ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡಗೆ ಸಿದ್ದರಾಮಯ್ಯ ಅವರಿಂದ ಬೆದರಿಕೆ: ಎಚ್ಡಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಜಿ.ಟಿ. ದೇವೇಗೌಡ ಅವರನ್ನು ಕೆ.ಎಚ್.ಬಿ. ಹಗರಣದ ನೆಪದಲ್ಲಿ ಬೆದರಿಸಲು ಹೊರಟಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಮರೆಯಬಾರದು ಎಂದು ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯಗೆ ಪ್ರಧಾನಿ ಹುದ್ದೆ ಮೇಲೆ ಕಣ್ಣು: ಜಿಟಿ ದೇವೇಗೌಡ ವ್ಯಂಗ್ಯಸಿದ್ದರಾಮಯ್ಯಗೆ ಪ್ರಧಾನಿ ಹುದ್ದೆ ಮೇಲೆ ಕಣ್ಣು: ಜಿಟಿ ದೇವೇಗೌಡ ವ್ಯಂಗ್ಯ

ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಅಧಿಕಾರ ದುರ್ಬಳಗೆ ಮಾಡಿಕೊಂಡು ವಿರೋಧಿಗಳನ್ನು ಭಯಭೀತಿಗೊಳಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿಸಿತ್ತು. ಆದರೆ ರಾಜ್ಯ ಸರ್ಕಾರ ಕೇಂದ್ರಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದರು.

Siddaramaiah can't blackmail JDS candidate: HDK warns

ಶಿಕ್ಷಣ ಇಲಾಖೆಯಲ್ಲಿ ಲ್ಯಾಪ್ ಟಾಪ್ ಖರೀದಿಯಲ್ಲಿ ಹಗರಣ ಆಗಿದೆ ಎಂದು ಅಧಿಕಾರಿಯೇ ಪತ್ರ ಬರೆಯುತ್ತಾರೆ. ಆದರೆ ಸರ್ಕಾರ ಏನು ಕ್ರಮ ಕೈಗೊಂಡಿದೆ. ಈಗ ಜೆಡಿಎಸ್ನ ಅಭ್ಯರ್ಥಿಯನ್ನು ಹೆದರಿಸಿಸುವ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಕಾನೂನು ಬದ್ಧವಾಗಿ ತನಿಖೆ ನಡೆಸಲಿ. ಕೆಂಪಯ್ಯ ಅವರ ಸೂಚನೆಯಂತೆ ತನಿಖೆ ಮಾಡುವುದಲ್ಲ. 4 ತಿಂಗಳು ಕಳೆದ ಮೇಲೆ ಅಧಿಕಾರಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ. ೨೦೧೧ರಲ್ಲೇ ಗೃಹ ಮಂಡಳಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವರದಿ ಕೊಟ್ಟಿದ್ದರು. ಆದಾಗ್ಯೂ ಈ ಪ್ರಕರಣವನ್ನು ಕೆದಕಿದ್ದಾರೆ ಎಂದರು.

ಎರಡು ಸಾವಿರ ಕೋಟಿ ಹಗರಣ ಬಯಲು ಮಾಡುತ್ತೀನಿ ಎನ್ನುವುದು ಹಿಟ್ ಆಂಡ್ ರನ್ ಅಲ್ಲ. ಎಲ್ಲಾ ದಾಖಲೆಗಳನ್ನು ತೋ

English summary
Former chief minister HD Kumaraswamy warned chief minister Siddaramaiah he couldn't blackmail JDS candidates and same will not be tolerated. As anti corruption bureau has filed case against JS candidate from chamundeshwari constituency GT Devegowda it is called as political vendetta by the chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X