ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲಿಕಾನ್ ಸಿಟಿಯಲ್ಲಿ ಸ್ಕೈಬಸ್, ಟ್ರಾಲಿ ಬಸ್ ಸೇವೆ ಆರಂಭ: ಗಡ್ಕರಿ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 09: ಹೆಚ್ಚುತ್ತಿರುವ ಜನಸಂಖ್ಯೆಗೆ ಸಾರಿಗೆ ವ್ಯವಸ್ಥೆ ಒದಗಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸ್ಕೈಬಸ್‌, ಟ್ರಾಲಿ ಬಸ್‌ ಸೇವೆ ಆರಂಭಿಸುವ ಚಿಂತನೆ ಇದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ಮಂಥನ್‌ ರಾಷ್ಟ್ರೀಯ ಸಮ್ಮೇಳನ' ಸಮಾರೋಪ ಸಮಾರಂಭ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಖಾಸಗಿ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸದ್ಯಕ್ಕಿರುವ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಸುಸಜ್ಜಿತ ಮತ್ತು ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒದಗಿಸಬೇಕಿದೆ. ಈ ಕಾರಣಕ್ಕೆ ಐಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಸ್ಕೈಬಸ್, ಟ್ರಾಲಿ ಬಸ್‌ಗಳ ಸೇವೆ ಆರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಸೀಟ್ ಬೆಲ್ಟ್ ಅಲಾರಂ ಬ್ಲಾಕರ್‌ಗಳ ಆನ್‌ಲೈನ್ ಮಾರಾಟ ನಿಲ್ಲಿಸುವಂತೆ ಸಾರಿಗೆ ಸಚಿವಾಲಯ ಪತ್ರ ಸೀಟ್ ಬೆಲ್ಟ್ ಅಲಾರಂ ಬ್ಲಾಕರ್‌ಗಳ ಆನ್‌ಲೈನ್ ಮಾರಾಟ ನಿಲ್ಲಿಸುವಂತೆ ಸಾರಿಗೆ ಸಚಿವಾಲಯ ಪತ್ರ

ಬೆಂಗಳೂರು ನಗರದ ಒಳಭಾಗದಲ್ಲಿನ ರಸ್ತೆಗಳ ವಿಸ್ತೀರ್ಣ ಹೆಚ್ಚಿಸಲು, ಹೊಸ ಕಾರಿಡಾರ್‌ ನಿರ್ಮಾಣ ಮಾಡಲು ಭೂ ಸ್ವಾಧೀನ ಪ್ರಕ್ರಿಯೆ ಕಾಮಗಾರಿ ಆರಂಭ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತವೆ. ಇದರ ಬದಲಾಗಿ ಸ್ಕೈಬಸ್, ಟ್ರಾಲಿ ಬಸ್‌ ಸೇವೆ ಆರಂಭ ಮತ್ತು ಬಹು ಅಂತಸ್ತು ಸಾರಿಗೆ ಕಾರಿಡಾರ್‌ ನಿರ್ಮಿಸುವ ಬಗ್ಗೆ ಮಾತುಕತೆ ಆಗಿದೆ.

ಏನಿದು ಸ್ಕೈ ಬಸ್ ಸೇವೆ

ಏನಿದು ಸ್ಕೈ ಬಸ್ ಸೇವೆ

ಸ್ಕೈಬಸ್‌ಗಳು ಹಾಲಿ ಇರುವ ನಮ್ಮ ಮೆಟ್ರೋ ಪ್ಲೈ ಓವರ್‌ಗಳ ಕೆಳ ಭಾಗದಲ್ಲಿ ಜೋತು ಬಿದ್ದ ರೀತಿಯಲ್ಲಿ ಈ ಸ್ಕೈ ಬಸ್‌ಗಳು ಸಂಚಾರ ನಡೆಸುತ್ತವೆ. ಇಂತಹ ಸೇವೆಯು ವಾರಣಾಸಿ ಸೇರಿದಂತೆ ಕೆಲವು ನಗರಗಳಲ್ಲಿ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಈ ಸೇವೆ ಸಾಧ್ಯವೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದು ಗಡ್ಕರಿ ತಿಳಿಸಿದರು.

