• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಯುವ ಚಿಂತನ ವಿಶೇಷ ಕಾರ್ಯಕ್ರಮ

|

ಬೆಂಗಳೂರು, ಆಗಸ್ಟ್ 11: ಯುವಚಿಂತನ ಫೌಂಡೇಶನ್, ಐಬಿಎಂ ಜೊತೆ ಸೇರಿ ಸರ್ಕಾರಿ ಶಾಲೆ ಹೆಣ್ಣು ಮಕ್ಕಳಿಗೆ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಐಬಿಎಂ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ಸರ್ಕಾರಿ ಶಾಲೆಯ ಎಂಟು ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಗಾಗಿ ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ ತರಗತಿಗಳನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದನ್ನು ಸ್ಟೆಮ್ (STEM) ಕಾರ್ಯಕ್ರಮವೆಂದು ಯುವ ಚಿಂತನ ಕರೆದಿದೆ.

vಐಬಿಎಂ ಸಂಸ್ಥೆಯು ಹಲವು ದೇಶದಲ್ಲಿ ಸ್ಟೆಮ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಈ ಕಾರ್ಯಕ್ರಮವು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗುತ್ತಿದೆ.

ಬೀದರ್, ಗುಲ್ಬರ್ಗಾ, ಯಾದಗಿರಿ, ಬಿಜಾಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಆಸಕ್ತ, ಅರ್ಹ ಶಿಕ್ಷಕರ ನೆರವು ಪಡೆದುಕೊಂಡು ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಲು ಯುವ ಚೇತನ ಮತ್ತು ಐಬಿಎಂ ಮುಂದಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಯುವ ಚಿಂತನ ಫೌಂಡೇಶನ್‌ಗೆ ಸ್ವ-ಮಾಹಿತಿ ಕಳುಹಿಸಬಹುದಾಗಿದೆ. ಆಸಕ್ತರು anupama@yuvachintana.org ಗೆ ಸ್ವ-ವಿವರ ಕಳುಹಿಸಬಹುದಾಗಿದೆ.

English summary
Sciences, Technology, Engendering, Mathematics classes to government college girls all over Karnataka by Yuva Chethana foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X