ಸರ್ಜಿಕಲ್‌ ಸ್ಟ್ರೈಕಲ್ಲಿ ಚುನಾವಣಾ ಲೆಕ್ಕಾಚಾರ, ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಗರಂ

Recommended Video

      Surgical Strike 2: ಸರ್ಜಿಕಲ್‌ ಸ್ಟ್ರೈಕಲ್ಲಿ ಚುನಾವಣಾ ಲೆಕ್ಕಾಚಾರ | Oneindia Kannada

      ಬೆಂಗಳೂರು, ಫೆಬ್ರವರಿ 28: ಸರ್ಜಿಕಲ್ ಸ್ಟ್ರೈಕ್‌ನ್ನು ಚುನಾವಣಾ ಲೆಕ್ಕಾಚಾರಕ್ಕೆ ಬಳಸುತ್ತಿರುವ ಬಿಜೆಪಿ ನಾಯಕರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಜಿಕಲ್ ಸ್ಟ್ರೈಕ್‌ನಿಂದ ಕರ್ನಾಟಕದಲ್ಲಿ ಬಿಜೆಪಿ 22 ಸೀಟುಗಳನ್ನು ಗೆಲ್ಲಲಿದೆ ಎನ್ನುವ ಹೇಳಿಕೆಯನ್ನಾಧರಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

      ಯಾವುದೇ ದೇಶಭಕ್ತರು ಕೂಡ ಈ ರೀತಿಯ ಸೈನಿಕರು ಹುತಾತ್ಮರಾಗಿರುವುದು ಹಾಗೂ ಸೇನೆಗೆ ಸಂಬಂಧಿಸಿದ ಹಾಗೆ ಚುನಾವಣಾ ಲೆಕ್ಕಾಚಾರವನ್ನು ಮಾಡುವುದಿಲ್ಲ, ದೇಶವಿರೋಧಿಗಳು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ. ಇನ್ನೂ ಮುಂದುವರೆದು ಈ ಹೇಳಿಕೆ ಕುರಿತು ಆರ್‌ಎಸ್‌ಎಸ್‌ ಏನು ಹೇಳಲಿದೆ ಎಂದು ಪ್ರಶ್ನಿಸಿದ್ದಾರೆ.

      ಯಡಿಯೂರಪ್ಪ ಹೇಳಿದ್ದೇನು? ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸವನ್ನು ಭಾರತೀಯ ಸೇನೆ ಮಾಡಿದೆ. 40 ವರ್ಷದ ನಂತರ ಪ್ರಧಾನಿ ಈ ಕೆಲಸವನ್ನು ಮಾಡಿದ್ದಾರೆ.

      ಯೋಧರ ಒಂದೊಂದು ತೊಟ್ಟು ರಕ್ತಕ್ಕೂ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು, ನುಡಿದಂತೆಯೇ ನಡೆದುಕೊಂಡಿದ್ದಾರೆ. ಇಡೀ ದೇಶದ ಜನ ಇದನ್ನು ಸ್ವಾಗತಿಸಿದ್ದಾರೆ, ಯುವಕರು ಎಲ್ಲದರ 22 ಕ್ಕೂ ಹೆಚ್ಚು ಲೋಕಸಭಾ ಸೀಟು ಗೆಲ್ಲಲು ಅನುಕೂಲವಾಗಲಿದೆ ಎಂದು ಹೇಳಿದ್ದರು.

      ಇದೊಂದು ಬೇಜವಾಬ್ದಾರಿ ಹೇಳಿಕೆ

      ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಜಮ್ಮು ಕಾಶ್ಮೀರದ ಯೋಧರ ಸಾಹಸ, ಅವರ ಪರಿಶ್ರಮವನ್ನು ಬಿಜೆಪಿಯು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಗೆ ದೇಶದ ಭದ್ರತೆ ಮುಖ್ಯವಲ್ಲ, ಚುನಾವಣೆ ಗೆಲ್ಲುವುದೇ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

      ಬಿಜೆಪಿಗೆ ತಾವು ಮಾಡಿದ್ದ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳಲು ಸಾಧ್ಯವಿಲ್ಲವೇ?

      ಬಿಜೆಪಿಗೆ ತಾವು ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ಸಾಧ್ಯವಿಲ್ಲವೇ, ಯೋಧರ ಸಾವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿರುವುದು ಸರಿಯಲ್ಲ ಎಂದು ರಾಜಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

      ಸೈನಿಕರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರಿಗೆತಕ್ಕ ಪಾಠ ಕಲಿಸಬೇಕು

      ಸ್ವಂತ ಶಕ್ತಿಯ ಮೇಲೆ ಒಟು ಕೆಳುವದಕ್ಕೆ ಎನು ಅರ್ಹತೆ ಇಲ್ಲದವರು ಈ ತರ ಸೈನಿಕರನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡತಿದ್ದಾರೆ ಜನ ಇವರಿಗೆ ತಕ್ಕ ಪಾಠ ಕಲಿಸಬೇಕು ಸೈನಿಕರ ಸಾವಿನಲ್ಲು ರಾಜಕೀಯ ಮಾಡುವವರನ್ನ ಮನೆಗೆ ಕಳಿಸುವದರೊಂದಿಗೆ ಹುತ್ತಾತ್ಮರಾದ ಸೈನಿಕರನ್ನ ಸ್ಮರಿಸೊಣ ಎಂದು ಜಗದೀಶ್ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

      ಯೋಧರ ಸಮಾಧಿ ಎದುರು ಮತ ಅಧಿಕಾರದ ಕನಸು

      ನಾಚಿಕೆಯಾಗಬೇಕು ಜೀವಗಳ ಮಾರಣಹೋಮ ಶತೃ ನಡೆಸ್ತಿದ್ರೂ ಅದರಲ್ಲಿ ವೋಟು ಅಧಿಕಾರದ ಕನಸು ಕಾಣುವ ಬಿಜೆಪಿಗರೇ..ಇದೆಲ್ಲಾ ನಿಮ್ಮದೇ ಒಳಸಂಚಾ? ನನಗದೇ ಅನುಮಾನ..ನಿಜ ಇದ್ದರೂ ಇರಬಹುದು.. ಹಿಂದಿನ ಸರ್ಕಾರಗಳು ನಡೆಸಿದ್ದವು..ಹೊರಗಿನಲೋಕಕ್ಕೇ ಅರಿವಿಗೇ ಬಾರದಂತೆ ನಡ್ಕೊತಿದ್ವು ಎಂದು ಜಯಂತಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+