ಬೆಂಗಳೂರಿನ ರಸ್ತೆಗುಂಡಿ ಮೇಲೆ ಸಾಂಗ್ #SpotThePot
ಬೆಂಗಳೂರು, ನವೆಂಬರ್ 06:ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಜಾಗೃತಿ ಮೂಡಿಸಲು ಅಣಕು ಗೀತೆಯೊಂದನ್ನು ತಂಡವೊಂದು ರಚಿಸಿದೆ. ಈ ವಿಡಿಯೋ ಸಾಂಗ್ ಫೇಸ್ ಬುಕ್ ನಲ್ಲಿ ಜನಪ್ರಿಯತೆ ಗಳಿಸುತ್ತಿದೆ.
#spotthepot Rap ವಿಡಿಯೋ ಹಾಡು ನೋಡಿ, ಕೇಳಿ ಎಂಜಾಯ್ ಮಾಡಿ ನೀವು ಸ್ಟೆಪ್ ಹಾಕಿ ಎನ್ನುತ್ತಿದ್ದಾರೆ ಪಾಟ್ ಹೋಲ್ (Pothole Patrike) ಪತ್ರಿಕೆಯ ಪುಟದವರು.

ನವೆಂಬರ್ 4ರಂದು ಬಿಬಿಎಂಪಿ ನಗರದ ರಸ್ತೆಗುಂಡಿಗಳ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಒಟ್ಟು 696 ಗುಂಡಿಗಳಿವೆ. ಹೊಸದಾಗಿ 300 ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 152 ಗುಂಡಿಗಳನ್ನು ಮುಚ್ಚಲಾಗಿದ್ದು, 884 ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ ಎಂದು ಪಾಲಿಕೆ ಹೇಳಿದೆ.
ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳಲ್ಲಿರುವ ಗುಂಡಿಗಳನ್ನು ನವೆಂಬರ್ 5ರೊಳಗೆ ಮುಚ್ಚುತ್ತೇವೆ ಎಂದು ಪಾಲಿಕೆ ಹೇಳಿತ್ತು. ನಿಮ್ಮ ಬಡಾವಣೆಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆಯೇ? ಎಂಬುದಕ್ಕೆ ಜನರೇ ಉತ್ತರ ಹೇಳಬೇಕು.
ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದ್ದ ಕರ್ನಾಟಕ ಸರ್ಕಾರ ಕಣ್ಮುಚ್ಚಿ ಕುಳಿತ್ತಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಏನು ಮಾಡುತ್ತಿದೆ ಗೊತ್ತಿಲ್ಲ. ಅಣಕು ಗೀತೆ ಮೂಲಕ ಒಂದಷ್ಟು ಜಾಗೃತಿ ಮೂಡಿಸುವುದು ಈ ತಂಡದ ಉದ್ದೇಶ. ವಿಡಿಯೋ ನೋಡಿ ನೀವು ಅನಂದಿಸಿ...












Click it and Unblock the Notifications