ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಾದ್ಯಂತ ಅಯೋಧ್ಯೆ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ಶ್ರೀರಾಮಜನ್ಮ ಭೂಮಿ ಟ್ರಸ್ಟ್ ದೇಶಾದ್ಯಂತ ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಧಿ ಸಮರ್ಪಣಾ ಅಭಿಯಾನ ನಿಮಿತ್ತ ಡಿಸೆಂಬರ್ 22 ರಂದು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದೆ.

ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಜಿ ಅವರು ಮಾತನಾಡಲಿದ್ದಾರೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರದ ಪುನರ್ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 5 ರಂದು ಶಿಲಾನ್ಯಾಸ ಮಾಡಿದ ಬಳಿಕ ನಿರ್ಮಾಣದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

Shri Ram Janmabhoomi Mandir Nidhi Samarpan Abhiyan In India

ರಾಷ್ಟ್ರೀಯ ಅಸ್ಮಿತೆಯ ಸಂಕೇತವಾದ ಶ್ರೀರಾಮಮಂದಿರ ನಿರ್ಮಾಣದ ಈ ಪುಣ್ಯಕಾರ್ಯದಲ್ಲಿ ದೇಶದ ಎಲ್ಲ ಪ್ರಜೆಗಳೂ ಭಾಗಿಯಾಗುವ ಅವಕಾಶ ಒದಗಿಸುವ ದೃಷ್ಟಿಯಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇದೀಗ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನವನ್ನು ಹಮ್ಮಿಕೊಂಡಿದೆ.

ದೇಶದ ಎಲ್ಲ ಮನೆಗಳನ್ನೂ ತಲುಪುವ ಗುರಿ ಹೊಂದಿರುವ ಈ ಬೃಹತ್ ಜನಸಂಪರ್ಕ ಅಭಿಯಾನದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಪತ್ರಿಕಾಗೋಷ್ಠಿಯು ಡಿಸೆಂಬರ್ 22 ರಂದು ಬೆಳಗ್ಗೆ 11 ಗಂಟೆಗೆ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆಯಲಿದೆ.

Recommended Video

Bangalore: ರೂಪಾಂತರಗೊಂಡ ಕೊರೊನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ- ಸಿಎಂ ಯಡಿಯೂರಪ್ಪ ಮಾಹಿತಿ | Oneindia Kannada

English summary
Shriram Janmabhoomi teerth kshetra trust Organising Pressmeet regarding Shri Ram Janmabhoomi Mandir Nidhi Samarpan Abhiyan on Dec 22 at Rashtrotthana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X