• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳಿಗೂ ಪುನರ್ಮನನ ತರಗತಿ

|

ಬೆಂಗಳೂರು, ಮೇ 8: ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳಿಗೆ ಸಹ ಪುನರ್ಮನನ ತರಗತಿಗಳು ಶುರು ಆಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ನಾಳೆಯಿಂದ ಈ ತರಗತಿಗಳು ಪ್ರಾರಂಭ ಆಗಲಿವೆ.

ಚಂದನ ವಾಹಿನಿಯಲ್ಲಿ ಈಗಾಗಲೇ ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳು ನಡೆಯುತ್ತಿದೆ. ಏಪ್ರಿಲ್ 29ರಿಂದ ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿರುವ ತರಗತಿಯನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತಿದ್ದಾರೆ. ಈಗ ಆ ಕಾರ್ಯಕ್ರಮವನ್ನು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಾಗಿಯೂ ಮಾಡಲಾಗುತ್ತಿದೆ.

10ನೇ ಕ್ಲಾಸ್‌ ಮಕ್ಕಳಿಗಾಗಿ ಶಿಕ್ಷಕರಾದ ಮಾಜಿ ಶಾಸಕ ವೈಎಸ್‌ವಿ ದತ್ತ

ಮುಂದಿನ 30 ದಿನಗಳ ಅವಧಿಯಲ್ಲಿ ಮೊದಲ 16 ದಿನ ಗಣಿತ ಹಾಗೂ ವಿಜ್ಞಾನ, ನಂತರದ 10 ದಿನ ಸಮಾಜ ವಿಜ್ಞಾನ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಸಮಾಜ ವಿಜ್ಞಾನ ಬೋಧನೆ ಪೂರ್ಣಗೊಂಡ ಬಳಿಕ 6 ದಿನಗಳ ಕಾಲ ಹಿಂದಿ, ಸಂಸ್ಕೃತ ಹಾಗೂ ಉರ್ದು ಮೊದಲ ಭಾಷೆಗಳ ತರಗತಿಗಳನ್ನೂ ಬೋಧಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ನಾಳೆ ಅಂದರೆ ಮೇ 9 ರಿಂದ ಪ್ರತಿದಿನ ಬೆಳಗ್ಗೆ 9:30 ರಿಂದ 11 ಗಂಟೆವರೆಗೆ ಚಂದನ ವಾಹಿನಿಯಲ್ಲಿ ಈ ತರಗತಿಗಳು ಪ್ರಸಾರವಾಗಲಿವೆ. ಈ ತರಗತಿಗಳ ವಿಡಿಯೋವನ್ನು ಮಕ್ಕಳ ವಾಣಿ ಯೂ-ಟ್ಯೂಬ್ ವಾಹಿನಿಯಲ್ಲೂ ವೀಕ್ಷಿಸಬಹುದಾಗಿದೆ.

ಸರ್ಕಾರದಿಂದ ಮಾತ್ರವಲ್ಲದೆ, ಮಾಜಿ ಶಾಸಕ ವೈಎಸ್‌ವಿ ದತ್ತ ಸಹ ತಮ್ಮ ಫೇಸ್ ಬುಕ್‌ ಖಾತೆಯ ಮೂಲಕ 10ನೇ ಕ್ಲಾಸ್ ತರಗತಿ ಪುನರ್ಮನನ ತರಗತಿಗಳನ್ನು ಮಾಡುತ್ತಿದ್ದಾರೆ.

English summary
SSLC revision classes starts for english medium students from tomorrow says Minister Suresh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X