ಮಗುವಿನ ಮೇಲೆ ಅತ್ಯಾಚಾರ ಮಾಡಿದವನು ಗುಂಡಣ್ಣ?

ಬೆಂಗಳೂರು,ಅ.23: ಶಾಲಾ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಪೂರ್ಣ ವರದಿ ನೀಡಲು ಶನಿವಾರ ತನಕ ಕಾಲಾವಕಾಶ ಬೇಕು ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ. ಈ ನಡುವೆ ಶಾಲೆಯ ಬೋಧಕೇತರ ಸಿಬ್ಬಂದಿಯೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ಎಂಟಿ ಬಡಾವಣೆ ಬಳಿ ಇರುವ ಆರ್ಕಿಡ್ಸ್ ಶಾಲೆಯಲ್ಲಿ ಬಾಲಕಿ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಕೆಜೆ ಜಾರ್ಜ್ ಅವರು, ಶಾಲೆಯಲ್ಲಿ ಪೂರ್ಣ ತನಿಖೆ ಕೈಗೊಂಡು, ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದೇನೆ, 24 ಗಂಟೆಯೊಳಗೆ ತಕ್ಷಣದ ವರದಿ ಬರಲಿದೆ ಎಂದಿದ್ದಾರೆ.[ಪ್ರಕರಣದ ಬಗ್ಗೆ ಎಂಎನ್ ರೆಡ್ಡಿ ಹೇಳಿದ್ದೇನು?]

Sexual assault of nursery student confirmed, says Bangalore police chief

ಯಾರು ಆ ಅಂಕಲ್? : ಶಾಲಾ ಸಿಬ್ಬಂದಿಯಿಂದಲೇ ಈ ದುಷ್ಕೃತ್ಯ ನಡೆದಿರುವುದು ಸಾಬೀತಾಗಿದೆ. ಯಾರು ಆರೋಪಿ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ, ಮಗು ಹೇಳುತ್ತಿದ್ದ ಆ ಅಂಕಲ್ ಯಾರು ಎಂಬುದು ಈಗ ತಿಳಿದಿದೆ. [ಆರ್ಕಿಡ್ಸ್ ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಎಲ್ಲಿ?]

ನಮ್ಮ ತನಿಖಾಧಿಕಾರಿಗಳು ತೋರಿಸಿದ 13-14 ಫೋಟೋಗಳಲ್ಲಿ ಗುಂಡಣ್ಣ ಎಂಬುವರ ಫೋಟೋ ನೋಡುತ್ತಿದ್ದಂತೆ ಇದೇ ಅಂಕಲ್ ನನಗೆ ಹರ್ಟ್ ಮಾಡಿದ್ದು ಎಂದು ಬಾಲಕಿ ಗುರುತಿಸಿದ್ದಾಳೆ. ಈಗ ಗುಂಡಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಎಂಎನ್ ರೆಡ್ಡಿ ಹೇಳಿದ್ದಾರೆ.

ಈ ನಡುವೆ ಶಾಲಾ ಆಡಳಿತ ಮಂಡಳಿ ಜೊತೆ ಪೋಷಕರ ಸಭೆ ಮುಂದೂಡಲಾಗಿದೆ. ಪೊಲೀಸರು ನೀಡಿರುವ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಆಡಳಿತ ಮಂಡಳಿಗೆ ಪೋಷಕರು ಒತ್ತಾಯಿಸಿದ್ದಾರೆ. ಶಾಲೆಯ ಸಿಇಒ ಡಿಕೋಸ್ತಾ, ಹೈದರಾಬಾದ್ ಮೂಲದ ಶಾಲಾ ಮಾಲೀಕ ಕೆಆರ್ ಕೆ ರೆಡ್ಡಿ ಅವರಿಗೆ ಪೊಲೀಸರು ಸಮನ್ಸ್ ನೀಡಿದ್ದು ಇಬ್ಬರನ್ನು ಗುರುವಾರ ವಿಚಾರಣೆ ಮಾಡುವ ಸಾಧ್ಯತೆಯಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+