ಬೆಂಗಳೂರಿನ ವಾಹನ ಸವಾರರೇ ಮರೆಯದೇ ಗಮನಿಸಿ, ಸಿಲ್ಕ್ ಬೋರ್ಡ್ ಬಳಿ ದೊಡ್ಡ ಬದಲಾವಣೆ... Silk Board Junction
ಬೆಂಗಳೂರಿನ ಟ್ರಾಫಿಕ್ ಜಾಮ್ ಅಂದ್ರೆ ಸಿಕ್ಕಾಪಟ್ಟೆ ಭಯ ಆಗುತ್ತೆ, ಅದರಲ್ಲೂ ಸಿಲ್ಕ್ ಬೋರ್ಡ್ ಬಳಿ ಆಗುವ ಟ್ರಾಫಿಕ್ ಜಾಮ್ ಎಲ್ಲೂ ಕಾಣಲು ಸಾಧ್ಯ ಇಲ್ಲ ಅನ್ನೋ ಮಾತು ಇದೆ. ಆದರೆ ಯಾವಾಗ ಡಬಲ್ ಡೆಕ್ಕರ್ ಶುರು ಆಗಿತ್ತೋ ಅಲ್ಲಿಂದ ಮುಂದೆ ಸ್ವಲ್ಪ ರಿಲೀಫ್ ಸಿಕ್ಕಿತ್ತು. ಆದರೆ ಇನ್ನೊಂದು ಬದಿಯಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಶುರು ಆಗಿರಲಿಲ್ಲ. ಹೀಗಿದ್ದಾಗಲೇ ವಾಹನ ಸವಾರರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಇಷ್ಟುದಿನ ಸಿಲ್ಕ್ ಬೋರ್ಡ್ ಬಳಿ ಟ್ರಾಫಿಕ್ ನರಕದಲ್ಲಿ ಸಿಲುಕಿ ಒದ್ದಾಡಿದ್ದ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಇದೀಗ ಬಂದಿದೆ.
ಟ್ರಾಫಿಕ್.. ಟ್ರಾಫಿಕ್.. ಇದು ಬೆಂಗಳೂರಿನ ಜನರ ಪ್ರತಿ ದಿನದ ಸಂಕಷ್ಟ ಎನ್ನಬಹುದು. ಅದರಲ್ಲೂ ಬೆಂಗಳೂರಿನ ಕೆಲ ಏರಿಯಾಗಳು ಟ್ರಾಫಿಕ್ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್. ಸಿಲ್ಕ್ ಬೋರ್ಡ್ ಜಂಕ್ಷನ್‌ನ ನೆನಪು ಮಾಡಿಕೊಂಡರೆ ಸಾಕು, ಕಣ್ಣ ಮುಂದೆ ಕಿಲೋ ಮೀಟರ್ ಉದ್ದಕ್ಕೆ ಸಾಲಾಗಿ ನಿಂತ ವಾಹನಗಳು & ನರಕದಂತೆ ಕಾಣುತ್ತಿರುವ ಟ್ರಾಫಿಕ್ ಜಾಮ್ ರಪ್ ಅಂತಾ ಒಂದು ಬಾರಿ ಕಣ್ಣ ಮುಂದೆ ಬರುತ್ತದೆ. ಹೀಗೆ ಸಿಲ್ಕ್ ಬೋರ್ಡ್ ಟ್ರಾಫಿಕ್ ಭಯಾನಕತೆ ಅಷ್ಟಿಷ್ಟಲ್ಲ, ನಮ್ಮ ಬೆಂಗಳೂರಿನಲ್ಲಿ ತುಂಬಾ ಫೇಮಸ್ ಆದ ಜಾಗಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಕೂಡ ಒಂದಾಗಿದೆ. ಹೀಗಿದ್ದಾಗಲೇ ಕೊನೆಗೂ ಸಿಲ್ಕ್ ಬೋರ್ಡ್ ಟ್ರಾಫಿಕ್ ಮುಕ್ತವಾಗುವ ಸಮಯ ಬಂದಿದೆ.

ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ ಫ್ರೀ!
