653ನೇ ಸೋಂಕಿತನಿಂದ ನಿಲ್ಲದ ತಲೆನೋವು, ಪಾದರಾಯನಪುರ ಹಿಂದಿಕ್ಕುವತ್ತ ಶಿವಾಜಿನಗರ?

ಬೆಂಗಳೂರು, ಮೇ 18: ಸಿಲಿಕಾನ್‌ ಸಿಟಿಗೆ 653ನೇ ಸೋಂಕಿತ ಹೆಚ್ಚು ತಲೆನೋವಾಗಿ ಪರಿಣಮಿಸಿದ್ದಾನೆ. ಶಿವಾಜಿನಗರದಲ್ಲಿ ಪತ್ತೆಯಾದ ಈ ಸೂಪರ್ ಸ್ಪ್ರೆಡರ್‌ನಿಂದ 44 ಜನರಿಗೆ ಸೋಂಕು ತಗುಲಿದೆ.

ಈ ಮೂಲಕ ಶಿವಾಜಿನಗರ ಬೆಂಗಳೂರಿನಲ್ಲಿ ಅತಿ ದೊಡ್ಡ ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ ಆಗಲಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಪಾದರಾಯನಪುರ ಮತ್ತು ಹೊಂಗಸಂದ್ರದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿದೆ. ಇದೀಗ, ಶಿವಾಜಿನಗರ ಈ ಎರಡು ಹಾಟ್‌ಸ್ಪಾಟ್‌ಗಳನ್ನು ಹಿಂದಿಕ್ಕುವತ್ತಾ ಸಾಗಿದೆ.

ಪಾದರಾಯನಪುರದಲ್ಲಿ ಈವರೆಗೂ ಒಟ್ಟು 54 ಪ್ರಕರಣ ದಾಖಲಾಗಿದೆ. ಹೊಂಗಸಂದ್ರದಲ್ಲಿ 38 ಕೇಸ್‌ಗಳಿದ್ದವು. ಸದ್ಯ ಶಿವಾಜಿನಗರದಲ್ಲಿ 44 ಕೇಸ್ ದಾಖಲಾಗಿದೆ. 653ನೇ ಸೋಂಕಿತನಿಂದ 44 ಜನಕ್ಕೆ ವೈರಸ್ ಅಂಟಿಕೊಂಡಿದೆ.

Shivaji Nagara Is Big Hotspot In Bengaluru

ಬೆಂಗಳೂರಿನ ಕಂಟೈನ್‌ಮೆಂಟ್‌ ಜೋನ್‌ಗಳ ಪಟ್ಟಿಯಲ್ಲಿ ಶಿವಾಜಿನಗರ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ ಪಾದರಾಯನಪುರ, ಎರಡನೇ ಸ್ಥಾನದಲ್ಲಿ ಶಿವಾಜಿನಗರ ಹಾಗೂ ಮೂರನೇ ಸ್ಥಾನದಲ್ಲಿ ಹೊಂಗಸಂದ್ರ ವಾರ್ಡ್ ಇದೆ.

ಇನ್ನು ಶಿವಾಜಿನಗರದಲ್ಲಿ ಹೊಸದಾಗಿ 15 ಕೇಸ್‌ ಪತ್ತೆಯಾಗಿರುವ ಹಿನ್ನೆಲೆ ಕ್ವಾರಂಟೈನ್‌ ವಾರ್ಡ್‌ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 15 ಜನರಿಗಾಗಿ 15 ಅಂಬುಲೆನ್ಸ್‌ನಲ್ಲಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+