ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಮೇಯರ್‌ ಆಗಿ ಎಸ್‌ಪಿ ಹೇಮಲತಾ ಆಯ್ಕೆ

|
Google Oneindia Kannada News

ಬೆಂಗಳೂರು, ಸೆ.11 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಆಗಿ ಜೆಡಿಎಸ್‌ನ ಎಸ್.ಪಿ. ಹೇಮಲತಾ ಅವರು ಆಯ್ಕೆಯಾಗಿದ್ದಾರೆ. ವೃಷಭಾವತಿ ವಾರ್ಡ್‌ನಿಂದ ಹೇಮಲತಾ ಅವರು ಮೊದಲ ಬಾರಿಗೆ ಜಯಗಳಿಸಿದ್ದರು.

ಶುಕ್ರವಾರ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎಸ್.ಪಿ.ಹೇಮಲತಾ ಅವರು 131 ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು. ಬಿಜೆಪಿಯಿಂದ ಎಚ್.ಸಿ.ನಾಗರತ್ನ ಅವರು ಉಪ ಮೇಯರ್ ಚುನಾವಣೆ ಕಣದಲ್ಲಿದ್ದರು. [ಮೇಯರ್ ಮಂಜುನಾಥ ರೆಡ್ಡಿ ಪರಿಚಯ]

jds

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಪತ್ನಿಯಾದ ಎಸ್.ಪಿ.ಹೇಮಲತಾ ಅವರು 2015ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಜಯಗಳಿಸಿದ ಮೊಲದ ಚುನಾವಣೆಯಲ್ಲಿಯೇ ಉಪ ಮೇಯರ್ ಆಗಿ ಆಗುವ ಅವಕಾಶ ಸಿಕ್ಕಿದೆ. [ಮೇಯರ್ ಆಯ್ಕೆಯ ಕ್ಷಣ-ಕ್ಷಣದ ಮಾಹಿತಿ]

ಹೇಮಲತಾ ಅವರು ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಪಡೆದಿದ್ದಾರೆ. ವೃಷಭಾವತಿನಗರ ವಾರ್ಡ್‍ನಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಅವರು ಉಪ ಮೇಯರ್ ಆಗಿ ಚುನಾಯಿತರಾಗಿದ್ದಾರೆ. [ಮೇಯರ್ ಆಗಿ ಮಂಜುನಾಥ ರೆಡ್ಡಿ ಆಯ್ಕೆ]

English summary
Vrushabhavathi ward JDS corporator SP Hemalatha elected as Bruhat Bangalore Mahanagara Palike (BBMP) deputy mayor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X