ಹೌದು, ನಮ್ಮ ಬೆಂಗಳೂರಿನ ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಒಂದು ಮುಕ್ತಿ ಹಾಡುವ ಸಮಯ ಬಂದಿದೆ. ಇಲ್ಲಿನ ಟ್ರಾಫಿಕ್ ಜಾಮ್ ವರ್ಲ್ಡ್ ಫೇಮಸ್ ಆಗಿತ್ತು. ಅದರಲ್ಲೂ ಸಂಕಷ್ಟ ಸಮಯದಲ್ಲಿ ಸಿಲ್ಕ್ ಬೋರ್ಡ್ ಕಡೆಗೆ ಬಂದ್ರೆ ಅಲ್ಲೇ ಒದ್ದಾಡುವ ಸ್ಥಿತಿ ಇತ್ತು. ಆದರೆ ಇದೀಗ ಹೊಸ ಡಬಲ್ ಡೆಕ್ಕರ್ ಫ್ಲೈಓವರ್‌ನ, ಮತ್ತೊಂದು ಬದಿಯಲ್ಲಿ ಕೂಡ ವಾಹನಗಳ ಓಡಾಟಕ್ಕೆ ಇದೀಗ ಅನುವು ಮಾಡಿಕೊಡಲು ಎಲ್ಲಾ ರೀತಿ ಸಿದ್ಧತೆ ಸಾಗಿದೆ. ಡಬಲ್ ಡೆಕ್ಕರ್ ಮೇಲ್ಸೇತುವೆಯಲ್ಲಿ, ಇಷ್ಟು ದಿನಗಳ ಕಾಲ ಬರೀ ರಾಗಿಗುಡ್ಡ ಟು ಸಿಲ್ಕ್ ಬೋರ್ಡ್ ಮಾರ್ಗ ಮಾತ್ರ ವಾಹನ ಸವಾರರಿಗೆ ಲಭ್ಯವಿತ್ತು. ಆದರೆ ಇದೀಗ ನೇರವಾಗಿ ಸಿಲ್ಕ್ ಬೋರ್ಡ್ ಟು ರಾಗಿಗುಡ್ಡ ಮಾರ್ಗದಲ್ಲೂ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
449 ಕೋಟಿ ರೂಪಾಯಿ ವೆಚ್ಚ
ಡಬಲ್ ಡೆಕ್ಕರ್ ಮೇಲ್ಸೇತುವೆಯ ಒಂದು ಭಾಗ 2024ರ ಜುಲೈ ಸಮಯದಲ್ಲೇ, ರಾಗಿಗುಡ್ಡ ಟು ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗ ವಾಹನ ಸವಾರರ ಬಳಕೆಗೆ ಲಭ್ಯವಾಗಿತ್ತು. ಆದರೆ ಸಿಲ್ಕ್ ಬೋರ್ಡ್ ಟು ರಾಗಿಗುಡ್ಡ ಮಾರ್ಗದಲ್ಲಿ ಕಾಮಗಾರಿ ಮುಗಿದೇ ಇರಲಿಲ್ಲ. ಇದೀಗ ಫೆಬ್ರವರಿ ಒಳಗೆ ಕಾಮಗಾರಿ ಪೂರ್ತಿ ಮುಗಿಯುವ ನಿರೀಕ್ಷೆ ಇದ್ದು, ಡಬಲ್ ಡೆಕ್ಕರ್ ಫ್ಲೈಓವರ್‌ನ ಸುಮಾರು 5 ಕಿಲೋ ಮೀಟರ್ ಮಾರ್ಗ ವಾಹನ ಸವಾರರ ಬಳಕೆಗೆ ಲಭ್ಯವಾಗಲಿದೆ. 449 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯು ನಿರ್ಮಾಣ ಆಗಿದ್ದು, ಅತಿಹೆಚ್ಚು ಟ್ರಾಫಿಕ್ ಬಿಸಿ ಇರುವ & ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಲಿನ ಸಂಚಾರ ಸುಗಮವಾಗುವ ನಿರೀಕ್ಷೆ ಇದೀಗ ಮೂಡಿದೆ.
ಒಟ್ನಲ್ಲಿ ಹೇಗಾದರೂ ಆಗಲಿ ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಮುಕ್ತಿ ಬೀಳಬೇಕು ಎಂಬುದು ಬೆಂಗಳೂರಿನ ವಾಹನ ಸವಾರರ ಡಿಮ್ಯಾಂಡ್. ಇದೇ ಕಾರಣಕ್ಕೆ ವಾಹನ ಸವಾರರ ಕಷ್ಟ ಅರ್ಥ ಮಾಡಿಕೊಂಡಿರುವ ಸರ್ಕಾರ ಕೂಡ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದು, ಡಬಲ್ ಡೆಕ್ಕರ್ ಮೇಲ್ಸೇತುವೆ ಬಳಸಿ ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ನೇರವಾಗಿ ವಾಹನಗಳು ಒಂದು ಜಾಗದಿಂದ ಇನ್ನೊಂದು ಜಾಗ ತಲುಪಲು ಸುಲಭವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಡಬಲ್ ಡೆಕ್ಕರ್ ಮೇಲ್ಸೇತುವೆಯಲ್ಲಿ ಎರಡೂ ಬದಿಯಲ್ಲಿ ವಾಹನ ಓಡಾಟ ಶುರುವಾಗಲಿ ಅಂತಾ ಕಾಯುತ್ತಿದ್ದಾರೆ ಬೆಂಗಳೂರಿಗರು.












Click it and Unblock the Notifications