ಸಚಿವ ಶ್ರೀರಾಮುಲು ಮಗಳ ಮದುವೆ ನಿಶ್ಚಯ, ನಾಳೆ ನಿಶ್ಚಿತಾರ್ಥ
ಬೆಂಗಳೂರು, ಡಿಸೆಂಬರ್ 17: ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆ ನಿಶ್ಚಯವಾಗಿದ್ದು, ನಾಳೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಮುಲು ಪುತ್ರಿ ರಕ್ಷಿತಾ ಅವರ ವಿವಾಹವು ಹೈದರಾಬಾದ್ ನ ಉದ್ಯಮಿ ರವಿಕುಮಾರ್ ಅವರ ಪುತ್ರ ಲಲಿತ್ ಕುಮಾರ್ ಅವರೊಂದಿಗೆ ನಡೆಸಲು ನಿಶ್ಚಯಿಸಲಾಗಿದ್ದು, ಬುಧವಾರ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.
ರೇಸ್‌ಕೋರ್ಸ್ ರಸ್ತೆಯ ತಾಜ್ ಹೋಟೆಲ್ ನಲ್ಲಿ ಬೆಳಿಗ್ಗೆ 11:30 ಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಬಂಧುಗಳು, ಸ್ನೇಹಿತರು, ರಾಜಕೀಯ ಮಿತ್ರರು, ಪತ್ರಕರ್ತರಿಗೆ ರಾಮುಲು ಆಹ್ವಾನ ನೀಡಿದ್ದಾರೆ.

ರಾಮುಲು ಅವರು ಬಿಜೆಪಿಯ ಹಲವು ನಾಯಕರನ್ನು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇತ್ತೀಚೆಗೆ ಬಿ.ಎಲ್.ಸಂತೋಶ್ ಅವರನ್ನೂ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಸಿಎಂ ಯಡಿಯೂರಪ್ಪ, ಸಚಿವರು, ವಿಪಕ್ಷ ನಾಯಕರು, ರಾಮುಲು ಆತ್ಮೀಯ ಗೆಳೆಯ ಜನಾರ್ದನ ರೆಡ್ಡಿ ಸಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ರಾಮುಲು, ಡಿಸಿಎಂ ಹುದ್ದೆಗಾಗಿ 'ವಲಸಿಗ' ರಮೇಶ್ ಜಾರಕಿಹೊಳಿ ಜೊತೆ ಪೈಪೋಟಿಗೆ ಇಳಿದಿದ್ದಾರೆ.












Click it and Unblock the Notifications