ರಾಜಕೀಯ ಗೊಂದಲಗಳಿಗೆ ಸಿದ್ದರಾಮಯ್ಯರೇ ಕಾರಣ ಎಂದ ಆರ್.ಅಶೋಕ್

ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಗೊಂದಗಳಿಗೆ ಸಿದ್ದರಾಮಯ್ಯ ಅವರ ಕುತಂತ್ರದ ರಾಜಕಾರಣವೇ ಎಂದು ಬಿಜೆಪಿಯ ಮುಖಂಡ ಆರ್.ಅಶೋಕ್ ದೂರಿದ್ದಾರೆ.

ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, 'ಯಾರು ವಿದೇಶದಲ್ಲಿ ಇದ್ದುಕೊಂಡು ಇಲ್ಲಿ ರಾಜಕೀಯದ ಆಟ ಆಡಿಸುತ್ತಿದ್ದರು ಎಂಬುದು ಗೊತ್ತಾಗಿದೆ' ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಅವರನ್ನು ಆರೋಪಿ ಸ್ಥಾನದಲ್ಲಿ ಕೂರಿಸಿದರು.

'ವಿದೇಶದಲ್ಲಿ ಇದ್ದುಕೊಂಡು ರಾಜಕೀಯದ ಆಟ ಆಡಿಸಿದವರು, ಈಗ ಸ್ವದೇಶಕ್ಕೆ ಬಂದು ಆಡಿಸುತ್ತಿದ್ದಾರೆ, ತೆರೆ ಮರೆ ಹಿಂದೆ ನಡೆಯುತ್ತಿದ್ದ ಆಟ ಈಗ ತೆರೆಯ ಮೇಲೆ ಬಂದಿದೆ' ಎಂದು ಅವರು ಈ ರಾಜಕೀಯ ಗೊಂದಲಗಳಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದರು.

Siddaramaiah trying to destabelize the government: R Ashok

ಸಿದ್ದರಾಮಯ್ಯ ಅವರೇ ಸರ್ಕಾರ ಬೀಳಿಸಲು ತಮ್ಮ ಬೆಂಬಲಿಗರ ಮೂಲಕ ರಾಜಕೀಯದ ಆಟ ಆಡಿಸುತ್ತಿದ್ದಾರೆ ಎಂದು ಅಶೋಕ್ ಆರೋಪ ಮಾಡಿದರು.

ಸರ್ಕಾರವನ್ನು ಬೀಳಿಸಲು ಯಡಿಯೂರಪ್ಪ ಯತ್ನಿಸುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ವಿನಲ್‌ನಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ ಆದರೆ ಅವರ ಪಕ್ಷದವರೇ ಸರ್ಕಾರ ಬೀಳಿಸುಲು ಯತ್ನಿಸುತ್ತಿದ್ದಾರೆ ಎಂದರು.

ಇದೊಂದು ಅಪವಿತ್ರ ಮೈತ್ರಿ, ಇಂತಹಾ ಸರ್ಕಾರದಲ್ಲಿ ಮಂತ್ರಿ ಆಗಲು ಅಸಹ್ಯ ಆಗುತ್ತಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಹೇಳಿದ್ದಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+