ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿನ ಸೇತುವೆ: ಬಿಬಿಎಂಪಿ ವಿರುದ್ಧ ಮೌನ ಪ್ರತಿಭಟನೆ

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಉಕ್ಕಿನ ಸೇತುವೆ ನಿರ್ಮಾಣ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 112 ಮರಗಳನ್ನು ಕಡಿಯಲು ಮುಂದಾಗಿದ್ದು, ಇದರ ವಿರುದ್ಧ ಜೆ. ಸಿ ರಸ್ತೆಯಲ್ಲಿ ಸಿಟಿಜನ್ ಫೋರಂ ವತಿಯಿಂದ ಮೌನ ಪ್ರತಿಭಟನೆ ನಡೆಯಿತು.

ಉಕ್ಕಿನ ಸೇತುವೆ ನಿರ್ಮಾಣ ಕುರಿತಂತೆ ನಗರದ ಜಯಮಹಲ್ ರಸ್ತೆಯನ್ನು ಅಗಲೀಕರಣಗೊಳಿಸಲು ಬಿಬಿಎಂಪಿ 112 ಮರಗಳನ್ನು ಕಡಿಯಲು ಮುಂದಾಗಿದೆ. ಮರಗಳನ್ನು ಕಡಿಯಬಾರದು ಎಂದು ಸಿಟಿಜನ್ ಫೋರಂ ಬೆಂಗಳೂರು ವತಿಯಿಂದ ಜೆ ಸಿ.ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಮಾನ ಪ್ರತಿಭಟನೆ ನಡೆಸಿದರು.[ಉಕ್ಕಿನ ಸೇತುವೆ ಟೆಂಡರ್ ರದ್ದತಿಗೆ ಆಗ್ರಹಿಸಿ ಸತ್ಯಾಗ್ರಹ]

Steel Flyover: Citizen Poram Bengaluru protest against BBMP to felling 112 trees

ಭಿತ್ತಿ ಪತ್ರಗಳನ್ನು ಹಿಡಿದು ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು. ಮರಗಳನ್ನು ಕಡಿಯುವ ಕಾರಣದಿಂದ ಬೆಂಗಳೂರಿನ ಉದ್ಯಾನಗರಿ ಎಂಬ ಹೆಸರು ಹಾಳಾಗುತ್ತಿದೆ. ಅಲ್ಲದೆ ಪ್ರಕೃತಿ ನಾಶದಿಂದ ನಗರ ಸೌಂದರ್ಯವೂ ಕೆಡುತ್ತಿದೆ ಎಂದು ಪೋರಂ ತಿಳಿಸಿದೆ.

ಈ ಹಿಂದೆ ಮುಖ್ಯಮಂತ್ರಿಗಳು ಮರಗಳನ್ನು ಕಡಿದರೆ ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳಸುತ್ತೇವೆ ಎಂದು ಹೇಳಿದ್ದರು. ಅಲ್ಲದೆ ಮರಗಳನ್ನು ಕಡಿಯದಂತೆ ಹಸಿರು ಪೀಠವೂ ನಿರ್ಬಂಧ ಹೇರಿತ್ತು.

English summary
Steel Flyover: Citizen Poram Bengaluru protest against BBMP to felling 112 trees for steel flyover in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X