ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ

ಬೆಂಗಳೂರು, ಏಪ್ರಿಲ್ 14 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಮೇ 3ರ ತನಕ ದೇಶಾದ್ಯಂತ ಲಾಕ್ ಡೌನ್ ಮುಂದುವರೆಯಲಿದೆ. ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ನೈಋತ್ಯ ರೈಲ್ವೆ ವಿಶೇಷ ಸರಕು ಸಾಗಣೆ ರೈಲುಗಳನ್ನು ಓಡಿಸುತ್ತಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ರೈಲುಗಳು ಸಂಚಾರ ನಡೆಸಲಿವೆ. ಕೆಲವು ರೈಲುಗಳು ಯಶವಂತಪುರ ನಿಲ್ದಾಣದಿಂದ ಹೊರಡಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂಬರ್ 00623/00624 ಬೆಂಗಳೂರು-ಜೈಪುರ-ಬೆಂಗಳೂರು ನಡುವೆ ಸಂಚಾರ ಮಾಡಲಿದ್ದು ತುಮಕೂರು, ಹುಬ್ಬಳ್ಳಿ ಮಾರ್ಗವಾಗಿ ಓಡಲಿದೆ. 00623 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಗುರುವಾರ 1 ಗಂಟೆಗೆ ಹೊರಡಲಿದೆ. ಶನಿವಾರ 7 ಗಂಟೆಗೆ ಜೈಪುರ ತಲುಪಲಿದೆ. ಏಪ್ರಿಲ್ 16 ಮತ್ತು 23ರಂದು ಎರಡು ಟ್ರಿಪ್‌ನಲ್ಲಿ ಸಂಚರಿಸಲಿದೆ.

South Western Railway Parcel Express Trains From Bengaluru

00624 ಜೈಪುರ-ಬೆಂಗಳೂರು ವಿಶೇಷ ರೈಲು ಶನಿವಾರ 4 ಗಂಟೆಗೆ ಜೈಪುರದಿಂದ ಹೊರಡಲಿದೆ. ಶನಿವಾರ 9.50ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲಿದೆ. ಏಪ್ರಿಲ್ 18 ಮತ್ತು 25ರಂದು ಎರಡು ಟ್ರಿಪ್‌ನಲ್ಲಿ ಸಂಚಾರ ನಡೆಸಲಿದೆ.

ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್, ಸತಾರಾ, ಪುಣೆ, ಸೂರತ್, ವಡೋದರ, ಗೋದ್ರಾ ಮೂಲಕ ಜೈಪುರಕ್ಕೆ ತಲುಪಲಿದೆ. ರೈಲಿನಲ್ಲಿ 5 ಪಾರ್ಸೆಲ್ ಬೋಗಿ, 2 ಕುಳಿತುಕೊಳ್ಳುವ ಮತ್ತು ಲಗೇಜ್ ಕ್ಯಾಬಿನ್ ಇರುತ್ತದೆ.

ರೈಲು ನಂಬರ್ 00617/00618 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ- ದಿಮಾಪುರ್‌ ನಡುವೆ ಪಾರ್ಸೆಲ್ ತೆಗೆದುಕೊಂಡು ಹೋಗಲಿದ್ದು, ಚೆನ್ನೈ ಮೂಲಕ ರೈಲು ಓಡಲಿದೆ. ಏಪ್ರಿಲ್ 18ರಂದು 6 ಗಂಟೆಗೆ ಹೊರಡುವ ರೈಲು ಏಪ್ರಿಲ್ 21ರಂದು 8.40ಕ್ಕೆ ದಿಮಾಪುರ್ ತಲುಪಲಿದೆ.

ಏಪ್ರಿಲ್ 21ರಂದು ರೈಲು ಸಂಖ್ಯೆ 00618 9 ಗಂಟೆಗೆ ದಿಮಾಪುರ್‌ನಿಂದ ಹೊರಡಲಿದ್ದು 24ರಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಬರಲಿದೆ. ಯಶವಂತಪುರ, ಜೋಲಾರಪಟ್ಟಿ, ಎಂಜಿಆರ್ ಚೆನ್ಣೈ, ವಿಜಯವಾಡ, ರಾಜಮಂಡ್ರಿ, ವಿಶಾಖಪಟ್ಟಣ, ಭುವನೇಶ್ವರ, ಹೌರಾ,ಗೌಹಾತಿ ಮೂಲಕ ದಿಮಾಪುರ್‌ಗೆ ರೈಲು ತಲುಪಲಿದೆ.

ಬೆಂಗಳೂರು-ಪಾಟ್ನಾ-ಗೋರಖ್‌ಪುರ-ಬೆಂಗಳೂರು ನಡುವೆ 00607 ರೈಲು ಸಂಚಾರ ನಡೆಸಲಿದೆ. ಏಪ್ರಿಲ್ 19 1ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು ಏಪ್ರಿಲ್ 21ರಂದು 4ಗಂಟೆಗೆ ಪಾಟ್ನಾ ತಲುಪಲಿದೆ. ಏಪ್ರಿಲ್ 21ರಂದು 5.30ಕ್ಕೆ ಪಾಟ್ನಾದಿಂದ ಹೊರಡುವ ರೈಲು 11ಗಂಟೆಗೆ ಗೋರಖ್‌ಪುರ ತಲುಪಲಿದೆ.

ಏಪ್ರಿಲ್ 22ರಂದು 1ಗಂಟೆಗೆ ಪಾಟ್ನಾಕ್ಕೆ ಬರುವ ರೈಲು 6ಗಂಟೆಗೆ ಹೊರಡಲಿದ್ದು, ಏಪ್ರಿಲ್ 24ರಂದು 9.45ಕ್ಕೆ ಬೆಂಗಳೂರಿಗೆ ತಲುಪಲಿದೆ. ಯಶವಂತಪುರ, ಜೋಲಾರಪಟ್ಟಿ, ಎಂಜಿಆರ್ ಚೆನ್ನೈ, ವಿಜಯವಾಡ, ನಾಗ್ಪುರ ಮುಂತಾದ ನಿಲ್ದಾಣಗಳ ಮೂಲಕ ಬೆಂಗಳೂರಿಗೆ ಬರಲಿದೆ.

ಉದ್ಯಮಿಗಳು, ಸ್ವಯಂ ಸೇವಾ ಸಂಘಗಳು, ಎನ್‌ಜಿಓಗಳು ಈ ರೈಲುಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9731666950, 9731666951 ನಂಬರ್‌ಗೆ ಕರೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+