ನೀನು 27 ನೇಯವಳು, 26 ಮಂದಿಗೆ ನ್ಯಾಯ ಕೊಡಿಸಿದ ನಂತರ ನಿನಗೆ ಮದುವೆ !
ಬೆಂಗಳೂರು, ಡಿಸೆಂಬರ್ 25: ಅಮ್ಮೀ... ನೀನು ನನ್ನ ಮಗನಿಗೆ 27 ನೇಯವಳು ! ಇಪ್ಪತ್ತಾರು ಜನಕ್ಕೆ ನ್ಯಾಯ ಕೊಡಿಸಿದ ನಂತರ ಅಮೇಲೆ ನಿನಗೆ ಅವನ ಜತೆ ಮದುವೆ ಮಾಡಿಸುತ್ತೇನೆ ಈಗ ಜಾಗ ಖಾಲಿ ಮಾಡು !
ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಯುವಕನ ಮಾತು ನಂಬಿ ಬೆಂಗಳೂರಿಗೆ ಬಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಬ್ಲಾಕ್ ಮೇಲ್ ಗೂ ಒಳಗಾಗಿ ಹಣ ಕಳೆದುಕೊಳ್ಳುತ್ತಾಳೆ. ಮೋಸ ಮಾಡಿದ ಹುಡುಗನ ಬಗ್ಗೆ ಪಂಚಾಯಿತಿ ಮಾಡಿಸುತ್ತಾಳೆ. ಕೊನೆಯದಾಗಿ ನ್ಯಾಯ ಪಡೆಯಲೆಂದು ಮೋಸ ಮಾಡಿದ ಯುವಕನ ಮನೆ ಬಾಗಿಲಿಗೆ ಹೋದಾಗ ಅವರ ತಂದೆ ಕೊಟ್ಟ ಉತ್ತರವಿದು. ನನ್ನ ಮಗ ಈಗಾಗಲೇ 26 ಜನ ಹುಡುಗಿಯರ ಬದುಕು ಹಾಳು ಮಾಡಿದ್ದಾನೆ. ಅವರಿಗೆಲ್ಲಾ ನ್ಯಾಯ ಕೊಡಿಸಿದ ನಂತರ ನಿನಗೆ ಮದುವೆ ಮಾಡಿಸುತ್ತೇನೆ ಎಂದು ಉತ್ತರ ಕೊಟ್ಟಿದ್ದಾರೆ. ಇದರಿಂದ ಬೇಸತ್ತ ಯುವತಿ ಪೊಲೀಸ್ ಮೆಟ್ಟಿಲೇರಿ ಮೋಸ ಮಡಿದ್ದವನನ್ನ ಜೈಲಿಗೆ ಕಳಿಸಿದ್ದಾಳೆ.

ಕೇಕ್ ಕೊಟ್ಟು ಮತ್ತು ಬರೆಸಿದ್ದ :
ಪ್ರೇಮಾ ( ಹೆಸರು ಬದಲಿಸಲಾಗಿದೆ) ತನ್ನ ಸೋದರ ಮಾವನ ಮಗಳ ಹುಟ್ಟುಹಬ್ಬಕ್ಕೆ ಹೋಗಿದ್ದಳು. ಇದೇ ಪಾರ್ಟಿಗೆ ಬಂದಿದ್ದ ಮಳವಳ್ಳಿ ತಾಲೂಕಿನ ದಬ್ಬೇಹಳ್ಳಿಯ ಸಾಗರಗೌಡ ಪರಿಚಯವಾಗಿದ್ದ. ಅಂದಿನಿಂದ ಮೊಬೈಲ್ ಗೆ ಗುಡ್ ಮಾರ್ನಿಂಗ್ ಸಂದೇಶ ಕಳಿಸುತ್ತಿದ್ದರೂ ಪ್ರೇಮಾ ತಲೆ ಕೆಡಿಸಿಕೊಂಡಿರಲಿಲ್ಲ. 2019 ಆಗಸ್ಟ್ ನಲ್ಲಿ ಕೆಲಸ ಕುಡುಕುತ್ತಿದ್ದ ಪ್ರೇಮಾ ಅವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಮೈಸೂರು ರಸ್ತೆಯ ನಾಯಂಡಹಳ್ಳಿಗೆ ರೆಸೂಮ್ ಸಮೇತ ಬನ್ನಿ ಎಂದು ಹೇಳಿದ್ದ. ಅದರಂತೆ ನಾಯಂಡಹಳ್ಳಿ ಸರ್ಕಲ್ ಗೆ ಬಂದ ಕೂಡಲೇ ಕೇಕ್ ಕೊಟ್ಟಿದ್ದ ಸಾಗರಗೌಡ. ನನ್ನ ಅಕ್ಕನ ಮಗನ ಹುಟ್ಟುಹಬ್ಬವಿತ್ತ ಕೇಕ್ ತೆಗೆದುಕೊಳ್ಳಿ ಎಂದು ಕೊಟ್ಟಿದ್ದಾನೆ. ಅದನ್ನು ತಿಂದ ಪ್ರೇಮಾಗೆ ತಲೆ ಸುತ್ತು ಬಂದಿತ್ತು. ಇಲ್ಲಿಯೇ ನಮ್ಮ ಅಕ್ಕನ ಮನೆ ಇದೆ. ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ. ನಮ್ಮ ಅಕ್ಕ ಕೂಡ ಇದ್ದು, ನಿನಗೆ ಯಾವುದೇ ಸಮಸ್ಯೆ ಆಗಲ್ಲ, ಅಮೇಲೆ ಕೆಲಸಕ್ಕೆ ಸೇರಿಸುತ್ತೇನೆ ಎಂದು ನಂಬಿಸಿದ್ದಾನೆ.

