Bengaluru: ಕ್ಯೂಆರ್ ಕೋಡ್ ಕೇಳಿದ್ದಕ್ಕೆ ಕೈ ತೋರಿಸಿದ ಚಾಲಕ! ಸಿಲಿಕಾನ್ ಸಿಟಿ ಆಟೋ ಅಣ್ಣನ ಡಿಜಿಟಲ್ ಚಮತ್ಕಾರವೇನು?

ಬೆಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುವುದು ಮತ್ತು ಅದಕ್ಕೆ ಹಣ ಪಾವತಿಸುವುದು ಒಮ್ಮೊಮ್ಮೆ ಭಾರಿ ಕಷ್ಟಕ್ಕೆ ಸಿಲುಕಿಸುತ್ತದೆ. ಕಾರಣವಿಷ್ಟೇ ಈಗ ಹೆಚ್ಚನವರ ಕೈಯಲ್ಲಿ ದುಡ್ಡಿನ ನೋಟುಗಳು ಇರುವುದಿಲ್ಲ. ಎಲ್ಲರೂ ಯುಪಿಐ ಪಾವತಿಗಳ ಮೊರೆ ಹೋಗಿದ್ದಾರೆ. ಕೆಲವೊಮ್ಮೆ ಆಟೋಗಳಿಗೆ ಅಂಟಿಸಿರುವ ಹಳೆಯ ಕ್ಯೂಆರ್‌ ಕೋಡ್‌ಗಳು ಸರಿಯಾಗಿ ಸ್ಕ್ಯಾನ್‌ ಕೂಡ ಆಗುವುದಿಲ್ಲ. ಆಗ ಪಡಬಾರದ ಕಷ್ಟ ಪಡಬೇಕಾಗುತ್ತದೆ.

ಆದರೆ, ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ನಮ್ಮ ಬೆಂಗಳೂರಿನಲ್ಲಿ ಡಿಜಿಟಲ್ ತಂತ್ರಜ್ಞಾನವು ಜನರ ದೈನಂದಿನ ಬದುಕಿನೊಂದಿಗೆ ಎಷ್ಟು ಹಾಸುಹೊಕ್ಕಾಗಿದೆ ಎಂಬುದಕ್ಕೆ ಇತ್ತೀಚಿನ ಒಂದು ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ. ಹೌದು, ಎಕ್ಸ್ ಬಳಕೆದಾರರೊಬ್ಬರು ಆಟೋ ಚಾಲಕನಿಗೆ ಯುಪಿಐ ಪಾವತಿ ಮಾಡಲು ಕ್ಯೂಆರ್ ಕೋಡ್ ಕೇಳಿದಾಗ, ಆ ಚಾಲಕ ಕ್ಯಾಶುಯಲ್ ಆಗಿ ತನ್ನ ಕೈಯನ್ನು ಮೇಲಕ್ಕೆತ್ತಿ ತನ್ನ ಸ್ಮಾರ್ಟ್‌ವಾಚ್‌ನಲ್ಲಿಯೇ ಕ್ಯೂಆರ್ ಕೋಡ್ ತೋರಿಸಿದ್ದಾನೆ. ಈ ಘಟನೆ ಇದೀಗ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ.

auto driver

ಹೇಮಂತ್ ಎಂಬ ಹೆಸರಿನ ಎಕ್ಸ್ ಬಳಕೆದಾರರು ತಮ್ಮ ದೈನಂದಿನ ಆಟೋ ಪ್ರಯಾಣದ ಅನುಭವವನ್ನು ಹಂಚಿಕೊಂಡ ನಂತರ ಈ ತಮಾಷೆಯ ವಿಚಾರ ಬೆಳಕಿಗೆ ಬಂದಿದೆ. ಇಂದಿರಾನಗರದಿಂದ ಕೋರಮಂಗಲದವರೆಗೆ ಅವರು ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಆರಂಭದಲ್ಲಿ ಇದೊಂದು ಸಾಮಾನ್ಯ ಪ್ರಯಾಣದಂತೆ ಕಂಡರೂ, ಆಟೋ ಇಳಿದು ಹಣ ಪಾವತಿಸುವ ಸಮಯ ಬಂದಾಗ ಈ ಪ್ರಯಾಣವು ಆನ್‌ಲೈನ್‌ನಲ್ಲಿ ಸಾವಿರಾರು ಜನರ ಗಮನ ಸೆಳೆಯುವಂತಹ ಕುತೂಹಲಕಾರಿ ಕಥೆಯಾಗಿ ಬದಲಾಯಿತು.

ವೈರಲ್‌ ಪೋಸ್ಟ್‌ನಲ್ಲಿ ಏನಿದೆ?

