• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದರ ಇಳಿಕೆಯಿಂದ ಶತಾಬ್ಧಿ ರೈಲಿನಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

|

ಬೆಂಗಳೂರು, ಮಾರ್ಚ್ 22: ಶತಾಬ್ಧಿಯ ಅನುಭೂತಿ ರೈಲು ಸೇರಿದಂತೆ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಇತರೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಆದ್ದರಿಂದ ನಿರೀಕ್ಷಿತ ಆದಾಯ ಲಭ್ಯವಾಗುತ್ತಿರಲಿಲ್ಲ.

ಹಾಗಾಗಿ ನೈಋತ್ಯ ವಿಭಾಗೀಯ ರೈಲ್ವೆ ಶತಾಬ್ದಿ ದರ ಇಳಿಕೆ ಅಸ್ತ್ರ ಪ್ರಯೋಗಿಸಿ, ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. 2016ರ ಡಿಸೆಂಬರ್ ತಿಂಗಳಲ್ಲಿ ವಿವಿಧ ಎಕ್ಸ್ ಪ್ರೆಸ್ ರೈಲುಗಳಲ್ಲಿ ಎಸಿ ಚೇರ್ ಕಾರ್ ದರ ಇಳಿಕೆ ಮಾಡಲಾಗಿತ್ತು. ಶತಾಬ್ಧಿ ರೈಲಿನಲ್ಲಿ ಎಸಿ ಕೋಚ್ ನಲ್ಲಿ ಪ್ರಯಾಣಿಕರ ಸಂಚಾರದಲ್ಲಿ ಹನ್ನೊಂದು ತಿಂಗಳ ನಂತರ ಆಗಿರುವ ಬದಲಾವಣೆ ಕುರಿತು ಇಲಾಖೆ ಅಧ್ಯಯನ ನಡೆಸಿದ್ದು, ಈ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಶೇ.63ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.

ಪ್ರಯಾಣಿಕರಿಂದ 'ಅನುಭೂತಿ' ಕಾಣದ ಶತಾಬ್ಧಿ ರೈಲು

ಅಷ್ಟೇ ಅಲ್ಲ, ಇದರಿಂದ ಆದಾಯವೂ ಸಹ ಶೇ.17ರಷ್ಟು ಏರಿಕೆಯಾಗಿದೆ. ದೇಶಾದ್ಯಂತ ಸಂಚರಿಸುವ ಶತಾಬ್ಧಿ ಎಕ್ಸ್ ಪ್ರೆಸ್ ಸೇರಿದಂತೆ ರಾತ್ರಿ ವೇಳೆ ಸಂಚರಿಸುವ ಕಾವೇರಿ, ಗೋಲ್ ಗುಂಬಜ್, ಹಂಪಿ, ಟುಟುಕೋರಿನ್ ಎಕ್ಸ್ ಪ್ರೆಸ್ ರೈಲುಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು.

 Shatabdi train passengers increase 78 percent

ಪ್ರಮುಖವಾಗಿ ಈ ರೈಲುಗಳ ಚೇರ್ ಕಾರ್ ಎಸಿ ಬೋಗಿಗಳಲ್ಲಿ ಪ್ರಯಾಣಿಕರ ಕೊರತೆಯಿತ್ತು. ಈ ಹಿನ್ನೆಲೆಯಲ್ಲಿ ಶತಾಬ್ಧಿ ಸೇರಿದಂತೆ ಇತರೆ ನಾಲ್ಕೈದು ಎಕ್ಸ್ ಪ್ರೆಸ್ ರೈಲುಗಳಲ್ಲಿ ಇವುಗಳ ದರವನ್ನು ಇಳಿಕೆ ಮಾಡಲಾಗಿದೆ.

ಶತಾಬ್ಧಿ ರೈಲಿನ ಚೇರ್ ಕಾರ್ ಎಸಿ ಬೋಗಿಯಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಟಿಕೆಟ್ ದರವನ್ನು 490 ರೂ ನಿಂದ 305ರೂ.ಗೆ ಇಳಿಸಲಾಗಿದೆ. ಇದು ವೋಲ್ವೋ ಬಸ್ ದರ (350ರೂ.)ಗಿಂತ ಕಡಿಮೆ ಇದೆ. ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲೂ 330ರೂಗಿಂತ ಹೆಚ್ಚು ದರ ವೋಲ್ವೊ ಬಸ್ಸಿನಲ್ಲಿ ಸಿಗುವಂತೆ ಹವಾನಿಯಂತ್ರಿತ ವಾತಾವರಣದಲ್ಲಿ ಪ್ರಯಾಣ ಸೌಲಭ್ಯ ರೈಲಿನಲ್ಲಿ ಕಡಿಮೆ ದರದಲ್ಲಿ ಸಿಗುತ್ತಿರುವುದರಿಂದ ಪ್ರಯಾಣಿಕರನ್ನು ಸೆಳೆಯಲು ಸಾಧ್ಯವಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಎಸಿ ಕೋಚ್ ನಲ್ಲಿ ಪ್ರಯಾಣಿಕರ ಸಂಖ್ಯೆ: 2016 ಜನವರಿಯಿಂದ ನವೆಂಬರ್ ವರೆಗೆ 47,927ಪ್ರಯಾಣಿಕರು ಹಾಗೂ 2017ರ ಜನವರಿಯಿಂದ ನವೆಂಬರ್ ವರೆಗೆ 77,938 ಪ್ರಯಾಣಿಕರು ಸಂಚರಿಸಿದ್ದಾರೆ. 2016ರರಲ್ಲಿ 2.12ಕೋಟಿ ರೂ ಹಾಗೂ 2017ರಲ್ಲಿ 2.48ಕೋಟಿ ರೂ. ಆದಾಯ ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
After reducing fare in Shatabdi express between Bengaluru- Mysuru and other express train AC coach travelling fare, 78 percent of passengers increased and as well 17 percent of income.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more