Special MEMU Train: ಬೆಂಗಳೂರು-ಮೈಸೂರು ನಡುವೆ ವಿಶೇಷ ಮೆಮು ರೈಲು ಸೇವೆ: ದಿನಾಂಕ, ಸಮಯಗಳ ವಿವರ
Special MEMU Train: ಭಾರತೀಯ ರೈಲ್ವೆ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ರೈಲುಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಬೆಂಗಳೂರು-ಮೈಸೂರು ನಡುವೆ ವಿಶೇಷ ಮೆಮು ರೈಲು ಸಂಚರಿಸಲಿ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಹಾಗಾದ್ರೆ ಕಾರಣ ಏನು? ಹಾಗೂ ದಿನಾಂಕ, ಸಮಯಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಬ್ಬ-ಹರಿ ದಿನಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ಇದ್ದೇ ಇರುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ರೈಲುಗಳ ಸೇವೆ ನೀಡುತ್ತಾ ಬಂದಿದೆ. ಹಾಗೆಯೇ ಇದೀಗ ಬೆಂಗಳೂರು-ಮೈಸೂರು ನಡುವೆ ವಿಶೇ ಮೆಮು ರೈಲುಗಳನ್ನು ಘೋಷಣೆ ಮಾಡಿದೆ. ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ನೋಡಿ.

ವಾರಾಂತ್ಯಗಳಲ್ಲಿ ಹಾಗೂ ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಇರುತ್ತದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕೆಎಸ್‌ಆರ್ ಬೆಂಗಳೂರು ಮತ್ತು ಮೈಸೂರು ಅಶೋಕಪುರಂ ನಡುವೆ ವಿಶೇಷ ಮೆಮು ರೈಲು ಸಂಚಾರ ಮಾಡಲಿದೆ ನೈರುತ್ಯ ಎಂದು ಘೋಷಿಸಿದೆ.
ಈ ರೈಲು ಸೇವೆ ಇಂದಿನಿಂದ ಅಂದರೆ, ನವೆಂಬರ್ 14ರ ಶುಕ್ರವಾರದಿಂದ ಆರಂಭವಾಗಿದ್ದು, ಡಿಸೆಂಬರ್ 28ರ ವರೆಗೆ ಈ ಮಾರ್ಗದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಚಾರ ಮಾಡಲಿದೆ. ಆದರೆ, ನವೆಂಬರ್ 21, 22 ಮತ್ತು 23 ರಂದು ಈ ರೈಲಿನ ಸೇವೆ ಇರುವುದಿಲ್ಲ ಎಂದು ತಿಳಿಸಿದೆ.
ರೈಲು ಸಂಚಾರ ಸಮಯಗಳ ವಿವರ: ರೈಲು ಸಂಖ್ಯೆ 06213 ಕೆಎಸ್‌ಆರ್ ಬೆಂಗಳೂರಿನಿಂದ ಮಧ್ಯಾಹ್ನ 12:15 ಗಂಟೆಗೆ ಹೊರಡಲಿದ್ದು, ಅಶೋಕಪುರಂಗೆ ಮಧ್ಯಾಹ್ನ 3:40 ಗಂಟೆಗೆ ತಲುಪಲಿದೆ. ಮತ್ತೆ ಅಶೋಕಪುರಂನಿಂದ ಸಂಜೆ 4:10ಕ್ಕೆ ಹೊರಡಲಿರುವ ರೈಲು ಸಂಖ್ಯೆ 06214, ಕೆಎಸ್‌ಆರ್ ಬೆಂಗಳೂರಿಗೆ ರಾತ್ರಿ 8 ಗಂಟೆಗೆ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?: ಈ ಮೆಮು ರೈಲು ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತೀ ಹಾಲ್ಟ್, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಸತ್ತಿಹಳ್ಳಿ, ನಿಡಘಟ್ಟ ಹಾಲ್ಟ್, ಮದ್ದೂರು, ಹನಕೇರಿ, ಮಂಡ್ಯ, ಯಲಿಯೂರು, ಬ್ಯಾದರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಮತ್ತು ಚಾಮರಾಜಪುರಂನಲ್ಲಿ ನಿಲುಗಡೆ ಹೊಂದಿರಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಹೀಗೆ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲು ಸೇವೆಯನ್ನು ನೀಡುತ್ತಲಿರುತ್ತದೆ.
ಭಾರತವು ವಿವಿಧ ಸಂಸ್ಕೃತಿ, ಜನಾಂಗಗಳು, ಧರ್ಮಗಳನ್ನು ಒಳಗೊಂಡಿದ್ದು, ಜೊತೆಗೆ ಇಲ್ಲಿ ವಿವಿಧ ಹಬ್ಬಗಳನ್ನು ಸಹ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಭಾರತವನ್ನು ವೈವಿದ್ಯಮಯ ದೇಶವೆಂದು ಕರೆಯಲಾಗುತ್ತದೆ. ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ ಸ್ಥಳೀಯವಾಗಿ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಈ ವೇಳೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ಕಡಿಮೆ ದರ ಹಿನ್ನೆಲೆ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಯಾವುದೇ ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರ ದಟ್ಟಣೆ ನಿವಾರಣೆ ಮಾಡಲು ಹೆಚ್ಚುವರಿ ವಿಶೇಷ ರೈಲುಗಳನ್ನು ಘೋಷಿಸುತ್ತಲೇ ಬಂದಿದೆ.












Click it and Unblock the Notifications