ಮೊದಲ ದೌರ್ಜನ್ಯ:
ಮತ್ತು ಬರುವ ಕೇಕ್ ತಿನ್ನಿಸಿ ನಾಯಂಡಹಳ್ಳಿಯಲ್ಲಿರುವ ಅಕ್ಕನ ಮನೆಗೆ ಕರೆದುಕೊಂಡು ಹೋದ ಯುವತಿ ಮೇಲೆ ಸಾಗರಗೌಡ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ವಿಡಿಯೋ ಮಾಡಿಕೊಂಡಿದ್ದಾನೆ. ಪ್ರಜ್ಞೆ ಬಂದು ಯುವತಿ ಮನೆಗೆ ಹೋಗುವಷ್ಟರಲ್ಲಿ ಮೊಬೈಲ್ ಗೆ ಖಾಸಗಿ ವಿಡಿಯೋ ಹಾಗೂ ಪೋಟೋ ಕಳುಹಿಸಿ, ನೀನು ಈ ವಿಚಾರ ಯಾರಿಗಾದರೂ ತಿಳಿಸಿದರೆ, ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಿಡುತ್ತೇನೆ ಎಂದು ಹೆದರಿಸಿದ್ದಾನೆ. ಇದಕ್ಕೆ ಭಯಬಿದ್ದ ಸಂತ್ರಸ್ತ ಯುವತಿ ಯಾರ ಬಳಿಯೂ ಹೇಳಿಕೊಂಡಿಲ್ಲ.

ಬ್ಲಾಕ್ ಮೇಲ್ :
ಇನ್ನು ಮುಂದೆ ನಿನ್ನ ಸಹಜವಾಸಕ್ಕೆ ಬರಲ್ಲ. ಒಂದು ಲಕ್ಷ ರೂಪಾಯಿ ಕೊಡು ಎಂದು ಯುವತಿಗೆ ಪೀಡಿಸಿದ್ದಾನೆ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದು, ಸಂತ್ರಸ್ತ ಯುವತಿ ಒಂದು ಲಕ್ಷ ರೂಪಾಯಿ ಕೊಟ್ಟಿದ್ದಾಳೆ. ಇದಾದ ಬಳಿಕ ನೀನು ಬೇರೆ ಯಾರನ್ನಾದರೂ ಮದುವೆಯಾದರೆ ಅವನಿಗೆ ಈ ವಿಡಿಯೋ ಮತ್ತು ಪೋಟೋ ಕಳಿಸುತ್ತೇನೆ ಎಂದು ಹೇಳಿ ಸಂತ್ರಸ್ತ ಯುವತಿ ಎಟಿಎಂ ಕಾರ್ಡ್ ಪಡೆದು ಹಣ ಪೀಕಿದ್ದಾನೆ.

ಪ್ರೀತಿ ನಾಟಕ:
ಉಂಡು ಹೋದ, ಕೊಂಡು ಹೋಗಿದ್ದ ಸಾಗರಗೌಡ ಎಂಬ ಉಂಡಾಡಿಗುಂಡ ಪ್ರೀತಿ ನಾಟಕವಾಡಿದ್ದ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಯುವತಿ ಕನಿಷ್ಠ ಪಕ್ಷ ಇವನಿಂದಲೇ ಜೀವನ ಕಟ್ಟಿಕೊಳ್ಳುತ್ತೇನೆ ಎಂದು ಭಾವಿಸಿ ನಂಬಿದ್ದಳು. ಮತ್ತೆ ಕೆಂಗಲ್ ಗೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್ ಮಾಡಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮದುವೆಯಾಗುವಂತೆ ಕೇಳಿದಾಗ ಕೈ ಎತ್ತಿದ್ದಾನೆ.