ಸ್ಕೈ ಬಸ್‌ ಸೇವೆಗಾಗಿ ನಗರಕ್ಕೆ ಅಧ್ಯಯನ ತಂಡ

ಸ್ಕೈ ಬಸ್‌ ಸೇವೆಗಾಗಿ ನಗರಕ್ಕೆ ಅಧ್ಯಯನ ತಂಡ

ಜಗತ್ತಿನಲ್ಲಿ ಆಸ್ಟ್ರಿಯಾ ಮತ್ತು ಫ್ರಾನ್ಸ್‌ ಮೂಲದ ಎರಡು ಕಂಪನಿಗಳು ಮಾತ್ರವೇ ಈ ಸ್ಕೈಬಸ್ ಸೇವೆ ನೀಡುತ್ತಿವೆ. ಆ ಸಂಸ್ಥೆಗಳ ತಜ್ಞರ ತಂಡವು ಬೆಂಗಳೂರಿಗೆ ಆಗಮಿಸಿ ಇಲ್ಲಿ ಸ್ಕೈಬಸ್‌ ಸೇವೆ ಆರಂಭಿಸಬಹುದೇ. ಅದಕ್ಕೆ ಪೂರಕ ವಾತಾವರಣ ಇಲ್ಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ನಂತರ ಮೂರು ತಿಂಗಳಲ್ಲಿ ಸರ್ಕಾರಕ್ಕೆ ಆ ಬಗ್ಗೆ ವರದಿ ನೀಡಲಿದ್ದಾರೆ. ಬಳಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತಿಮವಾಗಿ ನಿರ್ಧರಿಸಿ ಯೋಜನೆ ಜಾರಿಗೊಳಿಸವೆ ಎಂದರು.

ಖಾಸಗಿ ವಾಹನ ಕಡಿಮೆಗೆ ಟ್ರಾಲಿ ಬಸ್ ಸೇವೆ

ಖಾಸಗಿ ವಾಹನ ಕಡಿಮೆಗೆ ಟ್ರಾಲಿ ಬಸ್ ಸೇವೆ

ಹೆಚ್ಚುತ್ತಿರುವ ಜನಸಂಖ್ಯೆ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಒಂದು ಮನೆಗೆ ನಾಲ್ಕೈದು ವಾಹನಗಳು ಇರುತ್ತವೆ. ಕೆಲಸ ನಿರ್ವಹಿಸುತ್ತಾ ವೇಗವಾಗಿ ಕಂಪನಿ, ಕಚೇರಿಗೆ ತೆರಳಲು ಖಾಸಗಿ ವಾಹನಗಳನ್ನು ಜನ ಬಳಸುತ್ತಿದ್ದಾರೆ. ಅದನ್ನು ಕಡಿಮೆ ಮಾಡಲು ಟ್ರಾಲಿ ಸೌಲಭ್ಯವುಗಳ್ಳ ಬಸ್ ಸೇವೆ ಆರಂಭಕ್ಕೆ ಚಿಂತನೆ ಇದೆ. ಇದರಲ್ಲಿ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಕಚೇರಿ ತೆರಳುವಂತೆ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಸಾರ್ವಜನಿಕ ಸಾರಿಗೆ ಅವಲಂಬನೆ ಹೆಚ್ಚಾಗುತ್ತದೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.

3 ಅಂತಸ್ತಿನ ಸಾರಿಗೆಗೆ ರಾಜ್ಯ ಸಮ್ಮತಿ

3 ಅಂತಸ್ತಿನ ಸಾರಿಗೆಗೆ ರಾಜ್ಯ ಸಮ್ಮತಿ

ಇದೇ ವೇಳೇ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಸ್ತುತದಲ್ಲಿ ಬೆಂಗಳೂರಲ್ಲಿ ಹೊಸ ರಸ್ತೆ ನಿರ್ಮಾಣ ಇಲ್ಲವೇ ಹಾಲಿ ರಸ್ತೆಗಳನ್ನು ವಿಸ್ತರಿಸುವುದು ಕಷ್ಟ ಸಾಧ್ಯ. ಈ ಕಾರಣದಿಂದಲೇ ಸರ್ಕಾರ ಬಹುಮಾದರಿ ಸಾರಿಗೆ ಅಂದರೆ ಮೂರು ಅಂತಸ್ತಿನ ಸಾರಿಗೆ ಕಾರಿಡಾರ್ ನಿರ್ಮಿಸಲು ನೀರ್ಧರಿಸಿದೆ. ಮೇಲ್ಸೇತುವೆ ಮೇಲೆ ಮೆಟ್ರೋ, ಅದರ ಕೆಳ ಭಾಗದಲ್ಲಿ ಸ್ಕೈ ಬಸ್‌, ಅದರ ಕಳೆಗೆ ರಸ್ತೆ ಸಾರಿಗೆ ಸೇವೆಗೆ ಸರ್ಕಾರ ಸಮ್ಮಿತಿಸಿದೆ.

ಮೊದಲು ಇದನ್ನು ಬೈಯಪ್ಪನಹಳ್ಳಿ ಭಾಗದಲ್ಲಿ ಪ್ರಯೋಗಿಕವಾಗಿ ನಡೆಸಲಾಗುವುದು. ನಂತರ ನಗರದೊಳಗೆ ಅಳವಡಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

English summary
Sky bus and Trolley Bus service start in Bengaluru City, said Union road transport minister Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X