• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಾನಂದ ವೃತ್ತದಲ್ಲಿ ಮತ್ತೆ ರಸ್ತೆ ಬಂದ್:ಸಂಚಾರ ದಟ್ಟಣೆ ಸಾಧ್ಯತೆ

|

ಬೆಂಗಳೂರು, ಆಗಸ್ಟ್ 13: ಶಿವಾನಂದ ವೃತ್ತ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಶಿವಾಜಿನಗದಿಂದ ಮಲ್ಲೇಶ್ವರ, ಯಲಹಂಕ, ಹೆಬ್ಬಾಳದಿಂದ ಮೆಜೆಸ್ಟಿಕ್‌ಗೆ ತೆರಳಬೇಕಾದರೆ ಬಸ್‌ಗಳು ಅದೇ ಮಾರ್ಗವಾಗಿಯೇ ಬರಬೇಕು.

ಆದರೆ ಅಲ್ಲಿನ ಸುತ್ತಮುತ್ತಲಿನ ಅಂಗಡಿ, ಹೋಟೆಲ್‌ಗಳನ್ನು ನಡೆಸುವವರಿಗೆ ನಿತ್ಯ ನಿರಕವಾಗಿದೆ. ಮೇಲ್ಸೇತುವೆ ಕಾಮಗಾರಿಯಂತೂ ಮುಗಿಯುವ ಹಾಗೆಯೇ ಗೋಚರಿಸುತ್ತಿಲ್ಲ. ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ ಟ್ರಾಫಿ್ ಜಾಮ್ ಕೂಡ ವಿಪರೀತವಾಗುತ್ತಿದೆ.

ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ

ಸಾಮಾನ್ಯ ದಿನಗಳು ಹಾಗಿರಲಿ, ಮಳೆ ಬಂದರೆ ಸಾಕು ಶಿವಾನಂದ ವೃತ್ತದ ಸ್ವಲ್ಪ ಕೆಳಗಿರುವ ರೈಲ್ವೆ ಅಂಡರ್‌ ಪಾಸ್ ಬಳಿ ಪ್ರವಾಹದ ಪರಿಸ್ಥಿತಿಯೇ ನಿರ್ಮಾಣವಾಗುತ್ತದೆ. ಅಲ್ಲಿ ಮಂತ್ರಿಮಾಲ್ ವರೆಗೆ ತೆರಳುವಷ್ಟರೊಳಗೆ ಕನಿಷ್ಠ 1 ತಾಸಿಗೂ ಅಧಿಕ ಕಾಲಾವಕಾಶ ಬೇಕಾಗುತ್ತಿದೆ.

ರೇಸ್‌ಕೋರ್ಸ್‌ ರಸ್ತೆ, ಕುಮಾರಸ್ವಾಮಿ ರಸ್ತೆ ಹಾಗೂ ಶೇಷಾದ್ರಿಪುರ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ

ರೇಸ್‌ಕೋರ್ಸ್‌ ರಸ್ತೆ, ಕುಮಾರಸ್ವಾಮಿ ರಸ್ತೆ ಹಾಗೂ ಶೇಷಾದ್ರಿಪುರ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ

-ಕಾರ್ಯಾದೇಶ ಜೂನ್ 30,2017

-ಕಾಮಗಾರಿ ಅವಧಿ 18 ತಿಂಗಳು 2019ರ ಮಾರ್ಚ್ ಅಂತ್ಯಕ್ಕೆ

-ಯೋಜನಾ ವೆಚ್ಚ 60 ಕೋಟಿ ರೂ.

ಶಿವಾನಂದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿದ್ಯಾವಾಗ?

ಶಿವಾನಂದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿದ್ಯಾವಾಗ?

ಶಿವಾನಂದವೃತ್ತ ಮೇಲ್ಸೇತುವೆ ಕಾಮಗಾರಿಗೆ 2017ರ ಜೂನ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.18 ತಿಂಗಳೊಳಗೆ ಪೂರ್ಣಗೊಳ್ಳಬೇಕೆಂದು ಕರಾರು ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಬರೋಬ್ಬರಿ 25 ತಿಂಗಳು ಕಳೆದಿವೆ. ಈರೆಗೆ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಇನ್ನೊಂದು ಬಾರಿ ರಸ್ತೆ ಮಾರ್ಗ ಬಂದಾಗುವ ಸಾಧ್ಯತೆ

ಇನ್ನೊಂದು ಬಾರಿ ರಸ್ತೆ ಮಾರ್ಗ ಬಂದಾಗುವ ಸಾಧ್ಯತೆ

ಕಾಮಗಾರಿ ರಸ್ತೆಯಲ್ಲಿನ ಜಲಮಂಡಳಿ ಮತ್ತು ವಿದ್ಯುತ್ ಸಂಪರ್ಕಗಳನ್ನು ಸ್ಥಳಾಂತರಿಸುವುದು ಗುತ್ತಿಗೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿ ಜಲಮಂಡಳಿಯ ಎರಡು ಕೊಳವೆ ಮಾರ್ಗಗಳನ್ನು ಸ್ಥಳಾಂತರಿಸಲಾಗಿದೆ. ಮತ್ತೊಂದು ಮಾರ್ಗದಲ್ಲಿ ಕೊಳವೆ ಮಾರ್ಗ ಸ್ಥಳಾಂತರ ಮಾಡಬೇಕಿದೆ. ಹಾಗಾಗಿ ಮತ್ತೆ ಆ ರಸ್ತೆಯನ್ನು ಬಂದ್ ಮಾಡಬೇಕಾಗುತ್ತದೆ. ಆಗ ಶಿವಾನಂದ ವೃತ್ತ ಸುತ್ತಲಿನ ಮರ್ಗವಷ್ಟೇ ಅಲ್ಲದೆ ಮಲ್ಲೇಶ್ವರ, ಆನಂದರಾವ್ ವೃತ್ತ ಸೇರಿ ಇನ್ನಿತರೆ ಕಡೆಗಳಲ್ಲೂ ಸಂಚಾರ ದಟ್ಟಣೆ ವಿಪರೀತವಾಗಲಿದೆ.

ಮೇಲ್ಸೇತುವೆಯ ಉದ್ದ ಹೆಚ್ಚಳ

ಮೇಲ್ಸೇತುವೆಯ ಉದ್ದ ಹೆಚ್ಚಳ

ಮೂಲ ಯೋಜನೆಯಲ್ಲಿ ಮೇಲ್ಸೇತುವೆ ಉದ್ದವನ್ನು 326 ಮೀ.ಗೆ ನಿಗದಿ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಒಮದೂವರೆ ವರ್ಷದ ನಂತರ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ರೇಸ್‌ಕೋರ್ಸ್ ರಸ್ತೆ ಕಡೆಯಲ್ಲಿ ಮೇಲ್ಸೇತುವೆ ಉದ್ದವನ್ನು ಹೆಚ್ಚಳ ಮಾಡಲಾಯಿತು. ಇದರಿಂದ ಮೇಲ್ಸೇತುವೆ ಉದ್ದ 493 ಮೀ.ಗೆ ಏರಿಕೆಯಾಯಿತು. ಪರಿಣಾಮ ಮೇಲ್ಸೇತುವೆ ಕಂಬಗಳ ಸಂಖ್ಯೆ 6-17ಕ್ಕೆ ಏರಿಕೆಯಾದಂತಾಗಿದೆ.

English summary
Shivananda Circle Steel Bridge Construction Work started 2 years Ago. If you are traveling from Shivajinagar to Malleswara, Yelahanka, Hebbal to Majestic, buses must be on the same route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X