ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದ ಕಾನೂನನ್ನು ಪ್ರಶ್ನಿಸುವ ಅಧಿಕಾರ ವಿದ್ಯಾರ್ಥಿಗಳಿಗೆ ಕೊಟ್ಟೋರ್ಯಾರು?: ಆಶ್ವತ್ಥ ನಾರಾಯಣ

|
Google Oneindia Kannada News

ಬೆಂಗಳೂರು, ಜನವರಿ 9: ದ್ವೇಷ ಬಿಡಿ ಕಾನೂನು ಮನವರಿಕೆ ಮಾಡಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಕರೆ ನೀಡಿದ್ದಾರೆ.

Recommended Video

IPL 2020 : ಭರ್ಜರಿಯಾಗಿದೆ ಧೋನಿ IPL ಟೀಂ | Oneindia Kannada

ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಸಿಎಎ, ಎನ್‌ಆರ್‌ಸಿ ವಿವಾದ ಪ್ರಕರಣದ ಕುರಿತು ಬಿಜೆಪಿ ನಿಯೋಗವು ಅಶ್ವತ್ಥ ನಾರಾಯಣ ಅವರನ್ನು ಭೇಟಿ ಮಾಡಿತು.

ಸಿಎಎ ಪರ ತಿಳಿವಳಿಕೆ ನೀಡುವ ಪ್ರಯತ್ನ

ಸಿಎಎ ಪರ ತಿಳಿವಳಿಕೆ ನೀಡುವ ಪ್ರಯತ್ನ

ಸಿಎಎ ಪರ ತಿಳಿವಳಿಕೆ ಕೊಡುವ ಪ್ರಯತ್ನವನ್ನು ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಹಾಗಾಗಿ ಇದನ್ನು ಪ್ರಶ್ನೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಲೇಜು ಹೊರಗೆ ಜನಜಾಗೃತಿ ಮೂಡಿಸುವುದು ತಪ್ಪಲ್ಲ. ನಮ್ಮ ಕಾರ್ಯಕರ್ತರು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ಕಾರಣ ನೀಡಿ

ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ಕಾರಣ ನೀಡಿ

ಸಿಎಎ ವಿರುದ್ಧ ಪ್ರತಿಭಟನೆ, ಗಲಭೆ , ಅಪಪ್ರಚಾರ ನಡೆಯುತ್ತಿದೆ.ಯಾತಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಬೇಕು. ಸಿಎಎ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲು ಹೊರಟಿದ್ದಾರೆ. ಅವರು ಮಾಡಿದ್ದನ್ನು ಅವರೇ ಅನುಭವಿಸುತ್ತಾರೆ. ದೇಶ ವಿರೋಧಿ ಚಟುವಟಿಕೆ ಮಾಡುವವರಿಗೆ ಜನರು ಪಾಠ ಕಲಿಸುತ್ತಾರೆ ಎಂದರು.

ದೇಶದಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ ಕೆಲಸ

ದೇಶದಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ ಕೆಲಸ

ದೇಶದಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ ಕೆಲಸ,ಕಾಲೇಜುಗಳು ಕೂಡಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.ಅದು ಕಾಲೇಜುಗಳ ಜವಾಬ್ದಾರಿ ಕೂಡಾ ಹೌದು.ವಿವಿಗಳಲ್ಲಿ ವಿದ್ಯಾರ್ಥಿಗಳು ವಿರೋಧಿಸುತ್ತಿರುವುದು ಮಾಹಿತಿಯ ಕೊರತೆ ಇದೆ. ಕೆಲವು ಕಿಡಿಗೇಡಿಗಳು ಷಡಂತ್ರ ಮಾಡುತ್ತಿದ್ದಾರೆ.

ಪ್ರಶ್ನೆ ಮಾಡುವ ಹಕ್ಕನ್ನು ವಿದ್ಯಾರ್ಥಿಗಳಿಗೆ ಕೊಟ್ಟಿದ್ಯಾರು?

ಪ್ರಶ್ನೆ ಮಾಡುವ ಹಕ್ಕನ್ನು ವಿದ್ಯಾರ್ಥಿಗಳಿಗೆ ಕೊಟ್ಟಿದ್ಯಾರು?

ದೇಶದ ಕಾನೂನು ಬಗ್ಗೆ ಹೇಳುತ್ತಿರುವಾಗ ಆ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಬೇಕು ಅಂತಿದ್ದರೆ ಸಮಸ್ಯೆ ಇದ್ದರೆ ಪೋಲೀಸರಿಗೆ ದೂರು ನೀಡಬೇಕಿತ್ತು.ಪ್ರಶ್ನೆ ಮಾಡುವ ಹಕ್ಕು ಅವರಿಗೆ ಯಾರು ಕೊಟ್ಟಿದ್ದಾರೆ? ವಿದ್ಯಾರ್ಥಿಗಳು ಏಕಾಏಕಿ ಬಂದು ಪ್ರಶ್ನೆ ಮಾಡುವ ಸಂಧರ್ಭ ಏನಿತ್ತು?.ಕಾನೂನು ಗೌರವಿಸದವರು ಇನ್ನು ದೇಶದ ಕಥೆ ಹೇಗೆ.ಇಂತಹ ಘಟನೆಗಳು ನಿಲ್ಲಬೇಕು, ಕಾನೂನು ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.

English summary
Deputy Chief Minister Ashwath Narayan Said that Students Have No Authority To Question The Law Of The Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X