ಸಿದ್ಧರಾಮಯ್ಯ ಸೈಕಲ್ ಖರೀದಿ: ಟಿಕ್‌ಟಾಕ್‌ನಲ್ಲಿ 'ಟಗರು' ಸೌಂಡ್
ಬೆಂಗಳೂರು, ಜೂನ್ 18: ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೊಸ ಸೈಕಲ್ ಖರೀದಿ ಮಾಡಿದ್ದಾರೆ. ಹೊಸ ಸೈಕಲ್‌ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಸವಾರಿ ಮಾಡಿದ್ದಾರೆ.
Recommended Video
ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿರುವ ಸಿದ್ಧರಾಮಯ್ಯ ಸರ್ಕಾರಿ ನಿವಾಸಕ್ಕೆ ಸೈಕಲ್ ಬಂದಿತ್ತು. ಸೈಕಲ್ ನೋಡಿ ಖುಷಿಯಾದ ಸಿದ್ಧರಾಮಯ್ಯ ಒಂದು ರೌಂಡ್ ಹಾಕಿದ್ದಾರೆ. ಕಾಂಗ್ರೆಸ್ ವಿಧಾನಸಭೆ ಮುಖ್ಯ ಸಚೇತಕ ಅಜಯ್ ಸಿಂಗ್ ಸಹ ಈ ವೇಳೆ ಜೊತೆಗಿದ್ದರು.
ಸಿದ್ಧರಾಮಯ್ಯ ಸೈಕಲ್ ಏರಿರುವ ಫೋಟೋಗಳನ್ನು ಅಭಿಮಾನಿಗಳು ಕ್ಲಿಕ್ ಮಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿದ್ದಾರೆ.

ಟಿಕ್‌ಟಾಕ್‌ನಲ್ಲಿ ಸಿದ್ಧರಾಮಯ್ಯ ಸೌಂಡ್ ಜೋರಾಗಿದೆ. ಅಭಿಮಾನಿಗಳು ಸಿದ್ಧರಾಮಯ್ಯ ವಿಡಿಯೋಗೆ ನಟ ಶಿವರಾಜ್ ಕುಮಾರ್ ಅವರ 'ಟಗರು' ಚಿತ್ರದ 'ಟಗರು ಬಂತು ಟಗರು..' ಹಾಡು ಹಾಕಿ ಖುಷಿಪಟ್ಟಿದ್ದಾರೆ. ದರ್ಶನ್ ಅವರ 'ರಾಬರ್ಟ್' ಸಿನಿಮಾದ ಹಾಡುಗಳನ್ನು ಹಾಕಿ ಟಿಕ್‌ಟಾಕ್‌ಗಳಲ್ಲಿ ಹಂಚಿಕೊಂಡಿದ್ದಾರೆ.
71 ವರ್ಷ ವಯಸ್ಸಾಗಿದ್ದರೂ, ಸಿದ್ಧರಾಮಯ್ಯ ಈ ವಯಸ್ಸಿನಲ್ಲೂ ಉತ್ಸಾಹದಿಂದ ಸೈಕಲ್ ಓಡಿಸಿದ್ದು, ನೋಡಗರ ಗಮನ ಸೆಳೆದಿದೆ.












Click it and Unblock the Notifications