BLR Airport: ಬೆಂಗಳೂರಿಗೆ ಬಂದಿಳಿದ ವಿಶೇಷ ಲೋಹದ ಹಕ್ಕಿ- Ilyushin IL-76
ಬೆಂಗಳೂರು, ನವೆಂಬರ್ 16: ವಾರ್ಷಿಕವಾಗಿ ಬಿಲಿಯನ್ ಗಟ್ಟಲೇ ಪ್ರಯಾಣಿಕರನ್ನು ನಿರ್ವಹಿಸುವ, ವಿವಿಧ ಕಾರಣಗಳಿಂದ ಖ್ಯಾತಿ ಪಡೆದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಶುಕ್ರವಾರ ವಿಶೇಷ ವಿಮಾನ ಲ್ಯಾಂಡಿಂಗ್‌ಗೆ ಸಾಕ್ಷಿಯಾಗಿದೆ. ಬೃಹದಾಕಾರವಾದ ಈ ವಿಮಾನದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಬೆಂಗಳೂರು ಏರ್‌ಪೋರ್ಟ್ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಬಳಿ ಹಾಗೂ ನೀಲಿ ಬಣ್ಣ ಹೊಂದಿದ್ದ Silk Way Ilyushin IL-76 ವಿಶೇಷ ವಿಮಾನವು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಈ ವಿಮಾನವು ಸರಕುಗಳನ್ನು ಹೊತ್ತು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಿಲ್ಕ್ ವೇ ಇಲ್ಯುಶಿನ್ IL-76 ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾಕ್ಕೆ ಸರಕುಗಳೊಂದಿಗೆ ತೆರಳಬೇಕಿತ್ತು.

ಶುಕ್ರವಾರ ಬೆಳಗ್ಗೆ ಅಜರ್‌ಬೈಜಾನ್‌ನ ಬಾಕುವಿನಿಂದ ಜಿಗಿದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ತೆರಳಬೇಕಿತ್ತು. ಈ ವಿಮಾನ ಅಜರ್‌ಬೈಜಾನ್‌ನ ಬಾಕುವಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು. ನಂತರ ಇಲ್ಲಿಂದ ಅರಬ್ ದೇಶಕ್ಕೆ ಹಾರಿತು.
ಈ ವಿಮಾನದ ಉಪಯೋಗ-ಕೆಲಸ
ಈ ವಿಮಾನವನ್ನು ಹೆಚ್ಚಾಗಿ ನಾಗರಿಕ ಪ್ರಯಾಣ ಸೇವೆ ಬಳಕೆ ಮಾಡುವ ಬದಲು ಭಾರೀ ಸರಕುಗಳ ಸಾಗಾಣೆಗೆ ಬಳಕೆ ಮಾಡಲಾಗುತ್ತದೆ. ವಾಣಿಜ್ಯ ಸರಕುಗಳನ್ನು, ಭಾರವಾದ ವಸ್ತುಗಳನ್ನು ಇದರ ಮೂಲಕ ಸಾಗಿಸಲಾಗುತ್ತದೆ. ವಿಪತ್ತು ಉಂಟಾದಂತ ಸಂದರ್ಭದಲ್ಲಿ, ನಾಗರಿಕರನ್ನು ಒಂದು ಕಡೆಯಿಂದ ಸ್ಥಳಾಂತರಿಸಲು ಇದನ್ನು ಹೆಚ್ಚು ಬಳಸಲಾಗುತ್ತದೆ. ವಿಶ್ವದಾದ್ಯಂತ ಮಾನವೀಯ ಸಹಾಯದ ಕಾರ್ಯಾಚರಣೆಗೆ, ವಿಪತ್ತು ಪರಿಹಾರಕ್ಕಾಗಿ ತುರ್ತು ಸ್ಪಂದನೆಗೆ ಈ ವಿಮಾನ ಕಾರ್ಯಾಚರಣೆ ಮಾಡಲಾಗುತ್ತದೆ. ಇದರ ಸೇವೆ ಮಿಲಿಟರಿಗೆ ವಿಸ್ತರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
IL-76 ವಿಮಾನದ ಸಾಮರ್ಥ್ಯವೇನು?
