ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗುವಾಗ ತಾಯಿಯ ಕೈಗೆ ಸಿಕ್ಕಿಬಿದ್ದ ಆರೋಪಿ
ಬೆಂಗಳೂರು, ಡಿಸೆಂಬರ್ 26: ಎರಡೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಿಗಿದ ಆರೋಪಿಯನ್ನು ಪೋಕ್ಸೊ ಪ್ರಕರಣದಡಿ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಳ್ಳಾಲಸಂದ್ರ ನಿವಾಸಿ ಮಲ್ಲಪ್ಪ(52) ಬಂಧಿತ ಆರೋಪಿ. ಮೂಲತಃ ಆಂಧ್ರಪ್ರದೇಶದ ಮಲ್ಲಪ್ಪ ಎರಡು ವರ್ಷದ ಹಿಂದೆ ಬೆಂಗಳೂರಿಗ ಬಂದಿದ್ದ. ಕುಟುಂಬದ ಜತೆ ಅಳ್ಳಾಲಸಂದ್ರದಲ್ಲಿ ನೆಲೆಸಿದ್ದಾನೆ. ಆರೋಪಿಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.
ಮಂಗಳವಾರ ಬೆಳಗ್ಗೆ 9ರ ಸುಮಾರಿಗೆ ಮಗು ಮನೆ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಮಗುವನ್ನು ಕರೆದೊಯ್ದಿದ್ದ.

ಬೆಂಗಳೂರಲ್ಲಿ ನಿತ್ಯ ಇಂಥಹ ನೂರಾರು ಘಟನೆಗಳು ನಡೆಯುತ್ತಿದ್ದು, ಕೇವಲ ಒಣದೆರೆಡು ಪ್ರಕರಣಗಳು ಮಾತ್ರ ಹೊರಬರುತ್ತವೆ. ಕೆಲವು ಪೋಷಕರು ಆರೋಪಿಗಳ ಮೇಲಿನ ಭಯದಿಂದ ದೂರು ನೀಡಲು ಕೂಡ ಹಿಂಜರಿಯುತ್ತಾರೆ.
ಮಗುವನ್ನು ಹುಡುಕಿಕೊಂಡು ತಾಯಿ ಹೊರಗೆ ಬಂದಾಗ ಆ ವೇಳೆ ಆರೋಪಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ ತಾಯಿ ಕೈಗೆ ಸಿಕ್ಕಿಬಿದ್ದಿದ್ದು, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಸಂಬಂಧ ಮಗುವಿನ ಪೋಷಕರು ದೂರು ನೀಡಿದ್ದಾರೆ.











Click it and Unblock the Notifications