ಬಾಡಿಗೆ ಮನೆ ಮಾಲೀಕರ ಮನೆಗೆ ಕನ್ನ ಕೊರೆದ ಚೋರ ಸಹೋದರಿಯರು
ಬೆಂಗಳೂರು, ಮಾ. 06: ನಮ್ಮ ಮನೆಯಲ್ಲಿ ನಮ್ಮ ಅಪ್ಪ ದುಡ್ಡು ಇಟ್ಟಿದ್ದಾರೆ ಎಂದು ಹದಿಮೂರು ವರ್ಷದ ಬಾಲಕ ಹೇಳಿದ ಮಾತನ್ನು ಕೇಳಿಸಿಕೊಂಡು ಚೋರ ಸಹೋದರಿಯರು ಮನೆ ಬಾಡಿಗೆಗೆ ನೀಡಿದ್ದ ಮಾಲೀಕರ ಮನೆಗೆ ಕನ್ನ ಹಾಕಿ ಜೈಲು ಅತಿಥಿಗಳಾಗಿದ್ದಾರೆ. ಸಿನಿಮಾ ಶೈಲಿಯಲ್ಲಿ ಮನೆ ಕಳ್ಳತನ ಮಾಡಿ ವಿಲಾಸಿ ಜೀವನ ಮಾಡುತ್ತಿದ್ದ ಚೋರ ಸಹೋದರಿಯರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಸಮಯ್ಯ ತಾಜ್ (23) ನಾಜೀಮಾ ತಾಜ್, ನಾಜೀಮಾ ಗಂಡ ಅಕ್ಬರ್ ಬಂಧನಕ್ಕೆ ಒಳಗಾದವರು. ಜಯನಗರದ ಒಂದನೇ ಬ್ಲಾಕ್‌ನ ದಯಾನಂದ ನಗರ ನಿವಾಸಿ ಜಬಿ ಮತ್ತ ಹಾಜೀರಾ ದಂಪತಿ ನಡೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಜಬಿ ಅವರ ಮನೆ ಬಾಡಿಗೆಗೆ ಬಂದಿದ್ದ ಕಳ್ಳ ಸಹೋದರಿಯರು ತಮ್ಮ ಕೈಚಳಕ ತೋರಿ ಕೈಗೆ ಕೋಳ ತೊಡಿಸಿಕೊಂಡಿದ್ದಾರೆ.
ಜಬಿ ಮತ್ತು ಹಾಜಿರಾ ದಂಪತಿ ಮನೆಗೆ ಬಾಡಿಗೆ ಬಂದಿದ್ದ ಸಮಯ್ಯ ತಾಜ್ ಮತ್ತು ನಾಜೀಮಾ ತಾಜ್ ತನ್ನ ಗಂಡ ಸೇರಿ ಕುಟುಂಬವೇ ಮನೆಯಲ್ಲಿತ್ತು. ಹಾಜೀರಾ ಮತ್ತು ಜಬಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಹದಿಮೂರು ವರ್ಷದ ಮಗ ಹಾಗೂ ಮಗಳಿದ್ದಳು. ಮನೆಯ ಮೊದಲನೇ ಮಹಡಿಯಲ್ಲಿ ಜಬೀ ವಾಸವಾಗಿದ್ದರು. ಎರಡನೇ ಮಹಡಿಯಲ್ಲಿ ನಾಜೀಮಾ ತಾಜ್ ಕುಟುಂಬ ನೆಲೆಸಿತ್ತು. ಎದುರು ಮನೆಯಲ್ಲಿ ಸುಮಯ್ಯ ತಾಜ್ ಬಾಡಿಗೆಗೆ ವಾಸವಾಗಿದ್ದಳು.

ಜಬಿ ಮನ ಮನೆಯ ಟೆರೇಸ್ ಮೇಲೆ ಹೋಗಿ ಆಟ ಆಡುವ ಸಮಯದಲ್ಲಿ ನಮ್ಮ ಮನೆಯಲ್ಲಿ ಹಣವಿದೆ ಎಂದು ಹೇಳಿಕೊಂಡಿದ್ದ. ಇದನ್ನು ಕೇಳಿಸಿಕೊಂಡ ನಾಜಿಮಾ ತಾಜ್ ಹಣ ಎಗರಿಸಲು ಬಲೆ ಎಣೆದಿದ್ದಳು. ಜಬಿ ಲಾರಿ ಮಾರಿ ಮಗಳ ಮದುವೆ ಮಾಡಲು ನಾಲ್ಕು ಲಕ್ಷ ನಗದು ಹಣ ಮತ್ತು ಚಿನ್ನಾಭರಣ ಮಾಡಿಸಿಟ್ಟಿದ್ದ. ಇದನ್ನು ತಿಳಿದುಕೊಂಡ ನಾಜೀಮಾ ತಾಜ್ ಮನೆಗೆ ಕನ್ನ ಹಾಕಲು ಪ್ಲಾನ್ ರೂಪಿಸಿ ಪಕ್ಕದ ಮನೆಯಲ್ಲಿದ್ದ ಸಹೋದರಿ ಸುಮಯ್ಯ ತಾಜ್‌ಗೆ ವಿಚಾರ ತಿಳಿಸಿ ಎಲ್ಲರ ಸೇರಿ ಮನೆಗೆ ಸ್ಕೆಚ್ ಹಾಕಿದ್ದಾರೆ.
ನಾಜಿಮಾ ತಾಜ್ ಮನೆಗೆ ಅಡ್ಡ ಕೂತು ಯಾರು ಮನೆಯ ಮೇಲಕ್ಕೆ ಹೋಗದಂತೆ ಅಡ್ಡ ಕೂತಿದ್ದರು. ಈ ವೇಳೆ ಸಮಯ್ಯ ತಾಜ್ ಮತ್ತು ಅಕ್ಬರ್ ಮನೆಯ ಬೀರು ಬೀಗ ಒಡೆದು 2.34 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ, ಹತ್ತು ಲಕ್ಷ ರೂ. ನಗದು ಕದ್ದು ಫೆ. 19 ರಂದು ಎಸ್ಕೇಪ್ ಆಗಿದ್ದರು.
ಮನೆ ಮಾಲಕಿ ಹಾಜಿರಾ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಈ ವೇಳೆ ಇಬ್ಬರ ಮೇಲೆ ಅನುಮಾನಗೊಂಡು ಸಿಸಿಟಿವಿ ದೃಶ್ಯ ನೋಡಿದಾಗ ಚೋರ ಸಹೋದರಿಯರ ಚಲನವಲನ ಗಮಿನಿಸಿದಾಗ ಕೈಚಳಕ ತೋರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪರಾರಿಯಾಗಿದ್ದ ಚೋರ ಸಹೋದರಿಯರ ಮೂಲ ಪತ್ತೆ ಮಾಡಿದಾಗ, ಕದ್ದ ಹಣದಲ್ಲಿ ಅರ್ಧದಷ್ಟು ಆಗಲೇ ವೆಚ್ಚ ಮಾಡಿ ಶೋಕಿ ಜೀವನ ನಡೆಸಿದ್ದರು. ಹದಿನಾಲ್ಕು ಚೂಡಿದಾರ್ ಸೇರಿದಂತೆ ಬೇಕಾದಷ್ಟು ಬಟ್ಟೆ ಖರೀದಿ ಮಾಡಿದ್ದರು. ಬಂಧಿತರಿಂದ ನಾಲ್ಕು ಲಕ್ಷ ರೂ. ನಗದು, ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ಎರಡೇ ದಿನಕ್ಕೆ ಮೋಜು ಮಾಡಿದ್ದು, ಸಿದ್ದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications