ಜಯನಗರದ ಯುನೈಟೆಡ್‌ ಹಾಸ್ಪಿಟಲ್‌ನಲ್ಲಿ ಸ್ಪುಟ್ನಿಕ್‌-ವಿ ಲಸಿಕೆ

ಬೆಂಗಳೂರು ಜುಲೈ 04: ''ಬೆಂಗಳೂರಿನ ಜಯನಗರದ ಯುನೈಟೆಡ್‌ ಆಸ್ಪತ್ರೆಗೆ ಸ್ಪುಟ್ನಿಕ್‌-ವಿ ಲಸಿಕೆ ಸರಬರಾಜಾಗಿದ್ದು, ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ,'' ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ವಿರುದ್ದ ವಿಶ್ವದ ಮೊದಲ ಲಸಿಕೆಯಾಗಿರುವ ಸ್ಪುಟ್ನಿಕ್‌-ವಿ ಯ ರಾಜ್ಯದ ಮೊದಲ ಲಸಿಕಾ ಅಭಿಯಾನ ಇದಾಗಿದ್ದು ಯುನೈಟೆಡ್‌ ಆಸ್ಪತ್ರೆಗೆ ಈಗಾಗಲೇ ಸಾಕಷ್ಟು ಡೋಸ್‌ ಗಳಷ್ಟು ಲಸಿಕೆ ಸರಬರಾಜಾಗಿದೆ.

ಪ್ರತಿವಾರ ನಮ್ಮ ಅಗತ್ಯತೆಗೆ ತಕ್ಕಂತೆ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ರೆಡ್ಡಿ ಲ್ಯಾಬೋರೇಟರಿ ನೀಡಿದೆ. ಈ ಲಸಿಕೆಯ ಸ್ಟೋರೇಜ್‌ ಗೆ ಅಗತ್ಯವಿರುವ ಅತ್ಯಾಧುನಿಕ ಫ್ರೀಜರ್‌ಗಳನ್ನು ಇಲ್ಲಿ ಅಳವಡಿಸಿಲಾಗಿದ್ದು, ಮೈನಸ್‌ - 30 ಡಿಗ್ರಿ ಸೆಲ್ಸಿಯಸ್‌ ತಾಪಾಂಶದಲ್ಲಿ ಲಸಿಕೆಗಳನ್ನು ಸಂಗ್ರಹಿಸಲಾಗಿದೆ.

Sputnik-V Vaccination Drive at United Hospital, Jayanagar

''ಯುನೈಟೆಡ್‌ ಬ್ರದರ್ಸ್‌ ಹೆಲ್ತಕೇರ್‌ ಸರ್ವೀಸಸ್‌ ಪ್ರೈ ಲಿಮಿಟೆಡ್‌ನ ನೂತನ ಆಸ್ಪತ್ರೆಯಾಗಿರುವ ಜಯನಗರ ಯುನೈಟೆಡ್‌ ಆಸ್ಪತ್ರೆ ಉದ್ಘಾಟನೆಗೆ ಸಿದ್ದವಾಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳು ಹಾಗೂ ಮಾನವ ಸಂಪನ್ಮೂಲ ಹೊಂದಿದೆ. ಉದ್ಘಾಟನೆಗೂ ಮುನ್ನವೇ ನಾಲ್ಕು ಅಂತಸ್ತಿನ ಕಟ್ಟಡವನ್ನು ಹಾಗೂ ನಮ್ಮ ಎಲ್ಲಾ ಅತ್ಯಾಧುನಿಕ ಗುಣಮಟ್ಟದ ಸೇವೆಗಳನ್ನು ಕೇವಲ ಲಸಿಕೆ ನೀಡುವ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ (ಎರಡು ವಾರಗಳ ಕಾಲ), '' ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

Sputnik-V Vaccination Drive at United Hospital, Jayanagar

ಲಸಿಕೆಯನ್ನು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ (080 4566 6666)ಗಳನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ, ವಾಟ್ಸಾಪ್‌ ನಲ್ಲಿ ಅತ್ಯಂತ ಸುಲಭವಾಗಿ ಲಸಿಕೆ ಪಡೆದುಕೊಳ್ಳುವ ಸ್ಲಾಟ್‌ ಬುಕ್‌ ಮಾಡಬಹುದಾಗಿದೆ. ವಾಟ್ಸಾಪ್‌ ನಂ: 99169 77777.

Recommended Video

      RCB ಹಾಗು Maxwell ವಿಚಾರದಲ್ಲಿ ಭರ್ಜರಿ ಸುದ್ದಿ | Oneindia Kannada

      ''ಯುನೈಟೆಡ್‌ ಆಸ್ಪತ್ರೆ ಜಯನಗರ, ಅತ್ಯಾಧುನಿಕ ಆಪರೇಷನ್‌ ಥಿಯೇಟರ್‌, ಐ.ಸಿ.ಯು ಸೌಲಭ್ಯ, ಡಯಾಗ್ನೋಸ್ಟಿಕ್ಸ್‌ ಹಾಗೂ ವೆಲ್‌ನೆಸ್‌ ಸೌಲಭ್ಯ ಹೊಂದಿರುವ ನವನಿರ್ಮಿತ ಆಸ್ಪತ್ರೆಯಾಗಿದೆ. ಶೀಘ್ರದಲ್ಲೇ ಇದರ ಉದ್ಘಾಟನೆಯ ಬಗ್ಗೆ ವಿಸ್ತೃತ ಮಾಹಿತಿ ಮಾಹಿತಿಗಳನ್ನು ನೀಡಲಾಗುವುದು,'' ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್‌ ಸಿದ್ದಾರೆಡ್ಡಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+