ಪಂಚಾಯಿತಿ:
ಸಾಗರಗೌಡ ಮಾಡಿದ ಮೋಸದ ಬಗ್ಗೆ ಆತನ ಸ್ವಂತ ಊರಾದ ಮಳವಳ್ಳಿಯ ದಬ್ಬೇಹಳ್ಳಿಯ ಜನರಲ್ಲಿ ಹೇಳಿದ್ದರು. ಹಿರಿಯರು ಪಂಚಾಯತಿ ಮಾಡಿ, ಮುಂದಿನ ಹದಿನೈದು ದಿನದಲ್ಲಿ ಸಾಗರಗೌಡ ಸಂತ್ರಸ್ತ ಯುವತಿಗೆ ಬಾಳು ಕೊಡುವ ಬಗ್ಗೆ ತೀರ್ಮಾನ ಮಾಡಿದ್ದರು. ಆದರೆ ಪಂಚಾಯಿತಿ ತೀರ್ಮಾನದ ಮಾತನ್ನು ಉಲ್ಲಂಘಿಸಿ ಮದುವೆಯಾಗಿರಲಿಲ್ಲ. ಮದುವೆಯಾಗುವುದಾಗಿ ಹೇಳಿ ಮೋಸ ಮಾಡುವ ಬಗ್ಗೆ ಸಾಗರಗೌಡನ ತಂದೆ ರಾಮೇಗೌಡರ ಬಳಿ ಕೇಳಿದಾಗ, ಮೇಲಿನಂತೆ ಉಡಾಫೆ ಉತ್ತರ ಹೇಳಿ ಕಳಿಸಿದ್ದರು. ನನ್ನ ಮಗ ಇಪ್ಪತ್ತಾರು ಹುಡುಗಿಯರ ಬಳಿ ಹೋಗಿದ್ದಾನೆ. ಅವರೆಲ್ಲರಿಗೂ ನ್ಯಾಯ ಕೊಡಿಸಿದ ಮೇಲೆ ನೀನು 27 ನೇಯವಳು. ನಿನಗೆ ಅಮೇಲೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ ವಾಪಸು ಕಳಿಸಿದ್ದ. ಅಲ್ಲದೇ ನನ್ನ ಮಗನ ತಂಟೆಗೆ ಬಾರದಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಯುವತಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ಸಾಗರಗೌಡ ವಿರುದ್ಧ ದೂರು ನೀಡಿದ್ದಾಳೆ.
Recommended Video

ಜೈಲು:
ಯುವತಿ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಚಂದ್ರಾ ಬಡಾವಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಂಡ್ಯ ಮೂಲದ ದಬ್ಬೇಹಳ್ಳಿಯ ಸಾಗರ್ ಗೌಡ ಬೆಂಗಳೂರಿನಲ್ಲಿ ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಯವತಿಗೆ ಬ್ಲಾಕ್ ಮೇಲ್ ಮಾಡಿದ್ದವ ಈಗ ಜೈಲು ಸೇರಿದ್ದಾನೆ. ಯುವತಿ ಮೇಲೆ ಮತ್ತು ಬರುವ ಕೇಕ್ ತಿನ್ನಿಸಿ ದೌರ್ಜನ್ಯ ಎಸಗಿ ಬ್ಲಾಕ್ ಮೇಲ್ ಮಾಡಿದ ಕೂಡಲೇ ದೂರು ಕೊಡಬಹುದಿತ್ತು. ಆನಂತರ ಆಕೆಯ ಸಂಪರ್ಕದಲ್ಲಿರುವುದು, ಜತೆಗೆ ದೇವಸ್ಥಾನಕ್ಕೆ ಹೋಗಿರುವುದು ಕೆಲವು ಅನುಮಾನ ಹುಟ್ಟು ಹಾಕಿದೆ. ಇಬ್ಬರೂ ಅನೋನ್ಯವಾಗಿರುವ ಭಾವಚಿತ್ರಗಳು ಈ ಅನುಮಾನವನ್ನು ದಟ್ಟವಾಗಿಸಿದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications