• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಬರ ಅಧ್ಯಯನ ತಂಡದ ಜೊತೆ ಸರ್ಕಾರದ ಮಹತ್ವದ ಸಭೆ

|

ಬೆಂಗಳೂರು, ನವೆಂಬರ್ 19: ರಾಜ್ಯದಲ್ಲಿರುವ ಬರ ಪ್ರದೇಶಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಈಗಾಗಲೇ ಭೇಟಿ ಕೊಟ್ಟು ಅವಲೋಕನ ನಡೆಸಿದೆ. ಅಧ್ಯಯನ ಕುರಿತು ಕೇಂದ್ರ ತಂಡದ ಜೊತೆಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಲಿದೆ.

ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದಿಂದ ತಂಡ ಆಗಮಿಸಿದ್ದು ನವೆಂಬರ್ 17ರಂದು ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದೆ, ಅಧ್ಯಯನ ಮುಗಿಸಿ ನವೆಂಬರ್ 19ರಂದು ಸೋಮವಾರ ವಿಧಾನಸೌಧಕ್ಕೆ ಆಗಮಿಸಲಿದೆ. ಕಂದಾಯ, ಕೃಷಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಂಪುಟ ಉಪ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ.

10 ಮಂದಿಯ ಮೂರು ಕೇಂದ್ರ ತಂಡ

10 ಮಂದಿಯ ಮೂರು ಕೇಂದ್ರ ತಂಡ

ಹತ್ತು ಮಂದಿಯ ಕೇಂದ್ರ ತಂಡಗಳು ಈಗಾಗಲೇ ಯಾದಗಿರಿ, ರಾಯಚೂರು, ದಾವಣಗೆರೆ , ಬಳ್ಳಾರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದೆ.

ಕರ್ನಾಟಕದ 13 ಜಿಲ್ಲೆಗಳಲ್ಲಿ ನೀರಿನ ಬರ!

ಧಾರವಾಡದಲ್ಲಿ ಬರ ಪರಿಸ್ಥಿತಿ ಅಧ್ಯಯನ

ಧಾರವಾಡದಲ್ಲಿ ಬರ ಪರಿಸ್ಥಿತಿ ಅಧ್ಯಯನ

ಕೇಂದ್ರ ಬರ ಅಧ್ಯಯನ ತಂಡ ಧಾರವಾಡದಲ್ಲಿ ಪರಿಶೀಲನೆ ನಡೆಸಿದೆ. ನವೆಂಬರ್ 17ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಬರ ಅಧ್ಯಯನ ನಡೆಸಿದೆ. ಜಿಲ್ಲೆಯ ಹಿಂಗಾರು ಹಂಗಾಮಿನ ಬರ ಪರಿಸ್ಥಿತಿ ಕುರಿತು ಅಧ್ಯಯನ ಮಾಡಿದೆ.

ಧಾರವಾಡದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಕೇಂದ್ರ ತಂಡ

ಆರು ಜಿಲ್ಲೆಗಳಲ್ಲಿ ಬರ ಅಧ್ಯಯನ ತಂಡ ಸಂಚಾರ

ಆರು ಜಿಲ್ಲೆಗಳಲ್ಲಿ ಬರ ಅಧ್ಯಯನ ತಂಡ ಸಂಚಾರ

ರಾಜ್ಯದಲ್ಲಿ ಮೂರು ತಂಡಗಳನ್ನಾಗಿ ವಿಂಗಡಿಸಿ 13 ಜಿಲ್ಲೆಗಳಲ್ಲಿ ಬರ ಸ್ಥಿತಿ ಅಧ್ಯಯನ ಮಾಡಲಾಗಿದೆ. ನವೆಂಬರ್ 19ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುತ್ತದೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ, ಜಗಳೂರು, ದಾವಣಗೆರೆ ತಾಲೂಕಿನ ವಿವಿಧ ಗ್ರಾಮಕ್ಕೆ ತಂಡ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿತು.

ಬರ ಪೀಡಿತ ತಾಲೂಕುಗಳಿಗೆ 2,434 ಕೋಟಿ ಬೇಡಿಕೆ ಇಟ್ಟ ರಾಜ್ಯ

ಯಾವ್ಯಾಯ ಬೆಳೆಗಳ ಅಧ್ಯಯನ

ಯಾವ್ಯಾಯ ಬೆಳೆಗಳ ಅಧ್ಯಯನ

ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ, ರಾಗಿ, ಅಡಿಕೆ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಪರಿಶೀಲನೆ ಮಾಡಲಾಯಿತು.

English summary
A 10-member inter-ministerial central team (IMCT) began visiting 17 drought-hit districts across Karnataka for spot assessment of the losses incurred by farmers and the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X