ವಿರೂಪರೇ, ಮರುಸೌಂದರ್ಯಕ್ಕಾಗಿ ವಿಕ್ಟೋರಿಯಾಕ್ಕೆ ತೆರಳಿ
ಬೆಂಗಳೂರು, ಅಕ್ಟೋಬರ್, 13 : ಬೆಂಕಿ ಅವಘಡ, ರಸ್ತೆ ಅಪಘಾತ, ಆಸಿಡ್ ದಾಳಿ, ವಿವಿಧ ಚರ್ಮ ಕಾಯಿಲೆಗಳಿಗೆ ತುತ್ತಾಗಿ ಚರ್ಮದ ಸೌಂದರ್ಯ ಹಾಳಾಗಿದೆಯೇ? ನಿಮ್ಮ ವಿರೂಪತೆ ನಿಮ್ಮನ್ನು ಗಾಢವಾಗಿ ಕಾಡುತ್ತಿದೆಯಾ?ಹಾಗಾದರೆ ಚರ್ಮದ ಕುರಿತಾಗಿ ನಿಮಗಿರುವ ಬೇಸರ ಕಡಿಮೆಯಾಗಲು ನವೆಂಬರ್ ತಿಂಗಳವರೆಗೆ ನೀವು ಕಾಯಲೇಬೇಕು.
ರಾಜ್ಯದಲ್ಲಿ ಮೊದಲ ಬಾರಿಗೆ ನಗರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮ ಬ್ಯಾಂಕ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದ್ದು, ನವೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇಲ್ಲಿ ರಕ್ತದಾನ, ಅಂಗಾಂಗ ದಾನಗಳಂತೆ ಚರ್ಮದಾನಕ್ಕೂ ಅವಕಾಶ ಸಿಗಲಿದೆ. ಇದರಿಂದ ವಿರೂಪಗೊಂಡ ಚರ್ಮಗಳಿಗೆ ಹೊಸ ಕಾಂತಿ ದೊರೆಯುವ ಎಲ್ಲಾ ಭರವಸೆಗಳು ಗೋಚರವಾಗುತ್ತಿದೆ.[ಚರ್ಮದಾನ ಅಭಿಯಾನಕ್ಕೆ ನಟ ಪ್ರೇಮ್ ರಿಂದ ಚಾಲನೆ]

ಹೊಸ ಚರ್ಮ ಬ್ಯಾಂಕ್ ನಿರ್ಮಾಣ ಮಾಡಲು ಬೆಂಗಳೂರು ವೈದ್ಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್ ಐ) ಮತ್ತು ರೋಟರಿ ಕ್ಲಬ್ ಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಗತ್ಯ ಉಪಕರಣಗಳನ್ನು ರೋಟರಿ ಕ್ಮಬ್ ಒದಗಿಸಲಿದೆ ಕೇಂದ್ರದ ನಿರ್ವಹಣೆ ಹಾಗೂ ಅಗತ್ಯ ಮಾನವ ಸಂಪನ್ಮೂಲ ದೊರಕಿಸುವ ಹೊಣೆಯನ್ನು ಬಿಎಂಸಿಆರ್ ಐ ಹೊರಲಿದೆ. ತಜ್ಞ ವೈದ್ಯರಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ.
ಚರ್ಮದಾನ ಮಾಡುವವರು ಇದನ್ನು ನೆನಪಿನಲ್ಲಿಡಿ :
* ಚರ್ಮದಾನ ಮಾಡುವ ವ್ಯಕ್ತಿಗೆ 18 ವರ್ಷ ತುಂಬಿರಬೇಕು.
* ಎಚ್ಐವಿ ಸೋಂಕು, ವಿವಿಧ ಚರ್ಮರೋಗಗಗಳಿರುವ ವ್ಯಕ್ತಿಗಳಿಂದ ಚರ್ಮ ಸ್ವೀಕರಿಸುವುದಿಲ್ಲ.
* ಮೃತ ವ್ಯಕ್ತಿಯ 6 ಗಂಟೆಗಳೊಳಗೆ ಚರ್ಮ ಸಂಗ್ರಹಿಸಬೇಕು
* ದಾನ ಪಡೆದ ಚರ್ಮವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ 3-4 ವಾರ ಮಾತ್ರ ಸಂಗ್ರಹಿಸಲಾಗುವುದು
* 50% ಹೆಚ್ಚು ಸುಟ್ಟ ಚರ್ಮಕ್ಕೆ ಮಾತ್ರ ಹೊಸ ಚರ್ಮ ನೀಡಲಾಗುತ್ತದೆ.[ಹುಡುಗಿ ಜೀನ್ಸ್ ಧರಿಸಿದರೆ ಆಸಿಡ್ ದಾಳಿ ಗ್ಯಾರಂಟಿ!]
ಪ್ರಸ್ತುತ ಎಲ್ಲೆಲ್ಲಿವೆ ಚರ್ಮ ಬ್ಯಾಂಕ್?
ಮುಂಬೈನಲ್ಲಿ ನ್ಯಾಷನಲ್ ಬರ್ನ್ಸ್ ಸೆಂಟರ್, ಚೆನ್ನೈನಲ್ಲಿ ಸ್ಕಿನ್ ಬರ್ನ್ ಕೇರ್ ಸೆಂಟರ್ ಪ್ರಸ್ತು ಕಾರ್ಯನಿರ್ವಹಿಸುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆ ದೇಶದ ಮೂರನೇ ಸ್ಕಿನ್ ಬರ್ನ್ ಸೆಂಟರ್ ಎಂಬ ಹೆಗ್ಗಳಿಕೆ ಇದು ಪಾತ್ರವಾಗಲಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications