ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ

ಬೆಂಗಳೂರು, ಮಾರ್ಚ್. 23 : ನಗರದ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡ ರಾತ್ರಿ ಮತ್ತೊಂದು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ಬುಧವಾರ ರಾತ್ರಿ ಎಂ.ಜಿ ರಸ್ತೆಯ ಹೋಟೆಲ್ ವೊಂದರಲ್ಲಿ ಪಾರ್ಟಿ ಮುಗಿಸಿಕೊಂಡು ಯುವತಿ ಊಬರ್ ಕ್ಯಾಬ್ ಗಾಗಿ ಕಾಯುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಮೂವರು ದುಷ್ಕರ್ಮಿಗಳು ಆಕೆಯನ್ನು ಹಿಡಿದು ಎಳೆದಾಡಿ ದೌರ್ಜನ್ಯ ನಡೆಸಿದ್ದಾರೆ[ಬೆಂಗಳೂರಲ್ಲಿ ಕಾರಲ್ಲಿ ಓಡಾಡೋದೂ ಅಪಾಯ!]

Sexual harassment on woman in halasuru police station bengaluru

ಅಷ್ಟೇ ಅಲ್ಲದೆ ಯುವತಿಯನ್ನು ರಸ್ತೆಯಲ್ಲಿ ಬೀಳಿಸಿ ಬಟ್ಟೆಯನ್ನು ಎಳೆದಾಡಿದ್ದಾರೆ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದಾಗ ಬ್ಯಾಗ್ ನಲ್ಲಿದ್ದ ಐಫೋನ್ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.

ರಸ್ತೆಯಲ್ಲಿ ರೋಧಿಸುತ್ತಾ ನಿಂತಿದ್ದ ಯುವತಿಯನ್ನು ಊಬರ್ ಚಾಲಕ ಹತ್ತಿರದ ಹಲಸೂರು ಪೊಲೀಸ್ ಠಾಣೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ.

ಪದೇ-ಪದೇ ಸಿಲಿಕಾನ್ ಸಿಟಿಯಲ್ಲಿ ಇಂತಹ ದೌರ್ಜನ್ಯಗಳು ನಡೆಯುತ್ತಿದ್ದು, ಬೆಂಗಳೂರು ಮಹಿಳೆಯರಿಗೆ ಏಷ್ಟು ಸೇಫ್ ಎಂಬ ಪ್ರಶ್ನೆ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+