ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟರನ್ನು ರಕ್ಷಿಸುತ್ತಿರುವ ಸಿದ್ದರಾಮಯ್ಯ: ಬಿಎಸ್ ವೈ ಆರೋಪ

ಸಿದ್ದರಾಮಯ್ಯ ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಅಮಿತ್ ಶಾ ಅವರಿಗಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಎಸ್ ವೈ ಆರೋಪ.

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ತನ್ನ ಭ್ರಷ್ಟಾಚಾರ ಮಂತ್ರಿಗಳು, ನಾಯಕರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

ನಗರದ 'ತಾಜ್ ವೆಸ್ಟ್ ಎಂಡ್' ಹೋಟೆಲ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದ ಅಮಿತ್ ಶಾ ಅವರ ಪತ್ರಿಕಾಗೋಷ್ಠಿಗೂ ಮುನ್ನ, ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Siddaramaiah engaged in saving his corrupt collegues alleges BS Yeddyurappa

ತಮ್ಮ ಆರೋಪಗಳಿಗೆ ಪೂರಕವಾಗಿ, ಇತ್ತೀಚೆಗೆ ನಡೆದ ಇಂಧನ ಸಚಿವ ಡಿಕೆ ಶಿವಕುಮಾರ್ ಅವನ ನಿವಾಸದ ಮೇಲಿನ ಐಟಿ ರೈಡ್ ಪ್ರಸ್ತಾಪಿಸಿದ ಅವರು, ಡಿಕೆಶಿ, ಜಾರಕೀಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ಬಂದಿದ್ದರೂ ಅವುಗಳಿಂದ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ಕಾಂಗ್ರೆಸ್ ನಾಯಕರ ವಿರುದ್ಧದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ಲೀನ್ ಚಿಟ್ ಕೊಡಿಸುವುದೇ ಸಿದ್ದರಾಮಯ್ಯ ಅವರ ಪರಮ ಗುರಿ ಎಂದು ಲೇವಡಿ ಮಾಡಿದರು.

ಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳುಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳು

ಯಡಿಯೂರಪ್ಪ ಅವರ ಭಾಷಣದ ಇತರ ಪ್ರಮುಖಾಂಶ ಇಲ್ಲಿವೆ.

- ಶುಕ್ರವಾರದಿಂದ ಒಂದು ವಾರ ಕಾಲ ದ್ವಿಚಕ್ರ ವಾಹನದಲ್ಲಿ ಪಂಜು ಮೆರವಣಿಗೆ ಅಭಿಯಾನ ಆರಂಭವಾಗುತ್ತದೆ.

- ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಿಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಅಭಿಯಾನ ನಡೆಸಲಾಗುವುದು.

- ರೈತರ ಸಾಲ ಮನ್ನಾ ವಿಚಾರದಲ್ಲಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಾರೆ.

- ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಕೆಲಸವನ್ನು ಮೋದಿ ಮಾಡಲಿ ಎನ್ನುತ್ತಿದ್ದಾರೆ.

- ಈಗಾಗಲೇ, ರೈತರ ಎಲ್ಲಾ ಸಾಲವನ್ನು ಉತ್ತರ ಪ್ರದೇಶ, ಮಹಾರಾಷ್ಟ್ರ ಸರ್ಕಾರಗಳು ಮಾಡಿಲ್ಲವೇ? ಅಲ್ಲಿ ಸಾಧ್ಯವಿದೆ ಎಂದಾದರೆ, ಇಲ್ಲಿ ಏಕೆ ಸಾಧ್ಯವಿಲ್ಲ.

- ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥಕ್ಕೆ ಬಿಜೆಪಿ ಶತಾಯ ಗತಾಯ ಕೆಲಸ ಮಾಡಲಿದೆ.

- ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್ ಕೊಡಿಸುವುದರಲ್ಲಿ ಸಿದ್ದರಾಮ್ಯ ಸಿದ್ಧಹಸ್ತರಾಗಿದ್ದಾರೆ.

- ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥಕ್ಕೆ ಬಿಜೆಪಿ ಶತಾಯ ಗತಾಯ ಕೆಲಸ ಮಾಡಲಿದೆ. ಶೀಘ್ರವೇ ಮಹಾರಾಷ್ಟ್ರ, ಗೋವಾ ಸರ್ಕಾರಗಳ ಬಳಿ ನಿಯೋಗವನ್ನು ಕೊಂಡೊಯ್ದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು.

- ಕೂಡಲೇ 7.5 ಟಿಎಂಸಿ ನೀರು ಬಿಡುವಂತೆ ಗೋವಾ ಸರ್ಕಾರಕ್ಕೆ ಮನವಿ ಮಾಡಲಾಗುವುದು.

English summary
Siddu govt one of the most corrupt govt, he is protecting these corrupt, alleges BJP State President BS Yeddyurappa in a pressmeet organised for Amit Shah in Bengaluru on August 14, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X