Ilyushin Il-76 ಸೋವಿಯತ್ ಮಿಲಿಟರಿ ಸಾರಿಗೆ ವಿಮಾನವವಾಗಿದ್ದು, ಇದು 1971 ರಲ್ಲಿ ಮೊದಲು ಬಾರಿಗೆ ಹಾರಾಟ ನಡೆಸಿತ್ತು.ಇದನ್ನು ಜಿವಿ ನೊವೊಜಿಲೋವ್ ಅಡಿಯಲ್ಲಿ ಇಲ್ಯುಶಿನ್ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿ ತಯಾರಿಸಿದೆ. ಇದೊಂದು ಭಾರವಾದ ಸಾರಿಗೆ ವಿಮಾನವಾಗಿದೆ.
ಬರೋಬ್ಬರಿ 88,000 ಪೌಂಡ್‌ಗಳಿಗಿಂತ (40,000 ಕೆ.ಜಿ.) ಹೆಚ್ಚಿನ ಪೇಲೋಡ್ ಅನ್ನು ನಿರ್ವಹಿಸುವ ಸಾಮರ್ಥ್ಯ ಈ ವಿಮಾನ ಹೊಂದಿದೆ. ಇದು ಓವರ್‌ಹೆಡ್ ಟ್ರ್ಯಾಕ್‌ಗಳಲ್ಲಿ ಚಲಿಸುವ ಎರಡು ಕ್ರೇನ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಇಳಿಜಾರು ವಿನ್ಯಾಸ ಹೊಂದಿದೆ.
A special bird arrived at BLR Airport. This Silk Way Ilyushin IL-76 aircraft landed from Baku, Azerbaijan, before departing with cargo to Sharjah, United Arab Emirates.@silkwaywest#BLRAirport #BLRCargo #CargoFreighter #CargoAirlines #CargoAircraft #Aircraft #Aviation… pic.twitter.com/P7lodu8Ogz
— BLR Airport (@BLRAirport) November 15, 2024
ಸಾಮಾನ್ಯವಾಗಿ ಇದು ಮಿಲಿಟರಿ ವಿಮಾನ ಎನ್ನಲಾಗುತ್ತದೆ. ಆದರೆ ಈ ವಿಮಾನ ಅದಕ್ಕಿಂತ ಭಿನ್ನವಾಗಿದೆ. ಶಸ್ತ್ರಸಜ್ಜಿತವಾಗಿದ್ದು ಇದರ ನಾಲ್ಕು ಟರ್ಬೋಫ್ಯಾನ್ ಎಂಜಿನ್‌ಗಳು ತಲಾ 26,455 ಪೌಂಡ್‌ಗಳ ಒತ್ತಡ ಉತ್ಪಾದಿಸುತ್ತವೆ. ಹಾರಾಟದಲ್ಲಿ ಅದರ ಗರಿಷ್ಠ ವೇಗ ಪ್ರತಿ ಗಂಟೆಗೆ 850 ಕಿಮೀ ಆಗಿದೆ. ಅದರ ಸೀಲಿಂಗ್ 50,850 ಅಡಿಯಷ್ಟು (15,500 ಮೀಟರ್) ಉದ್ದ ಇವೆ. 30 ರಿಂದ 90 ಪ್ರಯಾಣಿಕರಿಗೆ ಮಾತ್ರ ಇದರಲ್ಲಿ ಅವಕಾಶ ಕಲ್ಪಿಸಬಹುದಾಗಿದೆ. ಇಂತಹ ಸಾಮರ್ಥ್ಯದ ವಿಮಾನವು ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದು ಪ್ರಯಾಣಿಕರನ್ನು ಸೆಳೆಯಿತು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications