ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ರಂದೀಪ್ ಎತ್ತಂಗಡಿ ಆದೇಶಕ್ಕೆ ತಡೆ: ಕಸದ ಮಾಫಿಯಾಗೆ ನಿರಾಸೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 6: ಬಿಬಿಎಂಪಿ ಅಪರ ಆಯುಕ್ತ ಹುದ್ದೆಯಿಂದ ರಂದೀಪ್ ಅವರನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಿದ್ದ ಆದೇಶವನ್ನು ಸರ್ಕಾರ ಸದ್ಯಕ್ಕೆ ತಡೆ ಹಿಡಿದಿದೆ.

ನಗರದಲ್ಲಿ ತ್ಯಾಜ್ಯ ಸಮಸ್ಯೆ ವಿಪರೀತವಾಗಿದ್ದರಿಂದ ಅದನ್ನು ನಿವಾರಣೆ ಮಾಡಲು ರಂದೀಪ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಕ್ರಮ ಖಂಡಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಮ್ಮಿಶ್ರ ಸರ್ಕಾರದ ಮೊದಲ ಐಎಎಸ್‌ ವರ್ಗಾವಣೆ: ಯಾವ ಇಲಾಖೆಗೆ ಯಾರು? ಸಮ್ಮಿಶ್ರ ಸರ್ಕಾರದ ಮೊದಲ ಐಎಎಸ್‌ ವರ್ಗಾವಣೆ: ಯಾವ ಇಲಾಖೆಗೆ ಯಾರು?

ರಂದೀಪ್ ಅವರನ್ನು ವರ್ಗಾವಣೆ ಮಾಡಿದರೆ ಕಸದ ಸಮಸ್ಯೆ ಮತ್ತಷ್ಡು ಉಲ್ಬಣವಾಗಲಿದೆ, ತ್ಯಾಜ್ಯ ಸಮಸ್ಯೆ ನಿವಾರಣೆಗೆ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ವಿನೋತ್ ಪ್ರಿಯಾ ಅವರನ್ನು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಹಾಗೂ ಆ ಸ್ಥಾನದಲ್ಲಿದ್ದ ಆರ್ ಗಿರೀಶ್ ಅವರನ್ನು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಕರ್ನಾಟಕ ಸರ್ಕಾರ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಆದೇಶ ಹೊರಡಿಸಿತ್ತು.

State govt restrains Randeep transfer

 ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ

ಶಾಲಿನಿ ರಜನೀಶ್-ಯೋಜನೆ , ಸಾಂಖ್ಯಿಕ ವಿಭಾಗ, ವಿ. ಮಂಜುಳಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್, ಡಿ ರಂದೀಪ್, ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಎನ್‌ ವಿ ಪ್ರಸಾದ್, ಎಂಡಿ ಬಿಂಎಂಟಿಸಿ, ಶಿವಯೋಗಿ ಕಳಸದ ಎಂಡಿ ಕೆಎಸ್‌ಆರ್ಟಿಸಿ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

English summary
Owing to strong opposition from general public and some public representatives, the state government has restrained transfer order of IAS officer Randeep from BBMP additional commissioner to social welfare department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X