"ಇಂದು ಇಂದಿರಾನಗರದಿಂದ ಕೋರಮಂಗಲಕ್ಕೆ ಆಟೋದಲ್ಲಿ ಬಂದೆ ಮತ್ತು ಹಣ ಪಾವತಿಸಲು ಚಾಲಕನಲ್ಲಿ ಕ್ಯೂಆರ್ ಕೋಡ್ ಕೇಳಿದೆ," ಎಂದು ಹೇಮಂತ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ, ಆ ನಂತರ ನಡೆದದ್ದನ್ನು ಕಂಡು ಅವರು ಸಂಪೂರ್ಣ ಅಚ್ಚರಿಗೊಂಡರು. "ಆ ಬ್ರೋ (ಆಟೋ ಚಾಲಕ) ತನ್ನ ಕೈಯ ಮಣಿಕಟ್ಟನ್ನು ಮೇಲಕ್ಕೆತ್ತಿದ; ಕ್ಯೂಆರ್ ಕೋಡ್ ಆತನ ಸ್ಮಾರ್ಟ್‌ವಾಚ್‌ನಲ್ಲಿತ್ತು!" ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ, ನೆಟ್ಟಿಗರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ತಂತ್ರಜ್ಞಾನ ಮತ್ತು ದೈನಂದಿನ ಜೀವನದ ನಡುವಿನ ವಿಶಿಷ್ಟ ಸಂಯೋಜನೆಗೆ ಬೆಂಗಳೂರು ಹೇಗೆ ಪರಿಪೂರ್ಣ ಉದಾಹರಣೆಯಾಗಿದೆ ಎಂಬುದನ್ನು ಅನೇಕರು ಬಣ್ಣಿಸಿದ್ದಾರೆ.

ಅನೇಕ ಜನರಿಗೆ, ವೈರಲ್ ಆದ ಈ ಕ್ಷಣ ಕೇವಲ ಒಂದು ಸ್ಮಾರ್ಟ್‌ವಾಚ್‌ಗೆ ಸೀಮಿತವಾಗಿರಲಿಲ್ಲ. ಭಾರತದಾದ್ಯಂತ ಡಿಜಿಟಲ್ ಪಾವತಿಗಳು ದೈನಂದಿನ ಜೀವನದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ರಸ್ತೆಬದಿಯ ವ್ಯಾಪಾರಿಗಳು, ಸಣ್ಣ ಚಹಾ ಅಂಗಡಿಗಳಿಂದ ಹಿಡಿದು ಟ್ಯಾಕ್ಸಿ ಚಾಲಕರು ಮತ್ತು ನೆರೆಹೊರೆಯ ಕಿರಾಣಿ ಅಂಗಡಿಗಳವರೆಗೆ, ಯುಪಿಐ ವ್ಯವಸ್ಥೆಯು ಜನರು ಹಣಕಾಸು ವಹಿವಾಟು ನಡೆಸುವ ರೀತಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ.

ತಂತ್ರಜ್ಞಾನವು ಇನ್ನು ಮುಂದೆ ಕೇವಲ ಕಾರ್ಪೊರೇಟ್ ಕಚೇರಿಗಳು, ಸ್ಟಾರ್ಟ್‌ಅಪ್‌ಗಳು ಅಥವಾ ಟೆಕ್ ಕ್ಯಾಂಪಸ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದರ ಸಂಕೇತವಾಗಿ ಜನರು ಇದನ್ನು ನೋಡುತ್ತಿದ್ದಾರೆ. ಆಟೋ ಚಾಲಕನ ಈ ನಡೆಯು ಸಾಮಾನ್ಯ ಜನರ ಬದುಕಿನಲ್ಲೂ ತಂತ್ರಜ್ಞಾನದ ಪ್ರಭಾವವನ್ನು ಎತ್ತಿತೋರಿಸುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಲವರು ಇದನ್ನು "ಪೀಕ್ ಬೆಂಗಳೂರು ಮೂಮೆಂಟ್" ಎಂದು ಕರೆದರೆ, ಇನ್ನು ಕೆಲವರು ಚಾಲಕನು "2050ರ ಯುಗದಲ್ಲಿ ಜೀವಿಸುತ್ತಿದ್ದಾನೆ" ಎಂದು ತಮಾಷೆ ಮಾಡಿದ್ದಾರೆ. ಕೆಲವು ಬಳಕೆದಾರರು ಈ ನಡೆಯನ್ನು "ಆರಾ ಮ್ಯಾಕ್ಸಿಂಗ್" ಎಂದು ಬಣ್ಣಿಸಿದ್ದಾರೆ; ಇದು ಯಾವುದೇ ಕೆಲಸವನ್ನು ಸಲೀಸಾಗಿ ಮತ್ತು ಕೂಲ್ ಆಗಿ ಮಾಡುವುದನ್ನು ಸೂಚಿಸುವ ಇಂಟರ್ನೆಟ್ ಭಾಷೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+