Industry: ಕರ್ನಾಟಕದಲ್ಲಿ ವಿವಿಧ ಕೈಗಾರಿಕೆಗಳ ಆರಂಭಕ್ಕೆ ಮಹೂರ್ತ, ಭಾರೀ ಬಂಡವಾಳ ಹೂಡಿಕೆ?
ಬೆಂಗಳೂರು, ಜುಲೈ 02: ಕರ್ನಾಟಕ ರಾಜ್ಯದಲ್ಲಿ ವಾಹನಗಳ ಬಿಡಿಭಾಗ, ಜವಳಿ ಉತ್ಪನ್ನ, ನವೀಕರಿಸಬಹುದಾದ ಇಂಧನ, ಮಷಿನ್‌ಟೂಲ್ಸ್ ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು, ವಹಿವಾಟು ವಿಸ್ತರಿಸಲು ದಕ್ಷಿಣ ಕೊರಿಯಾದ ಈ ಬಹುರಾಷ್ಟ್ರೀಯ ಕಂಪನಿಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದರು.
ಜಪಾನಿನ ಐದು ದಿನಗಳ ಯಶಸ್ವಿ ಭೇಟಿ ಪೂರ್ಣಗೊಳಿಸಿದ ನಂತರ ಸಚಿವ ಎಂಬಿ. ಪಾಟೀಲ್ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ದಕ್ಷಿಣ ಕೊರಿಯಾಕ್ಕೆ ತೆರಳಿತು. ಈ ನಿಯೋಗವು ಈ ತಿಂಗಳ 5ರವರೆಗೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಸಮಾಲೋಚನೆ ನಡೆಸಿ ಬಂಡವಾಳ ಹೂಡಿಕೆ ಆಕರ್ಷಿಸಲಿದೆ.

ರಾಜ್ಯದಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಣೆ ಆಗುತ್ತಿರುವುದು ಮತ್ತು ಭಾರತದಲ್ಲಿನ ತಯಾರಿಕಾ ಘಟಕಗಳಲ್ಲಿ 'ಇವಿ'ಗಳನ್ನು ತಯಾರಿಸುವ ಬಗ್ಗೆ ಹುಂಡೈ ಮುಖ್ಯಸ್ಥರ ಜೊತೆಗಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಗೌರಿಬಿದನೂರಿನಲ್ಲಿ ಪ್ಲಾಸ್ಟಿಕ್ ಬಿಡಿಭಾಗ ತಯಾರಿಕಾ ಘಟಕ
ರಾಜ್ಯದಲ್ಲಿ ಕೈಗಾರಿಕಾ ಅಶಾಂತಿ (ಕಾರ್ಮಿಕರ ವಿವಾದಗಳು) ಕಡಿಮೆ ಪ್ರಮಾಣದಲ್ಲಿ ಇರುವುದು ಮತ್ತು ಪೂರೈಕೆ ಸರಪಣಿಯಲ್ಲಿ ಸ್ಥಿರತೆ ಇರುವುದನ್ನು ಸಚಿವರು ಹುಂಡೈ ಕಂಪನಿಯ ಪ್ರಮುಖರ ಗಮನಕ್ಕೆ ತಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಹನಗಳ ಪ್ಲಾಸ್ಟಿಕ್ ಬಿಡಿಭಾಗ ತಯಾರಿಸುವ ಘಟಕ ಸ್ಥಾಪಿಸಲಿರುವ ನಿಫ್ಕೊ ಕೊರಿಯಾ ಕಂಪನಿಗೆ ಅಗತ್ಯವಾದ ಭೂಮಿ ಸ್ವಾಧೀನ ಮತ್ತು ಇತರ ಅನುಮೋದನೆಗಳಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆ. ಕಾರ್ಖಾನೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಇವಿ ಬಳಕೆ ಹೆಚ್ಚಿಸಲು ಆಸಕ್ತಿ
ರಾಜ್ಯದಲ್ಲಿ ಫೈಬರ್ ಆಪ್ಟಿಕ್ ಅಳವಡಿಕೆ ಯೋಜನೆಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹೊಯ್ಸಂಗ್ ಅಡ್ವಾನ್ಸ್ಡ್ ಮಟೇರಿಯಲ್ಸ್ ಇಂಗಿತ ವ್ಯಕ್ತಪಡಿಸಿದೆ.
