ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ

|
Google Oneindia Kannada News

ಬೆಂಗಳೂರು, ನವೆಂಬರ್ 22 : ಬೆಂಗಳೂರು ನಗರದ ಎರಡು ರೈಲ್ವೇ ಯೋಜನೆಗಳಿಗೆ ಇಲಾಖೆ ಒಪ್ಪಿಗೆ ನೀಡಿದೆ. ಈ ಯೋಜನೆಗಳಿಂದ ಉಪ ನಗರ ರೈಲು ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ.

ನೈಋತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಕೆ.ಸಿ.ಸ್ವಾಮಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗವನ್ನು 4 ಹಳಿಗಳಿಗೆ, ಯಶವಂತಪುರ-ಚನ್ನಸಂದ್ರ ಮಾರ್ಗವನ್ನು ಜೋಡಿಹಳಿಗಳನ್ನಾಗಿ ಪರಿವರ್ತಿಸುವ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.

ಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆ

ನೈಋತ್ಯ ರೈಲ್ವೆಯು ಈ ಯೋಜನೆಗೆ ಸಂಬಂಧಿಸಿದ ಟೆಂಡರ್ ದಾಖಲಾತಿಗಳನ್ನು ಅಂತಿಮಗೊಳಿಸಿದೆ. ಯಶವಂತಪುರ-ಚನ್ನಸಂದ್ರ ಮಾರ್ಗದ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಉಪನಗರ ರೈಲು ಸಂಪರ್ಕ ವ್ಯವಸ್ಥೆಗೆ ಇನ್ನಷ್ಟು ಬಲ ಸಿಗಲಿದೆ.

ದೇಶಕ್ಕೆ ಮಾದರಿಯಾದ ಧಾರವಾಡದ ಮುಗದ ರೈಲು ನಿಲ್ದಾಣದೇಶಕ್ಕೆ ಮಾದರಿಯಾದ ಧಾರವಾಡದ ಮುಗದ ರೈಲು ನಿಲ್ದಾಣ

ಈ ಯೋಜನೆ ಪೂರ್ಣಗೊಂಡ ಬಳಿಕ ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗಗಳು ಸ್ವಯಂ ಚಾಲಿತ ಸಿಗ್ನಲಿಂಗ್ ವ್ಯವಸ್ಥೆಗೆ ಬದಲಾವಣೆಯಾಗಲಿವೆ. ಈ ಎರಡೂ ಯೋಜನೆ ಪೂರ್ಣಗೊಂಡ ಬಳಿಕ ನಗರದ ರೈಲು ಸಂಚಾರದಲ್ಲಿ ಹಲವು ಬದಲಾಣೆಯಾಗುವ ನಿರೀಕ್ಷೆ ಇದೆ. ಯೋಜನೆಯ ವಿವರಗಳು ಇಲ್ಲಿವೆ....

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗ

ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗ

ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗವನ್ನು 4 ಹಳಿಗಳನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನು 493 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗಗಳು ಸ್ವಯಂ ಚಾಲಿತ ಸಿಗ್ನಲಿಂಗ್ ವ್ಯವಸ್ಥೆಗೆ ಬದಲಾವಣೆಯಾಗಲಿವೆ. ಇದರಿಂದಾಗಿ ಕಂಟೋನ್ಮೆಂಟ್ ಮತ್ತು ಬೈಯಪ್ಪನಹಳ್ಳಿ ಪ್ರದೇಶದಲ್ಲಿ ದಟ್ಟಣೆಯ ಅವಧಿಯಲ್ಲಿ ಉಂಟಾಗುವ ಸಂಚಾರ ಸಮಸ್ಯೆಯನ್ನು ನಿಭಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

314 ಕೋಟಿ ವೆಚ್ಚದ ಯೋಜನೆ

314 ಕೋಟಿ ವೆಚ್ಚದ ಯೋಜನೆ

314 ಕೋಟಿ ವೆಚ್ಚದಲ್ಲಿ ಯಶವಂತಪುರ-ಚನ್ನಸಂದ್ರ ಮಾರ್ಗವನ್ನು ಜೋಡಿಹಳಿಯಾಗಿ ಪರಿವರ್ತನೆ ಮಾಡಲಾಗುತ್ತದೆ. ಜೋಡಿಹಳಿ ನಿರ್ಮಿಸುವ ಕಾಮಗಾರಿಯು ಹೊಸೂರು ಮತ್ತು ಬೈಯಪ್ಪನಹಳ್ಳಿ ಮಾರ್ಗಕ್ಕೆ ಪೂರಕವಾಗಿರಲಿದೆ. ಇದರಿಂದ ವೈಟ್‌ಫೀಲ್ಡ್‌ ಮಾರ್ಗದಲ್ಲಿಯೂ ಹೆಚ್ಚಿನ ಉಪ ನಗರ ರೈಲುಗಳನ್ನು ಓಡಿಸಲು ಅನುಕೂಲವಾಗಲಿದೆ.

2021ರಲ್ಲಿ ಯೋಜನೆ ಪೂರ್ಣ

2021ರಲ್ಲಿ ಯೋಜನೆ ಪೂರ್ಣ

ಯಶವಂತಪುರ-ಚನ್ನಸಂದ್ರ ಮಾರ್ಗದ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗದ ಕಾಮಗಾರಿಗೆ ಇನ್ನೂ ಗಡುವನ್ನು ನಿಗದಿ ಮಾಡಿಲ್ಲ. ಈ ಯೋಜನೆಗೆ ಹಲವು ಸವಾಲುಗಳಿದ್ದು, ಬೈಯಪ್ಪನಹಳ್ಳಿ ರೈಲ್ವೇ ಗೇಟ್ ಬಳಿ ಫ್ಲೈ ಓವರ್ ನಿರ್ಮಾಣ ಮಾಡಲು ರಕ್ಷಣಾ ಇಲಾಖೆ ಭೂಮಿಯನ್ನು ಹಸ್ತಾಂತರ ಮಾಡಬೇಕಿದೆ.

ಪ್ರಧಾನ ಕೇಂದ್ರವಾಗಿ ನಿರ್ಮಾಣ

ಪ್ರಧಾನ ಕೇಂದ್ರವಾಗಿ ನಿರ್ಮಾಣ

ಕಂಟೋನ್ಮೆಂಟ್-ವೈಟ್‌ಫೀಲ್ಡ್‌ ಮಾರ್ಗದ ಕಾಮಗಾರಿಗೆ ಮೂರು ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇಲಾಖೆಯ ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ಕೈಗೊಂಡಿದ್ದು, ಕೋಚ್ ಟರ್ಮಿನಲ್ ಬೈಯಪ್ಪನಹಳ್ಳಿ ನಿಲ್ದಾಣವನ್ನು ಪ್ರಧಾನ ಕೇಂದ್ರವಾಗಿ ರೂಪಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

English summary
South Western Railway approved for the two new project in Bengaluru city. Yeshwantpur-Channasandra double track and Cantonment to Whitefield 4 lane project work will began soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X