ದಕ್ಷಿಣ ಭಾರತದ ಮೊದಲ ಡಬ್ಬಲ್ ಡೆಕ್ಕರ್ ಫ್ಲೈಓವರ್: ವಿಶೇಷತೆಯೇನು?
ಬೆಂಗಳೂರು,
ಮೇ 10: ದಕ್ಷಿಣ ಭಾರತದ ಮೊದಲ ಡಬ್ಬಲ್ ಡೆಕ್ಕರ್ ಫ್ಲೈಓವರ್ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, 2021ಕ್ಕೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಬಳಕೆಗೆ ದೊರೆಯಲಿದೆ. id="toptextpromo"> id='are-slot-1' class='oiad oi-axt oiadv'>ಇದರಲ್ಲಿ
ರಸ್ತೆ ಹಾಗೂ ರೈಲು ಎರಡೂ ಇರುವ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿದೆ. ಇದು ರಾಗಿಗುಡ್ಡ ಹಾಗೂ ಸಿಲ್ಕ್‌ಬೋರ್ಡ್ ನಡುವೆ 3.35 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. id='are-slot-2' class='oiad oi-axt oiadv'>
ಮೆಟ್ರೋ ಹಾಗೂ ಇತರೆ ವಾಹನಗಳಿಗೆ ಪತ್ಯೇಕ ಡೆಕ್
ಮೇಲ್ಸೇತುವೆಯಲ್ಲಿ ಕೆಳಗಿನ ಡೆಕ್ ವಾಹನಗಳಿಗೆ ಹಾಗೂ ಮೇಲಿನ ಡೆಕ್ ಮೆಟ್ರೋಗಾಗಿ ನಿರ್ಮಾಣಗೊಳ್ಳುತ್ತಿದೆ. ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಎರಡನೇ ಹಂತದ ಮೆಟ್ರೋ ಯೋಜನೆಗೆ ಇದು ಲಭ್ಯವಾಗಲಿದೆ.

ಪೀಕ್ ಅವಧಿಯಲ್ಲಿ ದಟ್ಟಣೆ ಕಡಿಮೆಯಾಗಲಿದೆ
ಪೀಕ್ ಅವಧಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ಸಿಗ್ನೇಚರ್ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ನಾಲ್ಕು ಪಥದ ಎಲಿವೇಟೆಡ್ ರಸ್ತೆ, ನಾಲ್ಕು ಸಾದಾ ರಸ್ತೆಯಿಂದ ಸಂಚಾರ ದಟ್ಟಣೆ ತಗ್ಗಲಿದೆ.

ನಿರ್ಮಾಣ ಕಾಮಗಾರಿ ಯಾವ ಹಂತದಲ್ಲಿದೆ?
ಎಲಿವೇಟೆಡ್ ರಸ್ತೆ ಹಾಗೂ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 12 ಪಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಹಾಗೆಯೇ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಕಾಮಗಾರಿ ಆರಂಭವಾಗಿದೆ. ಒಟ್ಟು 70 ಪಿಲ್ಲರ್‌ಗಳನ್ನು ಅಳವಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೇಲ್ಸೇತುವೆ ಮೇಲೆ ಮೆಟ್ರೋ ಸಂಚರಿಸಲಿದೆ. ಎಲಿವೇಟೆಡ್ ರಸ್ತೆನ್ನು ಸಾದಾ ರಸ್ತೆಗಿಂತ 8 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಹಾಗೆಯೇ ಮೆಟ್ರೋ ಮಾರ್ಗವನ್ನು ಕೂಡ 16 ಮೀಟರ್ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಬಿಎಂಆರ್‌ಸಿಎಲ್ ಸವಾಲೆಂದೇ ಹೇಳಬಹುದಾಗಿದೆ.

ಡಬ್ಬಲ್ ಡೆಕ್ಕರ್ ಫ್ಲೈಓವರ್ ಇನ್ನೆಲ್ಲಿದೆ?
ಜೈಪುರ, ನಾಗಪುರ, ಮುಂಬೈ ನಲ್ಲಿ ಈಗಾಗಲೇ ಇದೇ ಮಾದರಿಯ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಇದೆ. ಆದರೆ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ರಾಗಿಗುಡ್ಡ, ಆರ್‌ವಿ ರಸ್ತೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಜಯದೇವ ಆಸ್ಪತ್ರೆ ಮಾರ್ಗವೂ ಇದರಲ್ಲಿ ಅಡಕವಾಗಿದೆ.












Click it and Unblock the Notifications