆ ಭೇಟಿ ನೀಡಿ ಅಲ್ಲಿರುವ 4500 ಸದಸ್ಯರಿಂದ ಮಾಹಿತಿಗಳನ್ನು ಕಲೆ ಹಾಕಿದೆ.

ಐಐಎಂ ಬೆಂಗಳೂರು ಕೂಡ ಈ ಅಧ್ಯಯನದ ಒಂದು ಭಾಗವಾಗಿದೆ. ಈ ಸಮೀಕ್ಷೆಗೆ ಬೇಕಾದ ಹಲವು ಸಹಾಯಗಳನ್ನು ಇದು ಮಾಡಿದೆ. ಈ ಸಮೀಕ್ಷೆಯಲ್ಲಿ ಟಾರ್ಪಲ್‌, ಕಂಬಗಳು ಹಾಗೂ ವಸತಿ ವ್ಯಾಪ್ತಿಯನ್ನು ಆಧರಿಸಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಈ ಸ್ಲಮ್‌ಗಳು ಸರ್ಕಾರಕ್ಕೆ ಆದಾಯವನ್ನು ತರಬಲ್ಲದು.

ಎಡ್ಗರ್‌ ಟಿ ಥಾಮ್ಸನ್‌ನ ರಾಜಕೀಯ ಶಾಸ್ತ್ರದ ಮುಖ್ಯಸ್ಥರಾದ ಅನಿರುದ್ಧ ಕೃಷ್ಣ ಹೇಳುವ ಪ್ರಕಾರ ಈ ಸ್ಲಮ್‌ಗಳಿಗೆ ಹಳೆಯ ನಿಯಮಗಳನ್ನು ಅನುಸರಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಅವರ ವ್ಯಾಪ್ತಿ ಬದಲಾಗುತ್ತಿದೆ ನಿರ್ದಿಷ್ಟ ಜಾಗ ದೊರೆಯುತ್ತಿಲ್ಲ, ಹೀಗಿರುವಾಗ ಅವರಿಗೆ ನಿರ್ದಿಷ್ಟ ನೆಲೆಯನ್ನು ಕಲ್ಪಿಸಿ ಜತೆಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅವರಿಗೆ ತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಬೇಕು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Using satellite imagery and machine learning, a multi-agency study on the state of slums in Bengaluru has uncovered startling discrepancies in Data: The city has over 2 thousand slums and the government recognise only 597.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more