SIR: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಆಗಸ್ಟ್ 8ರ ಒಳಗೆ ನೀವು ಈ ಕೆಲಸ ಮಾಡಬೇಕು!
SIR: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಆಗಸ್ಟ್ 8ರ ಒಳಗೆ ಗಣತಿ ನಮೂನೆ ಸಲ್ಲಿಸಿ - ಯಾವುದೇ ಸಮಸ್ಯೆ ಎದುರಾದರೆ ತಕ್ಷಣ 1950 ಸಹಾಯವಾಣಿಗೆ ಕರೆ ಮಾಡಿ ಎಂದೂ ಹೇಳಲಾಗಿದೆ.
ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision - SIR) ಕಾರ್ಯಕ್ರಮವು ಅಂತಿಮ ಹಂತದಲ್ಲಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ಗಣತಿದಾರರು (Enumerators)/ಬೂತ್ ಮಟ್ಟದ ಅಧಿಕಾರಿಗಳ (BLOs) ಮನೆ-ಮನೆ ಭೇಟಿ ಹಾಗೂ ಗಣತಿ ನಮೂನೆಗಳ ಸಂಗ್ರಹಣೆ ಕಾರ್ಯವು 08.08.2026 ರಂದು ಮುಕ್ತಾಯಗೊಳ್ಳಲಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಎಲ್ಲ ಅರ್ಹ ಮತದಾರರು ಆಗಸ್ಟ್ 8 ರೊಳಗೆ ಕಡ್ಡಾಯವಾಗಿ ತಮ್ಮ ಗಣತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವಂತೆ ಪೊಮ್ಮಲ ಸುನೀಲ್ ಕುಮಾರ್ ಅವರು ಮನವಿ ಮಾಡಿದ್ದಾರೆ. SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ, ಗೊಂದಲ ಅಥವಾ ದೂರು ಇದ್ದಲ್ಲಿ ಸಾರ್ವಜನಿಕರು ತಕ್ಷಣವೇ 1950 ಮತದಾರರ ಸಹಾಯವಾಣಿ"ಯನ್ನು ಸಂಪರ್ಕಿಸಬಹುದು.
SIR: 1950 ಸಹಾಯವಾಣಿ ಮೂಲಕ ಕೆಳಕಂಡ ವಿಷಯಗಳಿಗೆ ನೆರವು ದೊರೆಯಲಿದೆ:
1. ಗಣತಿದಾರರು ಅಥವಾ BLO ರವರು ಮನೆಗೆ ಭೇಟಿ ನೀಡದಿರುವುದು.
2. ಗಣತಿ ನಮೂನೆ ಲಭ್ಯವಾಗದಿರುವುದು.
3. ನಮೂನೆ ಭರ್ತಿ ಮಾಡುವ ವಿಧಾನ ಹಾಗೂ ಅಗತ್ಯ ದಾಖಲೆಗಳ ಕುರಿತು ಮಾಹಿತಿ.
4. ಸಲ್ಲಿಸಿದ ನಮೂನೆ ಸ್ವೀಕಾರ ಅಥವಾ ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳು.
5. ಮತದಾರರ ವಿವರಗಳಲ್ಲಿನ ತಿದ್ದುಪಡಿ, ಸೇರ್ಪಡೆ ಅಥವಾ ಇತರೆ SIR ಸಂಬಂಧಿತ ಮಾರ್ಗದರ್ಶನ.
6. SIR ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ದೂರು ದಾಖಲಿಸಿ ಅದರ ತ್ವರಿತ ಪರಿಹಾರ.
SIR: ವೇಳಾಪಟ್ಟಿ (ಕರ್ನಾಟಕ)
1. 08.08.2026 - ಮನೆ-ಮನೆ ಭೇಟಿ ಹಾಗೂ ಗಣತಿ ನಮೂನೆಗಳ ಸಂಗ್ರಹಣೆಯ ಕೊನೆಯ ದಿನ.
2. 17.08.2026 - ಕರಡು ಮತದಾರರ ಪಟ್ಟಿ ಪ್ರಕಟಣೆ.
3. 17.08.2026 ರಿಂದ 16.09.2026 - ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ.
4. 19.10.2026 - ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಪ್ರತಿಯೊಬ್ಬ ಅರ್ಹ ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಗದಿತ ಅವಧಿಯೊಳಗೆ ತಮ್ಮ ವಿವರಗಳನ್ನು ದೃಢೀಕರಿಸುವ ಮೂಲಕ ನಿಖರ ಹಾಗೂ ಸಮಗ್ರ ಮತದಾರರ ಪಟ್ಟಿಯ ಸಿದ್ಧತೆಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
