Get Updates
Get notified of breaking news, exclusive insights, and must-see stories!

ಡ್ರಗ್ಸ್ ವಿರುದ್ಧ ಸಮರ; 5 ನಾಯಿಗಳಿಗೆ ವಿಶೇಷ ತರಬೇತಿ ನೀಡಿದ ಬೆಂಗಳೂರು ಪೊಲೀಸ್

ಬೆಂಗಳೂರು, ಜೂನ್ 24: ಉದ್ಯಾನ ನಗರಿ ಬೆಂಗಳೂರು ನಗರದಲ್ಲಿ ಮಾದಕವಸ್ತುಗಳ ಪತ್ತೆ, ಸಾಗಣೆ ಪತ್ತೆ ಹಚ್ಚಲು ಪೊಲೀಸರು ಹಲವಾರು ಕ್ರಮ ಕೈಗೊಂಡಿದ್ದಾರೆ. ಈಗ ಇದಕ್ಕಾಗಿಯೇ 5 ನಾಯಿಗಳಿಗೆ ವಿಶೇಷ ತರಬೇತಿಯನ್ನು ಕೊಡಿಸಿದ್ದು, ಅವುಗಳು ತಮ್ಮ ಸೇವೆಗೆ ಸಜ್ಜಾಗಿವೆ.

ದಿನದಿಂದ ದಿನಕ್ಕೆ ಮಾದಕವಸ್ತು ಕಳ್ಳಸಾಗಣೆಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಆದ್ದರಿಂದ ಆಧುನಿಕ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಹಲವು ಸವಾಲುಗಳಿವೆ. ಇದಕ್ಕಾಗಿ ಶ್ವಾನದಳವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

Sniff Out Synthetic Drugs Bengaluru Police Trained 5 Dogs

ಈಗ ಬೆಂಗಳೂರು ನಗರದ ಪೊಲೀಸರು ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ವಿವಿಧ ಹೊಸ ಮಾದರಿಯ ಮಾದಕವಸ್ತು ಪತ್ತೆ ಹಚ್ಚಲು ಶ್ವಾನದಳದ 5 ನಾಯಿಗಳಿಗೆ ವಿಶೇಷ ತರಬೇತಿಯನ್ನು ಕೊಡಿಸಿದ್ದಾರೆ. ನಗರದಲ್ಲಿ ನಡೆಯುವ ದಾಳಿಗಳಲ್ಲಿ ಈ ನಾಯಿಗಳನ್ನು ಮಾದಕವಸ್ತು ಪತ್ತೆ ಹಚ್ಚಲು ಬಳಕೆ ಮಾಡಲಾಗುತ್ತದೆ.

ವಿಶೇಷ ತರಬೇತಿ: ಈಗಲೂ ಬೆಂಗಳೂರು ನಗರ ಪೊಲೀಸರ ಶ್ವಾನದಳದಲ್ಲಿ ತರಬೇತಿ ಪಡೆದ ಶ್ವಾನಗಳಿವೆ. ಇವುಗಳು ಸಾಂಪ್ರದಾಯಿಕ ಮಾದಕವಸ್ತುಗಳಾದ ಗಾಂಜಾ, ಚರಸ್ ಮುಂತಾದವುಗಳನ್ನು ಪತ್ತೆ ಮಾಡುತ್ತವೆ. ಆದರೆ ಆಧುನಿಕ ಮಾದಕವಸ್ತುಗಳನ್ನು ಪತ್ತೆ ಮಾಡಲು ಈಗ ಶ್ವಾನದಳದ ಆಯ್ದ 5 ನಾಯಿಗಳಿಗೆ ವಿಶೇಷ ತರಬೇತಿ ಕೊಡಿಸಲಾಗಿದೆ.

ಕೆಲವು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಹೀಗೆ ತರಬೇತಿ ಪಡೆದ ಶ್ವಾನಗಳನ್ನು ಬಳಕೆ ಮಾಡಿಕೊಂಡು ಅಲ್ಲಿ ಮಾದಕವಸ್ತುಗಳನ್ನು ಬಳಕೆ ಮಾಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ರಾಜ್ಯಗಳಲ್ಲಿನಾರ್ಕೋಟಿಕ್ ಟಾಸ್ಕ್ ಫೋರ್ಸ್ ಇದೆ. ಸ್ಥಳೀಯ ಪೊಲೀಸರು ಇದನ್ನು ನಿರ್ವಹಣೆ ಮಾಡುತ್ತಾರೆ. ಬೆಂಗಳೂರು ನಗರ ಪೊಲೀಸರು ಹೊಸದಾಗಿ ಶ್ವಾನದಳಕ್ಕೆ ಸೇರುವ ಎಲ್ಲಾ ನಾಯಿಗಳಿಗೆ ಆಧುನಿಕ ಮಾದಕವಸ್ತುಗಳನ್ನು ಪತ್ತೆ ಮಾಡುವ ತರಬೇತಿ ನೀಡಲು ಮುಂದಾಗಿದ್ದಾರೆ.

ಈಗ ವಿಶೇಷ ತರಬೇತಿ ಪಡೆದ 5 ಶ್ವಾನಗಳ ಪೈಕಿ 4 ಜರ್ಮನ್ ಶಫರ್ಡ್ ಮತ್ತೊಂದು ಬೀಗಲ್ ತಳಿಯವು. ಬೇರೆ ಬೇರೆ ಮಾದರಿಗಳ ಮೂಲಕ ತರಬೇತುದಾರರು ಈ ನಾಯಿಗಳಿಗೆ ಅಗತ್ಯ ತರಬೇತಿಯನ್ನು ನೀಡಿದ್ದು, 10 ಬಗೆಯ ಮಾದಕ ವಸ್ತುಗಳನ್ನು ಇವು ವಾಸನೆ ಮೂಲಕ ಪತ್ತೆ ಹಚ್ಚಲಿವೆ.

ಈ ನಾಯಿಗಳಿಗೆ ಮೊದಲ ಹಂತದಲ್ಲಿ ಮಾದಕ ವಸ್ತು ಪತ್ತೆ ಹಚ್ಚುವ ತರಬೇತಿ ನೀಡಲಾಯಿತು. ಬಳಿಕ ಲಗೇಜ್, ಬ್ಯಾಗ್, ಮನುಷ್ಯರು, ವಾಹನ, ಕಟ್ಟಡ ಹೀಗೆ ವಿವಿಧ ಕಡೆ ಸಂಗ್ರಹವಾಗಿರುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ತರಬೇತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಅವುಗಳನ್ನು ಪತ್ತೆ ಹಚ್ಚಲು ನಾಯಿಗಳಿಗೆ ಸೂಚನೆ ನೀಡಲಾಗುತ್ತದೆ. ವಸ್ತು ಪತ್ತೆಯಾದರೆ ಕೆಲವು ನಾಯಿಗಳು ಬಾಲ ಅಲ್ಲಾಡಿಸುವ ಮೂಲಕ ಸೂಚನೆ ನೀಡುತ್ತವೆ. ಕೆಲವು ಬೊಗಳುತ್ತವೆ ಎಂದು ತರಬೇತುದಾರರು ತಿಳಿಸಿದ್ದಾರೆ.

ರಮಣ್ ಗುಪ್ತ, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಮಾತನಾಡಿ, "ಸಾಂಪ್ರದಾಯಿಕ ಡ್ರಗ್ಸ್‌ಗಳನ್ನು ಪತ್ತೆ ಹಚ್ಚುವ ತರಬೇತಿಯನ್ನು ಪಡೆದ ಹಲವು ಶ್ವಾನಗಳು ದಳದಲ್ಲಿವೆ. ಈಗ ನಗರದ ಅನೇಕ ಪಾರ್ಟಿಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಬಳಕೆ ಮಾಡಲಾಗುತ್ತದೆ. ಈಗ ತರಬೇತಿ ಪಡೆದ ಶ್ವಾನಗಳು ಈ ಮಾದರಿಯ ಡ್ರಗ್ಸ್ ಪತ್ತೆ ಹಚ್ಚುತ್ತಿವೆ" ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+