ಡಿ.28ರಿಂದ ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ಬಸವ ಕೇಂದ್ರವು ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವವನ್ನು ವಿಜಯನಗರದಲ್ಲಿ ಹಮ್ಮಿಕೊಂಡಿದೆ.

ಶರಣ ಸಂಸ್ಕೃತಿ ಉತ್ಸವವು ಡಿಸೆಂಬರ್ 28 ರಿಂದ 30ರವರೆಗೆ ವಿಜಯನಗರದ ಬಸವೇಶ್ವರನಗರ ಸುಜ್ಞಾನ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗ ಪ್ರತಿದಿನ ಸಂಜೆ 6.30ಕ್ಕೆ ಚಿಂತನಗೋಷ್ಠಿ ನಡೆಯಲಿದೆ. ಜಮುರಾ ಕಲಾತಂಡದಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ.

28ರಂದು ಶುಕ್ರವಾರ ಸಂಜೆ 6.30ಕ್ಕೆ ಬಸವಾದಿ ಶರಣರ ಜೀವಪರ ಕಾಳಜಿ ವಿಷಯ ಕುರಿತು ಚಿಂತನಾ ಗೋಷ್ಠಿ ನಡೆಯಲಿದೆ. ಮುರುಘಾಮಠದ ಶೂನ್ಯಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆವಹಿಸಲಿದ್ದಾರೆ.

Sharana samskrithi utsav will start from December 28

ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಚಿವ ಎಚ್‌ಡಿ ರೇವಣ್ಣ, ಶಾಸಕ ವಿ ಸೋಮಣ್ಣ ಆಗಮಿಸಲಿದ್ದಾರೆ. ಡಿಸೆಂಬರ್ 29ರಂದು ಬದುಕು ಮತ್ತು ಧನ್ಯತೆಯ ಮಾರ್ಗ ಕುರಿತು ಚಿಂತನ ಗೋಷ್ಠಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಸಚಿವ ಡಿಕೆ ಶಿವಕುಮಾರ್ , ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಆಗಮಿಸಲಿದ್ದಾರೆ.

ಡಿಸೆಂಬರ್ 30ರಂದು ಯುವ ಜನಾಂಗ ಮತ್ತು ಬಹುಮುಖಿ ಕೌಶನ್ಯಾಭಿವೃದ್ಧಿ ವಿಷಯದ ಬಗ್ಗೆ ಚಿಂತನಾಗೋಷ್ಠಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+