ಕಂಪನಿಯ ಉಪಾಧ್ಯಕ್ಷ ಹಾಂಗ್ ಸಂಗ್ ಅಹ್ನ್ ಅವರು ರಾಜ್ಯದ ನಿಯೋಗದ ಜೊತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಟೈರ್ ಕೋರ್ಡ್ಸ್ ತಯಾರಿಕೆಗೆ ಭಾರತವನ್ನು ಪ್ರಮುಖ ನೆಲೆಯನ್ನಾಗಿ ಅಭಿವೃದ್ಧಿಪಡಿಸಲು ಕಂಪನಿಯ ಉದ್ದೇಶಿಸಿದೆ.

ಭಾರತದಲ್ಲಿ ಪರಿಸರ ಸ್ನೇಹಿ ಸರಕುಗಳು ಹಾಗೂ ಸುಧಾರಿತ ಜವಳಿ ಉತ್ಪನ್ನಗಳನ್ನು ತಯಾರಿಸುವ ವಹಿವಾಟು ವಿಸ್ತರಿಸುವ ಅವಕಾಶಗಳನ್ನು ಕಂಪನಿಯು ಪರಿಶೀಲಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸೌರಶಕ್ತಿ ಯೊಜನೆಗಳಿಗೆ ಕರ್ನಾಟಕದಲ್ಲಿ ಉತ್ತೇಜನ
ರಾಜ್ಯದಲ್ಲಿನ ನವೀಕರಿಸಬಹುದಾದ ಇಂಧನ ವಲಯದಲ್ಲಿನ ಭವಿಷ್ಯದ ವಿಸ್ತರಣೆ ಬಗ್ಗೆ ಸೌರಕೋಶಗಳ ಸೆಮಿಕಂಡಕ್ಟರ್ ತಯಾರಿಸುವ ಒಸಿಐ ಹೋಲ್ಡಿಂಗ್ಸ್ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದರು. ಸೌರಶಕ್ತಿ ಫಲಕಗಳನ್ನು ತಯಾರಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರವು ಕೊಡಮಾಡುತ್ತಿರುವ ಉತ್ತೇಜನಗಳನ್ನು ನಿಯೋಗವು ಕಂಪನಿಯ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟಿತು.
ವಾಹನ ಬಿಡಿಭಾಗ ತಯಾರಿಸುವ ಎಚ್‌ಎಲ್ ಮಂಡೊ ಕಾರ್ಪೊರೇಷನ್ನಿನ ಸಿಎಫ್‌ಒ ಲೀ ಚುಲ್ ಮತ್ತು ನಿರ್ದೇಶಕ ಕಿಮ್ ಇವುನ್ ಸಂಗ್ ಅವರನ್ನು ರಾಜ್ಯದ ನಿಯೋಗವು ಭೇಟಿ ಮಾಡಿತು.
ರಾಜ್ಯದಲ್ಲಿನ ಉದ್ಯಮ ಅನುಕೂಲತೆ ತಿಳಿಸಿದ ಸಚಿವ
ಬೆಂಗಳೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಕಂಪನಿಯು ರಾಜ್ಯದಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಉತ್ಸುಕತೆ ತೋರಿದೆ. ವಿದ್ಯುತ್‌ಚಾಲಿತ ಸೇರಿದಂತೆ ರಾಜ್ಯದಲ್ಲಿನ ಒಟ್ಟಾರೆ ವಾಹನ ಉದ್ಯಮ ಕ್ಷೇತ್ರದಲ್ಲಿನ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯದ ನಿಯೋಗವು ಆಹ್ವಾನ ನೀಡಿದೆ.
ಮಷೀನ್‌ಟೂಲ್ಸ್ ತಯಾರಿಕಾ ಕಂಪನಿ ಡಿಎನ್ ಸೊಲುಷನ್ಸ್, ಬೆಂಗಳೂರು ಬಳಿ 25 ಎಕರೆ ಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಲಿದೆ. ಸಚಿವ ಭೇಟಿಯಲ್ಲಿ ಸೋಲ್‌ನಲ್ಲಿ ಹೊಯ್ಸಂಗ್ ಅಡ್ವಾನ್ಸ್ಡ್ ಮಟೇರಿಯಲ್ಸ್, ಎಚ್‌ಎಲ್ ಮಾಂಡೊ ಕಾರ್ಪೊರೇಷನ್, ನಿಫ್ಕೊ, ಡಿಎನ್ ಸೊಲುಷನ್ಸ್ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರು ಪಾಲ್ಗೊಂಡಿದ್ದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications