25,00,000 ರೂಪಾಯಿ ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಬಂಪರ್... Scholarship 2025

ಶಿಕ್ಷಣ ಪಡೆಯುವುದೇ ದೊಡ್ಡ ಸಾಹಸ ಆಗಿದೆ, ಎಲ್‌ಕೆಜಿ & ಯುಕೆಜಿ ಮಕ್ಕಳಿಗೂ ಲಕ್ಷ ಲಕ್ಷ ರೂಪಾಯಿ ಹಣ ಕೊಟ್ಟು ಓದಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಇದೀಗ ಕನಸಿನ ಮಾತೇ ಆಗುತ್ತಿದೆ. ಅದರಲ್ಲೂ ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಸವಾಲು ಎದುರಾಗುತ್ತಿದ್ದು, ಬಡವರು & ಮಧ್ಯಮ ವರ್ಗದವರು ಸಾಕಷ್ಟು ಚಿಂತೆ ಮಾಡುವ ವಾತಾವರಣ ಇದೆ. ಇಂತಹ ಸಮಯದಲ್ಲೇ, 25,00,000 ರೂಪಾಯಿ ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಬಂಪರ್...

ವಿದೇಶದಲ್ಲಿ ಓದಬೇಕು, ಉನ್ನತ ಶಿಕ್ಷಣ ಪಡೆಯಬೇಕು ಅನ್ನೋದು ಅನೇಕರ ಆಸೆ. ಆದರೆ, ಹೀಗೆ ಹೊರ ದೇಶದಲ್ಲಿ ಓದಲು ದುಡ್ಡಿನ ಸಮಸ್ಯೆ ಸಾಕಷ್ಟು ಜನರಿಗೆ ಕಾಡುತ್ತದೆ. ಆದರೆ ಇದೀಗ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಓದಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಅರ್ಜಿ ಕರೆಯಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪಡೆಯಲು ಮುಂದೆ ಓದಿ.

Students Scholarship Of 2025 Application Called At Karnataka

ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯದ ವ್ಯವಸ್ಥೆ

ಹೌದು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಈಗ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಸೃಷ್ಟಿ ಮಾಡುತ್ತಿದೆ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಬೆಂಗಳೂರು ಉತ್ತರ ಜಿಲ್ಲೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಸಾಲ ಸೌಲಭ್ಯ ಒದಗಿಸುವ ಬಗ್ಗೆ ಮಾಹಿತಿ ನೀಡಲಾಗಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದೇಶಿ ವಿವಿಗಳಲ್ಲಿ ಪಿಎಚ್‌ಡಿ ಪೇಸ್ಟ್ ಡಾಕ್ಟಲ್ & ಮಾಸ್ಟರ್ ಡಿಗ್ರಿ ಇದರಲ್ಲಿ ಇಂಜಿನಿಯರಿಂಗ್ & ಟೆಕ್ನಾಲಜಿ, ಮ್ಯಾನೇಜ್ ಮೆಂಟ್, ಕಾಮರ್ಸ್ ಹಾಗೂ ಸೈನ್ಸ್ & ಟೆಕ್ನಾಲಜಿ, ಅಗ್ರಿಕಲ್ಚರ್ & ಅಲೈಡ್ ಸೈನ್ಸಸ್/ ಟೆಕ್ನಾಲಜಿ, ಮೆಡಿಸಿನ್, ಹುಮ್ಯಾನಿಟೀಸ್ & ಸೋಸಿಯಲ್ ಸೈನ್ಸಸ್ ವಿಭಾಗದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವವರು ಸಾಲ ಸೌಲಭ್ಯ ಪಡೆಯುವ ಅವಕಾಶ ಇದೆ. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ & 3ಬಿ ಸೇರಿದವರಿಗೆ ಈ ಸಾಲ ಸೌಲಭ್ಯ ಒದಗಿಸಲಾಗುವುದು.

25 ಲಕ್ಷ ರೂಪಾಯಿ ಸಾಲ

ಇನ್ನು ಸಾಲ ಸೌಲಭ್ಯ ಪಡೆಯೋದಕ್ಕೆ ಇಚ್ಛಿಸುವ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 15 ಲಕ್ಷ ರೂಪಾಯಿ ಮೀರಿರಬಾರದು. ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಶೇಕಡಾ 60 ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ವಾರ್ಷಿಕ ಗರಿಷ್ಠ 25 ಲಕ್ಷ ರೂಪಾಯಿ ಹಾಗೂ ಪೂರ್ಣ ಕೋರ್ಸ್ ಅವಧಿಗೆ ಒಟ್ಟಾರೆಯಾಗಿ 50 ಲಕ್ಷ ರೂಪಾಯಿ ತನಕ ಸಾಲವನ್ನು ಬಡ್ಡಿ ರಹಿತವಾಗಿ ಒದಗಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಇದಕ್ಕಾಗಿ ಸಾಲದ ಭದ್ರತೆಗೆ ನಿಗಮಕ್ಕೆ ಅರ್ಜಿದಾರ/ಜಾಮೀನುದಾರ /ಪೋಷಕರ ಸ್ಥಿರಾಸ್ತಿ ನಿಗಮಕ್ಕೆ ಆಧಾರ ಮಾಡಬೇಕು. ಅರ್ಜಿಯ ಜೊತೆಯಲ್ಲಿ ವಿದೇಶಿ ವಿಶ್ವ ವಿದ್ಯಾಲಯದ ಪ್ರವೇಶ ಪತ್ರ ವಿದ್ಯಾರ್ಥಿ ವಿಸಾ & ಪಾಸ್ ಪೋರ್ಟ್ ಮತ್ತು ಏರ್ ಟಿಕೇಟ್ ಪ್ರತಿ ಒದಗಿಸಬೇಕು.

ಸಾಲ ಸೌಲಭ್ಯ ಪಡೆಯಲು https://www.sevasindu.karnataka.gov.in ಅಥವಾ ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಸಾಲ ಪಡೆಯುವ ವಿದ್ಯಾರ್ಥಿಗಳು ಸ್ನಾತಕೋತ್ತರ ಕೊರ್ಸ್‌ಗಳಿಗೆ 32 ವರ್ಷ ಒಳಗೆ ಇರಬೇಕು. ಹಾಗೇ ಪಿಎಚ್‌ಡಿ ಕೊರ್ಸ್‌ಗಳಿಗೆ 35 ವರ್ಷಗಳ ಒಳಗೆ ವಯೋಮಿತಿ ಇರಬೇಕು. ಹೆಚ್ಚಿನ ಮಾಹಿತಿಗೆ https://www.dbcdc.karnataka.gov.in ವೆಬ್‌ಸೈಟ್ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+