SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಕ್ಯಾಬ್ ಚಾಲಕನ ಮಗಳು ಇಡೀ ರಾಜ್ಯಕ್ಕೆ ಟಾಪರ್
SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮೇ 09ಕ್ಕೆ ಪ್ರಟಕ ಮಾಡಲಾಗಿದ್ದು, ಆದರೆ ಈ ವೇಳೆ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬರು ಬಂದ ಅಂಕಗಳು ತೃಪ್ತಿಯಾಗದ ಹಿನ್ನೆಲೆ ಮರುಮೌಲ್ಯಮಾಪನಕ್ಕೆ ಹಾಕಿದ್ದು, ಇದೀಗ ಇವರಿಗೆ 625 ಅಂಕ ಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇವರಿಗೆ ಮೊದಲಿಗೆ ಬಂದ ಅಂಕಗಳೆಷ್ಟು ಹಾಗೂ ಇವೆ ಹಿನ್ನೆಲೆ ಏನು ಎಂದು ಇಲ್ಲಿ ತಿಳಿಯಿರಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಮೊದಲ ಫಲಿತಾಂಶ ಬಂದ ಬಳಿಕ ಮರುಮೌಲ್ಯಮಾಪನಕ್ಕೆ ಹಾಕಿದ್ದ ಬೆಂಗಳೂರಿನ ಮಲ್ಲಸಂದ್ರದ ಬಿ.ಎನ್.ಆರ್.ಶಾಲೆಯ ಭಾವನಾ ಟಿ.ಎಸ್.ಎಂಬ ವಿದ್ಯಾರ್ಥಿನಿಗೆ 625ಕ್ಕೆ 625 ಅಂಕ ಸಿಕ್ಕಿದ್ದು, ಈ ಮೂಲಕ ಅವರು ಇಡೀ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

2023-24ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಅಲಂಕರಿಸಿದ್ದು, ಇದೀಗ ಇದನ್ನು ಮೊದಲ ಫಲಿತಾಂಶ ಪ್ರಕಟದ ವೇಳೆಯೇ ಘೋಷಣೆ ಮಾಡಲಾಗಿತ್ತು. ಇದೀಗ ಮರುಮೌಲ್ಯಮಾಪನ ಫಲಿತಾಂಶ ಹೊರಬಿದ್ದಿದ್ದು, 620ರಿಂದ 625ಕ್ಕೆ ಜಿಗಿದ ಬೆಂಗಳೂರಿನ ಕ್ಯಾಬ್ ಚಾಲಕನ ಮಗಳು ಭಾವನಾ ಟಿ.ಎಸ್. ಅವರು ಕೂಡ ಈ ಸ್ಥಾನದಲ್ಲಿ ಇದ್ದಾರೆ.
ಭಾವನಾ ಟಿಎಸ್ ಅವರಿಗೆ ಮೊದಲ ಫಲಿತಾಂಶ ಬಂದಾಗ 625ಕ್ಕೆ 620 ಅಂಕ ಮಾತ್ರ ಬಂದಿತ್ತು. ಮರುಮೌಲ್ಯಮಾಪನಕ್ಕೆ ಹಾಕಿದ ನಂತರದಲ್ಲಿ ಅವರಿಗೆ 625ಕ್ಕೆ 625 ಅಂಕ ಬಂದಿದೆ. ಇನ್ನು ಮಲ್ಲಸಂದ್ರದ ಭಾವನಾ ಅವರನ್ನು ಸೂರಜ್ ಫೌಂಡೇಶನ್ ಸನ್ಮಾನಿಸಿದ್ದು, ಫೌಂಡೇಶನ್ ಪರವಾಗಿ ಶಾಸಕ ಮುನಿರಾಜು ಅವರು ವಿದ್ಯಾರ್ಥಿನಿಗೆ 25,000 ರೂಪಾಯಿ ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.
ರಾಜ್ಯಕ್ಕೆ ಹೆಸರು ತಂದಿರುವ ಈ ವಿದ್ಯಾರ್ಥಿನಿಯ ಮಿಂದಿನ ಪಿಯುಸಿ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕ, ಸಮವಸ್ತ್ರಗಳಿಗೆ ಪ್ರತಿ ವರ್ಷ ಫೌಂಡೇಶನ್ ಸಂಸ್ಥಾಪಕಿ ಸುಜಾತಾ ಸೂರಜ್ ಅವರು 25,000 ರೂಪಾಯಿ ನಗದು ಹಣ ನೀಡಲಿದ್ದಾರೆ ಎಂದು ಶಾಸಕ ಎಸ್.ಮುನಿರಾಜು ಘೋಷಣೆ ಮಾಡಿದ್ದಾರೆ ಅಂತಾ ತಿಳಿದುಬಂದಿದೆ.












Click it and Unblock the Notifications